ರವಿಂದ್ರ ಸ್ವಾಮಿ ವಿರುದ್ಧ ಕೋರ್ಟ್ ತೀರ್ಪು ಡಿ.ಎಸ್.ಎಸ್ ಹೋರಾಟಕ್ಕೆ ಸಂದ ಜಯ: ಬೌದ್ದೆ

ಬೀದರ್: ಜು.6:ರವಿಂದ್ರ ಸ್ವಾಮಿ ಅವರಿಗೆ 2016 ಹಾಗೂ ನಂತರದಲ್ಲಿ ಲಂಚ ಪಡೆದು ಬೇಡ ಜಂಗಮ ಸುಳ್ಳು ಜಾತಿ ಪ್ರಮಾಣ ಪತ್ರ ನೀಡಿರುವ ಅಧಿಕಾರಿಗಳನ್ನು ಸೇವೆಯಿಂದ ವಜಾ ಮಾಡಬೇಕೆಂದು ದಲಿತ ಸಂಘರ್ಷ ಸಮಿತಿ ರಾಜ್ಯ ಸಂಘಟನಾ ಸಂಚಾಲಕರಾದ ಮಾರೂತಿ ಬೌದ್ದೆ ತಿಳಿಸಿದರು.
ಶನಿವಾರ ನಗರದ ಜಿಲ್ಲಾ ಪತ್ರಿಕಾ ಭವನದಲ್ಲಿ ಪತ್ರಿಕಾ ಗೋಷ್ಟಿ ಉದ್ದೇಶಿಸಿ ಮಾತನಾಡಿರುವ ಅವರು, ಲಿಂಗಾಯತ ಜಂಗಮ ಜಾತಿಗೆ ಸೇರಿದವರಾದ ಬೀದರ ಜಿಲ್ಲೆಯ ನಿವಾಸಿ ರವಿಂದ್ರ ಸ್ವಾಮಿ ತಂದೆ ಕಲ್ಲಯ್ಯ ಸ್ವಾಮಿ ಕಾನೂನಿನ ವಿರುದ್ಧವಾಗಿ ಸುಳ್ಳು ದಾಖಲೆಗಳನ್ನು ಸೃಷ್ಟಿಮಾಡಿ ತಹಸೀಲ್ದಾರರಿಂದ ಜಿಲ್ಲಾಧಿಕಾರಿಗಳ ವರೆಗೆ ಪದೆ ಪದೆ ಪರಿಶಿಷ್ಟ ಜಾತಿಯ ಬೇಡ ಜಂಗಮ ಪ್ರಮಾಣ ಪತ್ರ ಪಡೆಯಲು ಅರ್ಜಿ ಸಲ್ಲಿಸುತ್ತಿದ್ದರು. ಇವರ ಅರ್ಜಿಯ ಪದೆ ಪದೇ ತಿರಸ್ಕಾರಗೊಂಡರೂ ಅರ್ಜಿ ಸಲ್ಲಿಸುತ್ತಿದ್ದರು, ದಿನಾಂಕ:26-04-2016 ರಂದು ಗ್ರಾಮ ಲೆಕ್ಕಾಧಿಕಾರಿ (ತಲಾಟ) ಪಂಚರ ಪಂಚನಾಮೆ ಕಂದಾಯ ನಿರೀಕ್ಷಕರು (ಗಿರ್ದಾವರ), ತಹಸೀಲದಾರರ ಮುಂತಾದವರ ಮೂಲಕ ಸುಳ್ಳು ದಾಖಲೆಗಳನ್ನು ಸೃಷ್ಟಿಸಿ ತಹಸೀಲ್ದಾರರ ಮೇಲೆ ಒತ್ತಡ ತಂದು ಮೊದಲ ಬಾರಿಗೆ 27-08-2019 ರಂದು ಲಿಂಗಾಯತ ಜಂಗಮರಾಗಿರುವ ರವಿಂದ್ರ ಸ್ವಾಮಿ ತಂದೆ ಕಲ್ಲಯ್ಯಾ ಸ್ವಾಮಿರವರು ಪರಿಶಿಷ್ಟ ಜಾತಿಯಲ್ಲಿ ಬರುವ ಬೇಡ ಜಂಗಮ ಪ್ರಮಾಣ ಪತ್ರ ಪಡೆದಿರುತ್ತಾರೆ. ಈ ವಿಷಯವು ಕರ್ನಾಟಕ ರಾಜ್ಯ ದಲಿತ ಸಂಘರ್ಷ ಸಮಿತಿಯ ಗಮನಕ್ಕೆ ಬಂದಾಗ ಇಲ್ಲಿಯ ಸಹಾಯಕ ಆಯುಕ್ತರಿಗೆ ಲಿಖಿತ ದೂರು ನೀಡಿರುತ್ತೇವೆ. ದೂರಿನಲ್ಲಿ ರವಿಂದ್ರ ಸ್ವಾಮಿ ತಂದೆ ಕಲ್ಲಯ್ಯಾ ಸ್ವಾಮಿ ಅವರು ಸತ್ಯ ಮುಚ್ಚಿಟ್ಟು ಸುಳ್ಳು ದಾಖಲೆಳನ್ನು ಸೃಷ್ಟಿಸಿ ಲಿಂಗಾಯತ ಜಂಗಮರಾಗಿರುವ ಇವರು ಪರಿಶೀಷ್ಟ ಜಾತಿಯ ಬೇಡ ಜಂಗಮ ಪ್ರಮಾಣ ಪತ್ರ ಪಡೆದಿರುತ್ತಾರೆ. ಇದನ್ನು ಕೂಡಲೆ ರದ್ದು ಪಡಿಸಬೇಕೆಂದು ಒತ್ತಾಯಿಸಲಾಗಿತ್ತು. ಕಳೆದ 2016 ರಿಂದ ಜೂನ್ 2025 ವರೆಗೆ ಅಂದರೆ ಒಂಬತ್ತು ವರ್ಷಗಳ ಸುಧಿರ್ಘ ಕಾನೂನು ಹೋರಾಟ ನಡೆಸುವ ಮೂಲಕ ಕರ್ನಾಟಕ ರಾಜ್ಯ ದಲಿತ ಸಂಘರ್ಷ ಸಮಿತಿ ಯಶಸ್ಸು ಕಂಡಿದೆ ಎಂದರು.
ದಲಿತ ಮುಖಂಡರು ಹಾಗೂ ಚಿಂತಕರಾದ ಪ್ರೊ.ವಿಠಲದಾಸ ಪ್ಯಾಗೆ ಮಾತನಾಡಿ, ಕರ್ನಾಟಕ ಉಚ್ಚ ನ್ಯಾಯಾಲಯದ ನ್ಯಾಯಮೂರ್ತಿ ಎಸ್. ಸುನೀಲದ ಯಾದವ ಹಾಗೂ ನ್ಯಾಯಮೂರ್ತಿ ರಾಮಚಂದ್ರರಾವ ಅವರ ದ್ವಿಸದಸ್ಯ ಪೀಠವು ಜೂನ್ 30ರಂದು ತೀರ್ಪು ನೀಡಿ ವೀರಶೈವ ಜಂಗಮರು ಬೇಡ ಜಂಗಮ ಜಾತಿ ಪ್ರಮಾಣ ಪತ್ರ ತೆಗೆದುಕೊಳ್ಳುವಂತಿಲ್ಲ ಎಂದು ಐತಿಹಾಸಿಕ ತೀರ್ಪು ನೀಡಿದ್ದಾರೆ. ಕರ್ನಾಟಕ ಉಚ್ಚ ನ್ಯಾಯಾಲಯದ ಆದೇಶದಂತೆ ಲಿಂಗಾಯತ ಜಂಗಮರು ಪರಿಶಿಷ್ಟ ಜಾತಿಯಲ್ಲಿ ಬರುವ ಬೇಡ ಜಂಗಮ ಜಾತಿ ಪ್ರಮಾಣ ಪತ್ರಕ್ಕೆ ಅರ್ಹರಲ್ಲ ಮತ್ತು ಬೇಡ ಜಂಗಮರು ಪರಿಶಿಷ್ಟ ಜಾತಿಯ ಪ್ರಮಾಣ ಪತ್ರ ಪಡೆಯುವಂತಿಲ್ಲವೆಂದು ತೀರ್ಪು ನೀಡಿರುತ್ತಾರೆ. 70 ಪುಟಗಳ ಐತಿಹಾಸಿಕ ತೀರ್ಪೂ ಪ್ರಕಟಿಸಲಾಗಿದೆ ಎಂದರು.
