
ಕಲಬುರಗಿ,ಜು.೨: ಇತ್ತೀಚಿನ ದಿನಗಳಲ್ಲಿ ಪತ್ರಿಕೆಗಳಲ್ಲಿ ರಾಜಕೀಯ, ಅಪರಾಧ ಸುದ್ದಿಗಳು ಹೆಚ್ಚಾಗಿ ಕಾಣಿಸಿಕೊಳ್ಳುತ್ತಿವೆ. ಇವು ಕಡಿಮೆ ಆಗಬೇಕು ಎಂದು ವಿಶ್ವಹಿಂದೂ ಪರಿಷತ್ ಉಪಾಧ್ಯಕ್ಷ ಡಾ.ಲಿಂಗರಾಜಪ್ಪ ಅಪ್ಪಾ ಅವರು ನುಡಿದರು.
ನಗರದ ಕೆಕೆಸಿಸಿಐ ಸಂಸ್ಥೆ ಸಭಾಂಗಣದಲ್ಲಿ ಹಿರಿಯ ಪತ್ರಕರ್ತರಾಗಿದ್ದ ದಿ.ಪಿ.ಎಂ ಮಣ್ಣೂರ ಅವರ ೭೭ ನೇ ಹುಟ್ಟುಹಬ್ಬ ಹಾಗೂ ಸತ್ಯಕಾಮ ಸಮ್ಮಾನ್ ಪ್ರಶಸ್ತಿ ಪ್ರದಾನ ಸಮಾರಂಭ ಉದ್ಘಾಟಿಸಿ ಮಾತನಾಡಿದ ಅವರು,ಆರೋಗ್ಯ ಮತ್ತು ಕೃಷಿ ವಿಷಯದ ಬಗ್ಗೆ ಯುವಕರಿಗೆ ಹೆಚ್ಚಿನ ಅರಿವು ಮೂಡಿಸುವದು ಇಂದು ಅಗತ್ಯವಾಗಿದೆ ಎಂದರು.
ಜಿಲ್ಲಾ ಕಾರ್ಯನಿರತ ಪತ್ರಕರ್ತರ ಸಂಘದ ಅಧ್ಯಕ್ಷ ಬಾಬುರಾವ ಯಡ್ರಾಮಿ ಅವರು ಮಾತನಾಡಿ,ಪಿ.ಎಂ ಮಣ್ಣೂರ ಅವರು ಸಾರ್ವಜನಿಕರ ಸಮಸ್ಯೆ ಬಗ್ಗೆ ತಮ್ಮ ಪತ್ರಿಕೆಯಲ್ಲಿ ಬರೆದು ,ಅಷ್ಟಕ್ಕೆ ಸುಮ್ಮನಾಗದೇ ಅವುಗಳ ಪರಿಹಾರಕ್ಕೆ ಹೋರಾಡುತ್ತಿದ್ದರು.ಅವರ ಹೆಸರಿನಲ್ಲಿ ಸರಕಾರ ರಾಜ್ಯ ಪ್ರಶಸ್ತಿ ನೀಡಬೇಕು.ಜೊತೆಗೆ ಜಿಲ್ಲಾಕಾರ್ಯನಿರತ ಪತ್ರಕರ್ತರ ಸಂಘದಿAದಲೂ ವಾರ್ಷಿಕ ಪ್ರಶಸ್ತಿ ನೀಡಲು ನಿರ್ಧರಿಸಲಾಗುತ್ತದೆ ಎಂದರು.ಹಿರಿಯ ವೈದ್ಯ ಡಾ.ಎಸ್.ಎಸ್ ಗುಬ್ಬಿ ಅವರು ಮಾತನಾಡಿದರು.ಮಕ್ತಂಪುರ ಗದ್ದುಗೆಮಠದ ಪೂಜ್ಯ ಚರಲಿಂಗ ಮಹಾಸ್ವಾಮಿಗಳು ಸಾನಿಧ್ಯ ವಹಿಸಿ ಆಶೀರ್ವಚನ ನೀಡಿದರು.ಹಿರಿಯ ವಿಜ್ಞಾನಿ ಡಾ.ಡಿ.ಎಂ. ಮಣ್ಣೂರ ಅಧ್ಯಕ್ಷತೆ ವಹಿಸಿದ್ದರು.
ಸಂಜೆವಾಣಿಯ ಹಿರಿಯ ಪತ್ರಕರ್ತರಾದ ಚಂದ್ರಕಾAತ ಹುಣಸಗಿ,ಹಿರಿಯ ಪತ್ರಕರ್ತರಾದ ರಾಮಕೃಷ್ಣ ಬಡಶೇಷಿ,ಶಂಕರ ಕೋಡ್ಲಾ, ಅಜಿಜುಲ್ಲಾ ಸರಮಸ್ತ್, ಹಣಮಂತರಾವ್ ಭೈರಾಮಡಗಿ ಮತ್ತು ಪ್ರದೀಪ ಕುಲಕರ್ಣಿ ಅವರಿಗೆ ಸತ್ಯಕಾಮ ಸಮ್ಮಾನ್ ಪ್ರಶಸ್ತಿ ಪ್ರದಾನ ಮಾಡಲಾಯಿತು.ಅಪ್ಪಾರಾವ ಅಕ್ಕೋಣಿ, ಶರಣಬಸಪ್ಪ ಪಪ್ಪಾ,ಗುರುರಾಜ ಕುಲಕರ್ಣಿ,ದೇವೇಂದ್ರಪ್ಪ ಕಪನೂರ ವೇದಿಕೆಯಲ್ಲಿದ್ದರು.
ಆನಂದ ಮಣ್ಣೂರ ಸ್ವಾಗತಿಸಿದರು.ನಾಗಲಿಂಗಯ್ಯಸ್ವಾಮಿಶಾಸ್ತಿçà ಸ್ಥಾವರಮಠ ನಿರೂಪಿಸಿದರು. ಹಿರಿಯ ಪತ್ರಕರ್ತರಾದ ಸಂಗಮನಾಥ ರೇವತಗಾಂವ,ಸುಭಾಷ ಬಣಗಾರ,ಜಯತೀರ್ಥ ಪಾಟೀಲ,ಎಚ್.ಶೇಷಗಿರಿ,ಬಿ.ವಿ ಚಕ್ರವರ್ತಿ,ಶಿವರಾಜ ಅಂಡಗಿ ಚಾಮರಾಜ ದೊಡ್ಡಮನಿ ಶರಣು ಜಿಡಗಾ ಸೇರಿದಂತೆ ಹಲವರು ಉಪಸ್ಥಿತರಿದ್ದರು.ಕಿರಣಪಾಟೀಲ ಮತ್ತು ಬಾಬುರಾವ ಕೋಬಾಳ ತಂಡದವರಿAದ ಸಂಗೀತ ಕಾರ್ಯಕ್ರಮ ಜರುಗಿತು.