Home ಜಿಲ್ಲೆ ಡಾ. ರಾಜಶೇಖರ ಶಿವಾಚಾರ್ಯರ ನೇಮಕ ಎತ್ತಿ ಹಿಡಿದ ನ್ಯಾಯಾಲಯ

ಡಾ. ರಾಜಶೇಖರ ಶಿವಾಚಾರ್ಯರ ನೇಮಕ ಎತ್ತಿ ಹಿಡಿದ ನ್ಯಾಯಾಲಯ

ಬೀದರ್: ಮೇ.28: ಹುಮನಾಬಾದ್ ತಾಲ್ಲೂಕಿನ ಬೇಮಳಖೇಡದ ಹಿರೇಮಠ ಸಂಸ್ಥಾನದ ಉತ್ತರಾಧಿಕಾರಿಯಾಗಿ ಡಾ. ರಾಜಶೇಖರ ಶಿವಾಚಾರ್ಯರನ್ನು ನೇಮಕ ಮಾಡಿರುವುದನ್ನು ಹುಮನಾಬಾದನ ಪ್ರಧಾನ ಸಿವಿಲ್ ಹಾಗೂ ಜೆಎಂಎಫ್‍ಸಿ ನ್ಯಾಯಾಲಯ ಎತ್ತಿ ಹಿಡಿದಿದೆ.
ಮಠದ ಉತ್ತರಾಧಿಕಾರಿ ವಿಷಯಕ್ಕೆ ಸಂಬಂಧಿಸಿದಂತೆ ಉಚ್ಚಾಟಿತ ಶ್ರೀ ಚಂದ್ರಶೇಖರ ಶಿವಾಚಾರ್ಯರು ಹೂಡಿದ ದಾವೆಯನ್ನು ವಜಾಗೊಳಿಸಿದೆ.
ಉಚ್ಚಾಟಿತ ಶ್ರೀ ಚಂದ್ರಶೇಖರ ಶಿವಾಚಾರ್ಯರು ಗುರುಪಾದ ಶಿವಾಚಾರ್ಯ ಮತ್ತು ಡಾ. ರಾಜಶೇಖರ ಶಿವಾಚಾರ್ಯರ ವಿರುದ್ಧ ದಾವೆ ಹೂಡಿದ್ದರು. ವಿವಾದ ಸುಮಾರು 9 ವರ್ಷಗಳಿಂದ ನಡೆದಿತ್ತು. ಪ್ರಕರಣದ ವಾದ- ಪ್ರತಿವಾದವನ್ನು ಆಲಿಸಿದ ನ್ಯಾಯಾಧೀಶರು, ಏಪ್ರಿಲ್ 27 ರಂದು ತೀರ್ಪು ನೀಡಿದ್ದಾರೆ ಎಂದು ಡಾ. ರಾಜಶೇಖರ ಶಿವಾಚಾರ್ಯರು ತಿಳಿಸಿದ್ದಾರೆ.
ಉತ್ತರಾಧಿಕಾರಿ ವಿಷಯಕ್ಕೆ ಸಂಬಂಧಿಸಿದಂತೆ ನ್ಯಾಯಾಲಯ ನೀಡಿದ ತೀರ್ಪಿನಿಂದ ಸಮಾಧಾನವಾಗಿದೆ. ಸತ್ಯಕ್ಕೆ ಮತ್ತು ಧರ್ಮಕ್ಕೆ ಜಯವಾಗಿದೆ ಎಂದು ಡಾ. ರಾಜಶೇಖರ ಶಿವಾಚಾರ್ಯ ತಿಳಿಸಿದ್ದಾರೆ.