ಕುಣಿದು ಕುಪ್ಪಳಿಸಿದ ಕ್ರಿಕೆಟ್ ಅಭಿಮಾನಿಗಳು

ನವಲಗುಂದ,ಜೂ4: ಅಹಮದಾಬಾದ್‍ನ ನರೇಂದ್ರ ಮೋದಿ ಕ್ರೀಡಾಂಗಣದಲ್ಲಿ 2025ನೇ ಸಾಲಿನ ಇಂಡಿಯನ್ ಪ್ರೀಮಿಯರ್ ಲೀಗ್ (ಐಪಿಎಲ್) ಟ್ವೆಂಟಿ-20 ಕ್ರಿಕೆಟ್ ಟೂರ್ನಿಯಲ್ಲಿ ಪಂಜಾಬ್ ಕಿಂಗ್ಸ್ ವಿರುದ್ಧ ನಡೆದ ಫೈನಲ್ ಪಂದ್ಯದಲ್ಲಿ ಬೆಂಗಳೂರು ರಾಯಲ್ ಚಾಲೆಂಜರ್ಸ್ (ಆರ್‍ಸಿಬಿ) ತಂಡವು ಭರ್ಜರಿ ಗೆಲುವು ಸಾಧಿಸಿದ ಹಿನ್ನೆಲೆ ಕ್ರಿಕೆಟ್ ಅಭಿಮಾನಿಗಳು ಪಟ್ಟಣದ ತುಂಬೆಲ್ಲ ವಿಜಯೋತ್ಸವ ಆಚರಿಸಿದರು.

ಪಟ್ಟಣದ ಗಾಂಧೀ ಮಾರುಕಟ್ಟೆಯಲ್ಲಿ ಬೃಹತ್ ಎಲ್.ಸಿ.ಡಿ ಸ್ಕ್ರೀನ್ ಅಳವಡಿಸಲಾಗಿತ್ತು. ಆರ.ಸಿ.ಬಿ ಟೀಮ್ ಗೆಲ್ಲುತ್ತಿದ್ದಂತೆ ಪಟ್ಟಣದಲ್ಲಿ ಹಬ್ಬದ ವಾತಾವರಣ ನಿರ್ಮಾಣವಾಗಿತ್ತು.

ಕ್ರಿಕೆಟ ಅಭಿಮಾನಿಗಳಿಗೆ ಸಂಜೆ ಉಪಹಾರದ ವ್ಯವಸ್ಥೆಯನ್ನು ಕಲ್ಪಿಸಲಾಗಿತ್ತು. ಆರ.ಸಿ.ಬಿ ಗೆಲ್ಲುತ್ತಿದ್ದಂತೆ ಪಟ್ಟಣದ ಮೂಲೆ.ಮೂಲೆಯಲ್ಲೂ ಯುವಕರು ಪಠಾಕಿ ಸಿಡಿಸಿ ಸಿಹಿ ಹಂಚುವುದರೊಂದಿಗೆ ಡಿಜೆ ಸದ್ದಿನೊಂದಿಗೆ ಕುಣಿದು ಕುಪ್ಪಳಿಸಿದರು.