
ಕಲಬುರಗಿ,ಫೆ.,26: ಸ್ವಾತಂತ್ರ್ಯ ಪಡೆದು ಅಮೃತ ಮಹೋತ್ಸವ ಆಚರಿಸುವಂತಹ ಸಂದರ್ಭದಲ್ಲಿ ಇನ್ನು ಅಧಿಕಾರದ ಹಪಾಹಪಿ, ಜಾತಿ ವ್ಯವಸ್ಥೆ ಆಡಳಿತ ವ್ಯವಸ್ಥೆಯಲ್ಲಿ ಇನ್ನು ಬೇರೂರಿರುವ ಕುರಿತು “ಕೋರ್ಟ್ ಮಾರ್ಶಲ್” ನಾಟಕ ಅನಾವರಣಗೊಳಿಸಿತು.
ಕಲಬುರಗಿ ನಾಟಕೋತ್ಸವ ಅಂಗವಾಗಿ ಇಲ್ಲಿನ ಡಾ.ಎಸ್.ಎಂ.ಪಂಡಿತ್ ರಂಗಮಂದಿರದಲ್ಲಿ ಬುಧವಾರ ಸಂಜೆ ಜರುಗಿದ ದೀಪ್ ಸ್ವದೇಶಿ ಅವರು ರಚಿಸಿದ ಅಶಿμï ರಾಣಾ ನಿರ್ದೇಶನದ ಕೋರ್ಟ್ ಮಾರ್ಶಲ್ ನಾಟಕ ಬೆಂಗಳೂರಿನ ಥಿಯೇಟರ್ನಾಮಾ ತಂಡ ತುಂಬಾ ಶಿಸ್ತುಬದ್ದವಾಗಿ ಪ್ರದರ್ಶನ ನೀಡಿತ್ತು.
ಅತ್ಯಂತ ವಿಧೇಯನಾಗಿದ್ದ ಸೈನಿಕನೊಬ್ಬ ಅಪರಾಧವೊಂದನ್ನು ಮಾಡಿ ಸಿಕ್ಕಿಬಿದ್ದಾಗ ಇದರ ತನಿಖೆಗಾಗಿ ಸೇನೆಯು ‘ಕೋರ್ಟ್ ಮಾರ್ಷಲ್’ಗೆ ಆದೇಶಿಸಿರುತ್ತದೆ. ಇದರ ಸುತ್ತವೆ ಸಂಪೂರ್ಣ ನಾಟಕ ಆವರಿಸಿದೆ.
ಜಾತಿ ವ್ಯವಸ್ಥೆ ಆಳವಾಗಿ ಬೇರೂರಿರುವ ಸರ್ಕಾರಿ ಆಡಳಿತ ಕಚೇರಿಯೊಂದರ ಹಿನ್ನೆಲೆಯಲ್ಲಿ ಈ ನಾಟಕ ರಚಿಸಲಾಗಿದೆ. ಭಾರತೀಯ ಸಂವಿಧಾನದ ಅತಿದೊಡ್ಡ ವಿರೋಧಾಭಾಸಗಳಲ್ಲಿ ಒಂದನ್ನು ಇದು ಬಿಚ್ಚಿಡುತ್ತದೆ-ಅಸ್ಪೃಶ್ಯತೆಯನ್ನು ನಿμÉೀಧಿಸಿ ಅಪರಾಧವೆಂದು ಪರಿಗಣಿಸಲಾಗಿದ್ದರೂ, ಜಾತಿ ಪದ್ಧತಿಯು ಇಂದಿಗೂ ಸಮಾಜದಲ್ಲಿ ಜೀವಂತವಿರುವುದನ್ನು ನಾಟಕ ಎಳೆ-ಎಳೆಯಾಗಿ ಬಿಚ್ಚಿಟ್ಟಿತ್ತು.
ಡಾ. ಅಂಬೇಡ್ಕರ್ ಅವರ ತತ್ತ್ವ ಶಾಸ್ತ್ರವನ್ನು ಅನುಸರಿಸುವ ನಮ್ಮ ಪ್ರಯತ್ನಗಳ ನಡುವೆಯೂ, ವಾಸ್ತವವು ಬೇರೆಯದೇ ಕಥೆಯನ್ನು ಹೇಳುತ್ತದೆ. ಕಾಲಾಂತರದಲ್ಲಿ ತಾರತಮ್ಯದ ರಚನೆಗಳು ಕೇವಲ ಹೊಸ ರೂಪಗಳನ್ನು ಪಡೆದುಕೊಳ್ಳುತ್ತವೆಯೇ ಹೊರತು, ಮೂಲಭೂತವಾಗಿ ಏನೂ ಬದಲಾಗುವುದಿಲ್ಲ ಎಂಬುದನ್ನು ನಾಟಕ ನೆನಪಿಸಿತ್ತು.



























