
ಕಲಬುರಗಿ ;ಮೇ.23: ಪ್ರಸ್ತುತ ದಿನಗಳಲ್ಲಿ ಬಹಳಷ್ಟು ಜನರಲ್ಲಿ ಅತಿ ಹೆಚ್ಚು ರಕ್ತದೊತ್ತಡ ಸಮಸ್ಯೆ ಕಂಡು ಬರುತ್ತಿರುವುದು ನಾವೆಲ್ಲಾ ಕಾಣಬಹುದು ಎಂದು ವ್ಯವಸ್ಥಾಪಕರಾದ ಡಾ. ರೇಣುಪ್ರಸಾದ ಚಿಕ್ಕಮಠ ಹೇಳಿದರು.
ನಗರದ ಜೇವರ್ಗಿ ರಸ್ತೆ, ಉದನೂರ ಸರ್ಕಲ್ ಹತ್ತಿರವಿರುವ “ಬಿಲ್ವ ಆಸ್ಪತ್ರೆ” ಯಲ್ಲಿ ಮೇ 17 ರಂದು ವಿಶ್ವ ರಕ್ತದೊತ್ತಡ ದಿನಾಚರಣೆ ಆಚರಿಸಿ ಮಾತನಾಡಿದ ಅವರು, ರಕ್ತದೊತ್ತಡ ಬಗ್ಗೆ ಬಹಳಷ್ಟು ಜನರಲ್ಲಿ ಜಾಗೃತಿ ಇಲ್ಲದಿರುವುದರಿಂದ ರಕ್ತದೊತ್ತಡ ಸಮಸ್ಯೆಯಿಂದ ಹೃದಯ ಪಾಶ್ವಾರ್ಯು ಹೀಗೇ ನಾನಾ ರೀತಿಯ ಗಂಭೀರ ಸಮಸ್ಯೆಗಳಿಗೆ ದಾರಿ ಮಾಡಿಕೊಡಬಹುದು ಎಂದು ಡಾ. ರೇಣುಪ್ರಸಾದ ಅವರು ತಿಳಿಸಿದರು.
ಈ ಸಂದರ್ಭದಲ್ಲಿ ಆಸ್ಪತ್ರೆಯ ಆಡಳಿತ ಮಂಡಳಿ ಮತ್ತು ಸಿಬ್ಬಂದಿ ವರ್ಗದವರು ಇದ್ದರು.
ಅಧಿಕ ರಕ್ತದೊತ್ತಡ ನಿಯಂತ್ರಿಸಲು ಸಲಹೆಗಳು.
- ಉಪ್ಪು ಸೇವೆನೆ ಮಿತವಾಗಿರಲಿ.
- ಹಣ್ಣು ಹಂಪಲು ಮತ್ತು ಸೊಪ್ಪು ತರಕಾರಿಗಳನ್ನು ಸೇವನೆ ಮಾಡಿ.
- ಹೆಚ್ಚೆಚ್ಚು ದ್ರವ ಪದಾರ್ಥಗಳನ್ನು ಸೇವನೆ ಮಾಡಿ.
- ತಂಬಾಕು, ಮದ್ಯ ಸೇವನೆಯಿಂದ ಮತ್ತು ಧೂಮಪಾನದಿಂದ ದೂರವಿರಿ.
- ಕೊಬ್ಬಿನ ಅಂಶವಿರುವ ಆಹಾರ ಸೇವನೆ ಮಾಡಬೇಡಿ.
- ಪ್ರತಿದಿನ ಬೆಳಿಗ್ಗೆ ಎದ್ದ ತಕ್ಷಣ ನೀರನ್ನು ಕುಡಿಯಿರಿ.