ತೊಟ್ಟಿಲೋತ್ಸವ ಕಾರ್ಯಕ್ರಮ


ಲಕ್ಷೆö್ಮÃಶ್ವರ,ಡಿ.೫:
ಪಟ್ಟಣದ ಶಂಕರಭಾರತಿಮಠದಲ್ಲಿ ಬ್ರಹ್ಮವೃಂದದವರಿAದ ದತ್ತ ಜಯಂತಿ ಅಂಗವಾಗಿ ಕಳೆದ ಒಂದು ವಾರದಿಂದ ಅನೇಕ ಧಾರ್ಮಿಕ ಕಾರ್ಯಕ್ರಮಗಳು, ನಿತ್ಯ ಭಜನೆ, ರುದ್ರಾಭಿಷೇಕ, ವಿಶೇಷ ಅಲಂಕಾರಗಳನ್ನು ನೆರವೇರಿಸಲಾಯಿತು. ಬಾಲಚಂದ್ರಶಾಸ್ತಿçÃಗಳು ಹುಲಮನಿ ಅವರ ಮಾರ್ಗದರ್ಶನದಲ್ಲಿ ಶ್ರೀಕಾಂತ ಪೂಜಾರ ಗುರುಚರಿತ್ರೆ ಪಾರಾಯಣವನ್ನು ಮಾಡಿದರು.
ಗುರುವಾರ ಸಂಜೆ ದತ್ತಾತ್ರೇಯ ತೊಟ್ಟಿಲೋತ್ಸವ ಕಾರ್ಯಕ್ರಮವನ್ನು ವಿಪ್ರ ಮಹಿಳಾ ಮಂಡಳದ ನೇತೃತ್ವದಲ್ಲಿ ಸಂಪ್ರದಾಯದAತೆ ನೆರವೇರಿಸಲಾಯಿತು, ದೇವಸ್ಥಾನದ ಆವರಣದಲ್ಲಿ ಮಹಿಳೆಯರ ಸಡಗರ ಸಂಭ್ರಮದಿAದ ತೋಟ್ಟಿಲೋತ್ಸವ ಕಾರ್ಯಕ್ರಮವನ್ನು ನಡೆಸಿದರು. ಈ ಸಂದರ್ಭದಲ್ಲಿ ವೇ.ಮೂ.ಬಾಲಚಂದ್ರಶಾಸ್ತಿçÃಗಳು ಹುಲಮನಿ ಮಾತನಾಡಿ ದತ್ತಾತ್ರೇಯ ದೇವರನ್ನು ತ್ರಿದೇವನ ರೂಪವೆಂದು ಕರೆಯುವುದರ ಹಿಂದೆ ಪೌರಾಣಿಕ ಕಥೆಯಿದೆ. ಪೌರಾಣಿಕ ನಂಬಿಕೆಗಳ ಪ್ರಕಾರ, ಭಗವಾನ್ ದತ್ತಾತ್ರೇಯನನ್ನು ಮೂರು ದೇವರುಗಳ ರೂಪವೆಂದು ಪರಿಗಣಿಸಲಾಗುತ್ತದೆ. ದತ್ತಾತ್ರೇಯನ ಮೂರ್ತಿ ತ್ಯಾಗ, ಭಕ್ತಿ, ಜ್ಞಾನ, ಅನುಕಂಪಗಳ ಸಾಕಾರ ಮೂರ್ತಿಯಾಗಿದೆ. ಮಾರ್ಗಶಿರ ಮಾಸದಲ್ಲಿ ಬರುವ ಶುಕ್ಲಪಕ್ಷದ ಪೂರ್ಣಿಮೆ ದಿನದಂದು ದತ್ತಜಯಂತಿ ಆಚರಣೆ ಮಾಡಲಾಗುತ್ತದೆ. ಬ್ರಹ್ಮ, ವಿಷ್ಣು ಮತ್ತು ಮಹೇಶ್ವರ ಅವತಾರ ತ್ರಿಮೂರ್ತಿ ಸ್ವರೂಪ ದತ್ತಾತ್ರೇಯ ಎಂದು ಕರೆಯಲ್ಪಡುತ್ತದೆ. ದತ್ತ ಜಯಂತಿಯAದು ಪೂಜಾ ವಿಧಗಳನ್ನು ಮಾಡುವುದರಿಂದ ಜೀವನದ ಪ್ರತಿಯೊಂದು ಹಂತದಲ್ಲೂ ಪ್ರತಿಫಲವನ್ನು ಪಡೆಯಬಹುದು ಎಂದು ನುಡಿದರು.


