
ಲಕ್ಷ್ಮೇಶ್ವರ,ಜ1.: ತಾಲೂಕಿನಲ್ಲಿ ಮುಂಗಾರು ಮತ್ತು ಹಿಂಗಾರು ಹಂಗಾಮಿನಲ್ಲಿ ವಿಪರೀತ ಮಳೆಯಾಗಿದ್ದರಿಂದ ಮುಂಗಾರು ಹಂಗಾಮಿನ ನಂತರ ಬಿತ್ತನೆಯಾಗಿರುವ ಕಡಲೆ ಬೆಳೆಗೆ ಉಂಟಾಗಿರುವ ಸಿಡಿರೋಗ ಹಾಗೂ ಕೆಂಪು ಎಲೆ ಹೊಂದಿರುವ ಜಮೀನುಗಳಿಗೆ ಕೃಷಿ ಇಲಾಖೆಯ ಅಧಿಕಾರಿಗಳು ಭೇಟಿ ನೀಡಿ ಬೆಳೆಗಳ ಪರಿಶೀಲನೆ ನಡೆಸಿದರು.
ಈ ಸಂದರ್ಭದಲ್ಲಿ ಗದಗ ಜಿಲ್ಲಾ ಕೃಷಿ ಇಲಾಖೆಯ ಜಂಟಿ ನಿರ್ದೇಶಕರಾದ ಚೇತನ ಪಾಟೀಲ್ ಮತ್ತು ಉಪ ನಿರ್ದೇಶಕರಾದ ಸ್ಪೂರ್ತಿ ಎಮ್ ಅವರು ಬೆಳೆಗಳನ್ನು ಪರಿಶೀಲಿಸಿ ಬಳಿಕ ರೈತರಿಗೆ ಅವರು ಈ ಬಾರಿ ತಾಲೂಕಿನಲ್ಲಿ ವಿಪರೀತ ಮಳೆಯಾಗಿರುವುದರಿಂದ ತೇವಾಂಶ ಹೆಚ್ಚಳವಾಗಿದ್ದು ಮಣ್ಣಿನಲ್ಲಿರುವ ರಂಜಕ ಮತ್ತು ಪೆÇೀಷಕಾಂಶಗಳು ಬೆಳೆಗಳಿಗೆ ಲಭಿಸದಿರುವುದರಿಂದ ಬೆಳೆಗಳು ಸಿಡಿರೋಗಕ್ಕೆ ಮತ್ತು ಕೆಂಪು ಚುಕ್ಕಿ ಎಲೆ ರೋಗಕ್ಕೆ ತುತ್ತಾಗಿವೆ.
ಈ ನಿಟ್ಟಿನಲ್ಲಿ ರೈತರು ಮುಂಗಾರು ಹಂಗಾಮಿನಲ್ಲಿ ದ್ವಿದಳ ಧಾನ್ಯ ಬೆಳೆದಿದ್ದರೆ ಅದೇ ಜಮೀನಿನಲ್ಲಿ ಪರ್ಯಾಯ ಬೆಳೆಯನ್ನು ಬೆಳೆಯಬೇಕು ಮತ್ತು ರೈತರು ಬೆಳೆಗಳ ಬಿತ್ತನೆಯ ಸಂದರ್ಭದಲ್ಲಿ ಬೀಜೋಪಚಾರ ಮಾಡಬೇಕು ನಂತರ ಬೆಳೆಗಳಿಗೆ ಪೆÇೀಷಕಾಂಶ ನೀಡುವ ನ್ಯಾನೋ ಯೂರಿಯಾ ಮತ್ತು ಟ್ರೈಕೋ ಡಾಮ ಇವುಗಳನ್ನು ದ್ರವ ರೂಪದಲ್ಲಿ ಸೇರಿಸಿ ಸಿಂಪಡಣೆ ಮಾಡಿದಾಗ ಹೂ ಕಟ್ಟುವ ಹಂತದಲ್ಲಿ ಭೂಮಿಯಲ್ಲಿನ ರಂಜಕ ಮತ್ತು ಪೆÇೀಷಕಾಂಶಗಳು ಲಭಿಸುತ್ತವೆ ಎಂದು ಹೇಳಿದರು.
ಈ ಸಂದರ್ಭದಲ್ಲಿ ರೈತರಾದ ಸೋಮನಗೌಡ ಪಾಟೀಲ ವಿರೂಪಾಕ್ಷ ಆದಿ ಬಸವರಾಜ್ ಮೆಣಸಿನಕಾಯಿ ಅವರು ಅಧಿಕಾರಿಗಳಿಗೆ ಎದುರಿಸುತ್ತಿರುವ ಸಮಸ್ಯೆಗಳ ಬಗ್ಗೆ ಗಮನಸೆಳೆದರು.
ಬೀಜ ಮತ್ತು ಗೊಬ್ಬರದ ಅಂಗಡಿಗಳಲ್ಲಿ ರೈತರು ಬೆಳೆಗಳ ಫೆÇೀಟೋ ಸಹಿತ ತೋರಿಸಿ ಕ್ರಿಮಿನಾಶಕ ಕೇಳಿದರೆ ಅತ್ಯಧಿಕ ಬೆಲೆ ಇರುವ ಕ್ರಿಮಿನಾಶಕವನ್ನು ನೀಡುತ್ತಿದ್ದಾರೆ ಆದರೆ ಅದೇ ಕಿರುನಾಶಕವನ್ನು ಕೃಷಿ ವಿಶ್ವವಿದ್ಯಾಲಯದಲ್ಲಿ ತಂದರೆ ಬೆಲೆಯಲ್ಲಿ ಕಡಿಮೆ ಇದೆ ಈ ನಿಟ್ಟಿನಲ್ಲಿ ಅಧಿಕಾರಿಗಳು ಯಾಕೆ ಕ್ರಮ ತೆಗೆದುಕೊಳ್ಳುತ್ತಿಲ್ಲ ಎಂದು ಪ್ರಶ್ನಿಸಿದರು.
ಕ್ರಿಮಿನಾಶಕ ಮತ್ತು ಬೀಜ ಗೊಬ್ಬರ ಅಂಗಡಿಗಳಲ್ಲಿ ಯಾವುದೇ ಅರ್ಹತೆ ಇಲ್ಲದೆ ಮಾರಾಟ ಮಾಡುವ ವ್ಯವಸ್ಥೆ ಇದ್ದು ಇದನ್ನು ಅಧಿಕಾರಿಗಳು ಗಮನಿಸುತ್ತಿಲ್ಲ ಎಂದು ಅವರ ಸಮ್ಮುಖದಲ್ಲಿಯೇ ದೂರಿದರು.
ಈ ಸಂದರ್ಭದಲ್ಲಿ ಕೃಷಿ ಇಲಾಖೆಯ ಸಹಾಯಕ ನಿರ್ದೇಶಕರಾದ ಶಿವಕುಮಾರ್ ಕಾಶಪ್ಪನವರ ರೈತ ಸಂಪರ್ಕ ಕೇಂದ್ರದ ಕೃಷಿ ಸಹಾಯಕ ಅಧಿಕಾರಿ ಚಂದ್ರಶೇಖರ ನರಸಮ್ಮನವರ ಮತ್ತು ಪ್ರಕಾಶ ಹೊನ್ನಪ್ಪನವರ ಇದ್ದರು.

























