ಡೈವರ್ಸ್ಗೆ ಬಂದು ರಾಜಿ ಸಂಧಾನದ ಮೂಲಕ ಮತ್ತೆ ಒಂದಾದ ಜೋಡಿಗಳು

ಔರಾದ್ : ಸೆ.೨೪:ವಿಚ್ಛೇದನಕ್ಕೆ ಮುಂದಾಗಿದ್ದ ಜೋಡಿಗಳು ಈಚೇಗೆ ನಡೆದ ಲೋಕ್ ಅದಾಲತ್ ನಲ್ಲಿ ರಾಜಿ ಸಂಧಾನದ ಮೂಲಕ ಮತ್ತೆ ಒಂದಾಗಿದ್ದಾರೆ. ಹೀಗಾಗಿ ಈ ದಂಪತಿಯ ಮಗು ಮಾತ್ರವಲ್ಲದೆ ಎರಡೂ ಕುಟುಂಬಸ್ಥರು ಇದೀಗ ಸಂತೋಷಗೊAಡಿದ್ದಾರೆ.
ಪಟ್ಟಣದ ಸಿವಿಲ್ ನ್ಯಾಯಾಲಯದಲ್ಲಿ ವಿವಾಹ ವಿಚ್ಛೇದನಕ್ಕಾಗಿ ಕಮಲನಗರ ತಾಲೂಕಿನ ಡೋಣಗಾಂವ (ಎಂ) ಗ್ರಾಮದ ನಿಕಿತಾ ವಿರುದ್ಧ ಪತಿ ಮಹೇಶ ಪ್ರಕರಣ ದಾಖಲಿಸಿದ್ದರು. ದಂಪತಿಗಳು ಸುಮಾರು ೨ ವರ್ಷಗಳ ಕಾಲ ಉತ್ತಮ ಸಂಸಾರ ನಡೆಸಿದ್ದು, ಪ್ರಾರಂಭದಲ್ಲಿ ಎಲ್ಲವೂ ಚೆನ್ನಾಗಿತ್ತು. ಆದರೆ ಬಳಿಕ ಕುಟುಂಬಗಳೊಳಗೆ ಸಣ್ಣಪುಟ್ಟ ವಿಚಾರಗಳಿಗೆ ಮನಸ್ತಾಪವಾದದ್ದು ಈ ಜೋಡಿಗಳ ದಾಂಪತ್ಯದ ಮೇಲೂ ಪರಿಣಾಮ ಬೀರಿತು. ಹೀಗಾಗಿ ವಿಚ್ಛೇದನಬೇಕೆಂದು ಪತಿ ನ್ಯಾಯಾಲಯದ ಮೊರೆ ಹೋಗಿದ್ದ. ಸತತ ೨ ವರ್ಷಗಳ ಕಾಲ ನ್ಯಾಯಾಲಯದ ಮೊರೆ ಹೋಗಿದ್ದ ದಂಪತಿಗಳನ್ನು ಅದೇ ನ್ಯಾಯಾಲಯ ಎರಡು ಜೋಡಿಗಳನ್ನು ಮತ್ತೆ ಒಂದಾಗಿಸಿದೆ.
೨೦೨೩ರಲ್ಲಿ ವಿಚ್ಚೇದನಕ್ಕೆ ಅರ್ಜಿ ಸಲ್ಲಿಸಿದರು. ಕಳೆದ ೨ ವರ್ಷಗಳ ಕಾಲ ನ್ಯಾಯಾಲಯದಲ್ಲಿ ಪ್ರಕರಣ ನಡೆಯಿತು. ನಂತರ ಜೋಡಿಗಳು ತಾವು ಸಲ್ಲಿಸಿದ್ದ ವಿಚ್ಛೇದನ ಪ್ರಕರಣವನ್ನು ವಾಪಸ್ ಪಡೆದು ಮತ್ತೆ ಸಂಸಾರಕ್ಕೆ ಮರಳಿದ್ದಾರೆ. ಇದು ಖುಷಿಯ ವಿಚಾರವಾಗಿದ್ದು, ಅವರಿಗೆ ನ್ಯಾಯಾಲಯದಲ್ಲಿಯೇ ಹಾರ ಬದಲಾಯಿಸಿಕೊಳ್ಳುವ ಮೂಲಕ ಹೊಸ ಜೀವನಕ್ಕೆ ಹಿರಿಯ ನ್ಯಾಯಾಧೀಶರಾದ ಹಾಜಿ ಹುಸೇನ್ ಸಾಬ್ ಯಾದವಾಡ, ನ್ಯಾಯವಾದಿಗಳಾದ ರಾಜಕುಮಾರ ಮಿತ್ರಾ, ಅನಿಲ ವಾಡೆಕರ, ಎಮ್ ಎಸ್ ಬುಟ್ಟಿ, ಸಂತೋಷ ಉಪ್ಪೆ ಅವರು ಸಾಕ್ಷಿದಾರರು ಶುಭ ಕೋರಿದರು. ಈ ವೇಳೆ ದಂಪತಿಗಳಿಗೆ ತಿಳಿವಳಿಕೆ ನೀಡಿ ರಾಜೀ ಮಾಡಿ ಪ್ರಕರಣವನ್ನು ಮುಕ್ತಾಯಗೊಳಿಸಲಾಯಿತು.