ಬ್ರಹ್ಮವೃಂದದ ಅಧ್ಯಕ್ಷ ಗೋಪಾಲ ಪಡ್ನೀಸ್ ಮಾತನಾಡಿ ದತ್ತಜಯಂತಿ ಕಾರ್ಯಕ್ರಮವು ಶ್ರೀಮಠದಲ್ಲಿ ಹಲವಾರು ವರ್ಷಗಳಿಂದ ನಿರಂತರವಾಗಿ ನಡೆದುಕೊಂಡು ಬರುತ್ತಿದ್ದು, ಹಿಂದಿನ ದಿನಗಳಲ್ಲಿ ಹಿರಿಯರು ದತ್ತಜಯಂತಿ ಪರಂಪರೆಯನ್ನು ಇಲ್ಲಿನ ಮಠದಲ್ಲಿ ಸಂಪ್ರದಾಯಬದ್ಧವಾಗಿ ಮಾಡುತ್ತಿದ್ದರು, ಅದನ್ನೆ ಈಗಲೂ ವ್ಯವಸ್ಥಿತವಾಗಿ ನಡೆಸಿಕೊಂಡು ಹೋಗಲಾಗುತ್ತಿದೆ, ಸಮಾಜದ ಬಾಂಧವರೊAದಿಗೆ ಇತರೆ ಸಮಾಜದವರು ಸಹ ಈ ಕಾರ್ಯಕ್ರಮದಲ್ಲಿ ಪಾಲ್ಗೊಳ್ಳುತ್ತಿದ್ದಾರೆ, ಕಾರ್ಯಕ್ರಮಗಳ ಯಶಸ್ವಿಗೆ ಎಲ್ಲರ ಸಹಕಾರ ಅಗತ್ಯ ಎಂದು ಹೇಳಿದರು.


ಕಾರ್ಯಕ್ರಮದಲ್ಲಿ ಬ್ರಾಹ್ಮಣ ಸಮಾಜದ ತಾಲೂಕ ಅಧ್ಯಕ್ಷ ಕೃಷ್ಣ ಕುಲಕರ್ಣಿ, ನಾರಾಯಣಭಟ್ ಪುರಾಣಿಕ, ವೆಂಕಣ್ಣ ಗುಡಿ, ಆರ್.ಎಚ್.ಕುಲಕರ್ಣಿ, ಗುರುರಾಜ ಪಾಟೀಲಕುಲಕರ್ಣಿ, ಕೆ.ಎಸ್.ಕುಲಕರ್ಣಿ, ಅರವಿಂದ ದೇಶಪಾಂಡೆ, ಕೃಷ್ಣಕುಮಾರ ಕುಲಕರ್ಣಿ, ಡಾ.ಪ್ರಸನ್ನ ಕುಲಕರ್ಣಿ, ಬಿ.ಕೆ.ಕುಲಕರ್ಣಿ, ಮೀನಾಕ್ಷಿ ಸರ್‌ದೇಶಪಾಂಡೆ, ಸುಶೀಲಾಬಾಯಿ ಪೂಜಾರ, ವೀಣಾ ಪಡ್ನೀಸ್, ಮೇಘಾ ಸಾಹುಕಾರ, ಗಿರಿಜಾಬಾಯಿ ಕುಲಕರ್ಣಿ, ಕಮಲಾಬಾಯಿ ಪುರಾಣಿಕ, ರಾಧಾ ಕುಲಕರ್ಣಿ, ನಯನಾ ಪೂಜಾರ ಸೇರಿದಂತೆ ಅನೇಕರಿದ್ದರು.