ಮಳೆಗೆ ಬೆಳೆ ಹಾನಿ

ಗುಳೇದಗುಡ್ಡ,ಜು4: ಪಟ್ಟಣ ಸೇರಿದಂತೆ ತಾಲೂಕಿನಲ್ಲಿ ಸುರಿದ ಭಾರಿ ಮಳೆಯಿಂದ ಪರಿಣಾಮವಾಗಿ ತಾಲೂಕಿನ ಅಂದಾಜು 95 ಹೆಕ್ಟೇರ್‍ನಷ್ಟು ಬೆಳೆ ಹಾನಿಯಾಗಿದೆ ಎಂದು ಅಂದಾಜಿಸಲಾಗಿತ್ತು ಈಗ ಸರ್ವೇ ಕಾರ್ಯ ಮುಗಿದಿದ್ದು 37.42 ಹೆಕ್ಟೇರ್ ಬೆಳೆ ಹಾನಿಯಾದ ಬಗ್ಗೆ ವರದಿಯಾಗಿದೆ ಎಂದು ಕೃಷಿ ಅಧಿಕಾರಿ ಆನಂದ ಗೌಡರ ಹೇಳಿದ್ದಾರೆ.


ತಾಲೂಕಿನ ಕಟಗೇರಿ, ಲಾಯದಗುಂದಿ, ಕೊಟ್ನಳ್ಳಿ, ಸಬ್ಬಲಹುಣಸಿ, ನಾಗರಾಳ ಎಸ್‍ಪಿ, ಅಲ್ಲೂರ ಎಸ್‍ಪಿ, ಹಂಗರಗಿ ಸೇರಿದಂತೆ ತಾಲೂಕಿನ 24 ಹಳ್ಳಿಗಳಲ್ಲಿನ ಗೋವಿನಜೋಳ 16.65 ಹೆಕ್ಟೇರ್, ಸಜ್ಜಿ 0.95 ಹೆಕ್ಟೇರ್, ಹೈಬ್ರೀಡ್ ಜೋಳ 2.7 ಹೆಕ್ಟೇರ್, ಉಳ್ಳಾಗಡ್ಡಿ 4.11ಹೆಕ್ಟೇರ್, ಹತ್ತಿ 6.4 ಹೆಕ್ಟೇರ್, ಹೆಸರು 4.86 ಹೆಕ್ಟೇರ್, ಕಬ್ಬು 0.85 ಹೆಕ್ಟೇರ್ ಬೆಳೆ ಹಾನಿಯಾಗಿದೆ ಎಂದು ಅವರು ತಿಳಿಸಿದ್ದಾರೆ.
ಬೆಳೆಹಾನಿ ವರದಿಯನ್ನು ಸರಕಾರಕ್ಕೆ ಸಲ್ಲಿಸಲಾಗಿದ್ದು, ಬೆಳೆಹಾನಿಯಾದ ರೈತರ ಖಾತೆಗೇÉ ನೇರವಾಗಿ ವಿಮೆ ಹಣ ಜಮೆಯಾಗಲಿದೆ ಎಂದು ತಿಳಿಸಿದರು.