Home ಜಿಲ್ಲೆ ಕಲಬುರಗಿ ಬೆಳೆ ಪರಿಸ್ಥಿತಿ ಪರಿಶೀಲನೆ

ಬೆಳೆ ಪರಿಸ್ಥಿತಿ ಪರಿಶೀಲನೆ

ಚಿಂಚೋಳಿ: ತಾಲೂಕಿನ ಪೆಂಚಪಳ್ಳಿ, ಕೊಡಂಪಳ್ಳಿ, ಜೇಟ್ಟೂರು ಹಾಗೂ ರುದ್ನೂರು ಗ್ರಾಮಗಳಿಗೆ ಕೃಷಿ ಇಲಾಖೆಯ ವಿಜ್ಞಾನಿಗಳಾದ ಡಾ. ಜಾಧವ, ಅವರ ತಂಡ ಭೇಟಿ ನೀಡಿ ಅವರ ಜೊತೆಗೆ ಚಿಂಚೋಳಿ ಕೃಷಿ ಇಲಾಖೆ ಅಧಿಕಾರಿಗಳಾದ ವೀರಶೆಟ್ಟಿ ರಾಠೋಡ, ಅವರ ತಂಡದ ನೇತೃತ್ವದಲ್ಲಿ ರೈತರ ಹೊಲಗಳಿಗೆ ಭೇಟಿ ನೀಡಿ ವಿವಿಧ ಬೆಳೆಗಳ ಸ್ಥಿತಿಗತಿಗಳನ್ನು ಪರಿಶೀಲಿಸಿತು ಈ ಸಂದರ್ಭದಲ್ಲಿ ಮಣ್ಣಿನಲ್ಲಿ ತೇವಾಂಶದ ಕೊರತೆಯಿಂದ ಬೆಳೆಗಳು ಸಂಕಷ್ಟಕ್ಕೆ ಸಿಲುಕಿರುವುದು ಕಂಡುಬAದಿದ್ದು, ಬೆಳೆಗಳ ಸಂರಕ್ಷಣೆಗಾಗಿ ರೈತರಿಗೆ ಸೂಕ್ತ ಸಲಹೆಗಳನ್ನು ನೀಡಲಾಯಿತು.
ತೊಗರಿ ಬೆಳೆ: ತೇವಾಂಶದ ತೀವ್ರ ಕೊರತೆಯಿಂದ ತೊಗರಿ ಬೆಳೆಯ ಕೆಳಭಾಗದ ಎಲೆಗಳು ಹಳದಿಯಾಗಿ ಉದುರುತ್ತಿರುವುದು ಕಂಡುಬAದಿದೆ ಅಲ್ಲದೆ, ಒಣ ಬೇರು ಕೊಳೆ ರೋಗ ಹಾಗೂ ಹಸಿರು ಜಿಗಿಹುಳುಗಳ ಬಾಧೆಯೂ ಕಾಣಿಸಿಕೊಂಡಿದೆ. ಈ ಹಿನ್ನೆಲೆಯಲ್ಲಿ ರೋಗ ಮತ್ತು ಕೀಟಗಳ ನಿಯಂತ್ರಣಕ್ಕಾಗಿ ಅಗತ್ಯ ಕ್ರಮಗಳನ್ನು ಕೈಗೊಳ್ಳುವಂತೆ ರೈತರಿಗೆ ಸಲಹೆ ನೀಡಲಾಯಿತು.
ಕಬ್ಬು ಬೆಳೆ: ಕಬ್ಬಿನ ಬೆಳೆಯಲ್ಲಿ ಪೈರಿಲ್ಲಾ ಕೀಟದ ಬಾಧೆ ಕಂಡುಬAದಿದ್ದು, ಕೀಟದ ನಿಯಂತ್ರಣಕ್ಕೆ ಸೂಕ್ತ ಕ್ರಮಗಳನ್ನು ಅನುಸರಿಸುವಂತೆ ರೈತರಿಗೆ ಶಿಫಾರಸು ಮಾಡಲಾಯಿತು.
ಮೆಕ್ಕೆಜೋಳ: ಮೆಕ್ಕೆಜೋಳದ ಬೆಳೆ ಕಾಳು ತುಂಬುವಿಕೆಯ ಅರ್ಧ ಹಂತದಲ್ಲಿದ್ದು, ತೇವಾಂಶದ ಕೊರತೆಯಿಂದ ಬೆಳೆಯು ಬಳಲುತ್ತಿರುವುದು ಪರಿಶೀಲನೆಯ ವೇಳೆ ಗಮನಕ್ಕೆ ಬಂದಿದೆ ಹಿಂಗಾರು ಜೋಳ ಗ್ರಾಮಗಳಲ್ಲಿ ಹಿಂಗಾರು ಜೋಳದ ಬೆಳೆಯ ಸ್ಥಿತಿಗತಿಗಳನ್ನು ಪರಿಶೀಲಿಸಿ, ಬೆಳೆಯ ಪ್ರಸ್ತುತ ಪರಿಸ್ಥಿತಿಯ ಕುರಿತು ಮಾಹಿತಿ ಸಂಗ್ರಹಿಸಲಾಯಿತು
ಬರ ಪರಿಸ್ಥಿತಿಯಿಂದ ಬೆಳೆಗಳ ಮೇಲೆ ಉಂಟಾಗುವ ದುಷ್ಪರಿಣಾಮಗಳನ್ನು ಕಡಿಮೆ ಮಾಡಲು ಹಾಗೂ ಬೆಳೆಗಳ ಬೆಳವಣಿಗೆಯನ್ನು ಸುಧಾರಿಸಲು ಮಣ್ಣಿನ ತೇವಾಂಶ ಸಂರಕ್ಷಣೆ ಸೇರಿದಂತೆ ವಿವಿಧ ಬರ ನಿರ್ವಹಣಾ ಕ್ರಮಗಳನ್ನು ಅನುಸರಿಸುವಂತೆ ರೈತರಿಗೆ ಸಲಹೆ ನೀಡಲಾಯಿತು ಎಂದುಕೃಷಿ ಇಲಾಖೆ ಅಧಿಕಾರಿಗಳಾದ ವೀರಶೆಟ್ಟಿ ರಾಠೋಡ, ಅವರು ತಿಳಿಸಿದ್ದಾರೆ