ಕರ್ನಾಟಕ ಸರ್ಕಾರದ ಸಹಾಯದಿಂದಾಗಿ ಲಿಂಗಾಯತ ಜಂಗಮ ಜಾತಿಗೆ ಸೇರಿರುವವರು ಪರಿಶೀಷ್ಠ ಜಾತಿಯಲ್ಲಿ ಬರುವ ಬೇಡ ಜಂಗಮ ಜಾತಿ ಪ್ರಮಾಣ ಪತ್ರ ಪಡೆಯುವಂತಿಲ್ಲ ಎಂಬ ಐತಿಹಾಸಿಕ ತೀರ್ಪು ಬಂದಿದೆ. ಇವರು ಶೋಷಿತ ಸಮಾಜದ ಹಕ್ಕುಗಳನ್ನು ಕಬಳಿಸುವ ಹುನ್ನಾರಕ್ಕೆ ಕರ್ನಾಟಕ ಉಚ್ಚ ನ್ಯಾಯಾಲಯದ ದ್ವಿಸದಸ್ಯ ಪೀಠದ ಐತಿಹಾಸಿಕ ತೀರ್ಮ ಮುಂದಿನ ಪೀಳಿಗೆಗೆ, ಸರ್ಕಾರದ ಇಲಾಖೆಗಳಿಗೆ ಜಾತಿ ಪ್ರಮಾಣ ಪತ್ರ ನೀಡಲು ಮಾರ್ಗ ಸೂಚಿಯಾಗಿದೆ. ನಿಜವಾದ ಶೋಷಿತ ಬೇಡ ಜಂಗಮವರಿಗೆ ಆಗುವ ಅನ್ಯಾಯದಿಂದ ವಂಚಿತರಾಗದಂತೆ ತಡೆಯುವುಂತಾಗಿದೆ. ಕರ್ನಾಟಕ ಉಚ್ಚ ನ್ಯಾಯಾಲಯದ ನ್ಯಾಯಾಮೂರ್ತಿಗಳ ತೀರ್ಪಿನಿಂದ ರವಿಂದ್ರ ತಂದೆ ಕಲ್ಲಯ್ಯಾ ಸ್ವಾಮಿಯವರ ಹುನ್ನಾರ ವಿಫಲಗೊಳಿಸಲು ಇಲ್ಲಿಯ ಜಿಲ್ಲಾಧಿಕಾರಿಗಳಾಗಿದ್ದ ಗೋವಿಂದ ರೆಡ್ಡಿಯವರಿಗೆ ಮತ್ತು ಕಲಬುರಗಿ ಉಚ್ಚ ನ್ಯಾಯಾಲಯದ ದ್ವಿ ಸದಸ್ಯ ಪೀಠಕ್ಕೆ ಮತ್ತು ಈ ಬಗ್ಗೆ ವಿವರವಾಗಿ ವಾದ ಮುಂಡಿಸಿದ ನ್ಯಾಯಾವಾದಿ ಜಯಕುಮಾರ ಎಸ್. ಪಾಟೀಲ, ನ್ಯಾಯಾವಾದಿ ವಿಲ್ಸನ್, ಸರ್ಕಾರಿ ನ್ಯಾಯವಾದಿ ಸಿ.ಜಗದೀಶ ಅವರಿಗೆ ಅಭಿನಂದಿಸುವುದಾಗಿ ಪ್ರೊ.ಪ್ಯಾಗೆ ಹೇಳಿದ್ದಾರೆ.
ಡಿ.ಎಸ್.ಎಸ್ ಜಿಲ್ಲಾ ಸಂಚಾಲಕ ಅರುಣ ಪಟೇಲ, ಜಿಲ್ಲಾ ಸಮಘಟನಾ ಸಂಚಾಲಕ ರಾಜಕುಮಾರ ವಾಘಮಾರೆ, ಹಿರಿಯ ಮುಖಂಡರಾದ ಡಾ.ಕಾಶಿನಾಥ ಚಲವಾ, ವಿಜಯಕುಮಾರ ಗಾಯಕವಾಡ, ವಿನೋದ ಬಂದಗೆ, ಸುಧಾಕರ ಹಾಗೂ ಇತರರು ಪತ್ರಿಕಾ ಗೋಷ್ಟಿಯಲ್ಲಿದ್ದರು.