ಚನ್ನಮ್ಮನ ಕಿತ್ತೂರು,ಆ29: ತಾಲೂಕಿನ ವಿವಿಧ ಗ್ರಾಮಗಳಲ್ಲಿ ರೈತರ ಸೋಯಾಬೀನ್ ಕ್ಷೇತ್ರಕ್ಕೆ ಸಹಾಯಕ ಕೃಷಿ ನಿರ್ದೇಶಕ ವಿಷಯ ತಜ್ಞ ಸಿ ಐ ಹೂಗಾರ ಹಾಗೂ ಕೃಷಿ ಅಧಿಕಾರಿ ಮಂಜುನಾಥ ಕೆಂಚರಾಹುತ ಭೇಟಿ ನೀಡಿ ಬೆಳೆ ಪರಿಶೀಲಿಸಿದರು.
ತಾಲೂಕಿನ ಹುಣಶಿಕಟ್ಟಿ, ಹಿರೇ ನಂದಿಹಳ್ಳಿ ಗ್ರಾಪಂ ವ್ಯಾಪ್ತಿಯಲ್ಲಿ ಹಾಗೂ ಇನ್ನು ಕೆಲವು ಗ್ರಾಮಗಳಲ್ಲಿ ಸೋಯಾಬೀನ್ ಬೆಳೆಯಲ್ಲಿ ತುಕ್ಕು, ಎಲೆ ಚುಕ್ಕೆ/ಅಂತ್ರಕ್ನೋಸ್ ರೋಗ ಆವರಿಸಿದ್ದು ಕಂಡು ಬಂತು ಇದರಿಂದ ಕಾಳು ಗಟ್ಟಿಯಾಗುವ ಮುನ್ನವೇ ಎಲೆ ಹಳದಿಯಾಗಿ ಉದುರುವದರಿಂದ ಇಳುವರಿ ಕುಂಠಿತವಾಗುತ್ತದೆ.
ಈ ಸಂದರ್ಭದಲ್ಲಿ ರೈತರಾದ ಶಶಿಧರ್ ಕೊಡ್ಲಿ, ಬಸವರಾಜ ಬದ್ರಶೆಟ್ಟೀ, ವಿಶಾಲ್ ಅರಳಿಮರದ, ಕೃಷಿ ಸಿಬ್ಬಂದಿ ಹಾಗೂ ಎಲ್ಲ ರೈತ ಬಾಂಧವರು ಹಾಜರಿದ್ದರು.




























