
ಕೋಲಾರ,ಮೇ,೨೬- ಕಳೆದ ೫ ವರ್ಷಗಳ ಹಿಂದೆ ದೇಶದ ಅರ್ಥಿಕತೆಯನ್ನೆ ಬುಡಮೇಲು ಮಾಡಿದ ಸಾಂಕ್ರಾಮಿಕ ಕೊರೋನಾ ವೈರಸ್ ಈಗಾ ಮತ್ತೆ ಸಿಂಗಾಪುರ, ಚೀನಾ, ಹಾಂಗ್‌ಕಾಂಗ್ ಸೇರಿದಂತೆ ಕೆಲವು ದೇಶಗಳಲ್ಲಿ ಕಾಣಿಸಿ ಕೊಂಡಿದೆ. ಕರ್ನಾಟಕವೂ ಸೇರಿದಂತೆ ವಿವಿಧ ದೇಶಗಳಲ್ಲಿ ಸುಮಾರು ೬೫೪ ಪ್ರಕರಣಗಳು ಪತ್ತೆಯಾಗಿದೆ ಎಂದು ಹೇಳಲಾಗುತ್ತಿರುವ ಹಿನ್ನಲೆಯಲ್ಲಿ ರಾಜ್ಯದ ಗಡಿ ಭಾಗದ ಕೋಲಾರ ಜಿಲ್ಲೆಯಲ್ಲಿ ಅಗತ್ಯವಾದ ಮುನ್ನೆಚ್ಚರಿಕೆ ಕ್ರಮಗಳನ್ನು ಆರೋಗ್ಯ ಇಲಾಖೆಯ ಸಹಕಾರದೊಂದಿಗೆ ಜಿಲ್ಲಾಡಳಿತ ಕ್ರಮಕ್ಕೆ ಮುಂದಾಗ ಬೇಕಾಗಿದೆ.
ಪ್ರಸ್ತುತ ಕರ್ನಾಟಕದಲ್ಲಿ ೩೮ಕ್ಕೂ ಹೆಚ್ಚು ಪ್ರಕರಣಗಳು ಪತ್ತೆಯಾಗಿದೆ. ಬೆಂಗಳೂರಿನಲ್ಲಿಯೇ ೩೨ ಪ್ರಕರಣಗಳು ದಾಖಲಾಗಿದೆ ಎಂದು ಹೇಳಲಾಗುತ್ತಿದ್ದು ಬೆಂಗಳೂರಿಗೆ ೬೫ ಕಿ.ಮಿ,ಅಂತರದಲ್ಲಿರುವ ಕೋಲಾರ ಜಿಲ್ಲೆಗೆ ಸೊಂಕು ಹರಡುವುದಕ್ಕೆ ಹೆಚ್ಚಿನ ಕಾಲ ಬೇಕಾಗುವುದಿಲ್ಲ ಮುಂದಿನ ದಿನಗಳು ಮಳೆ-ಗಾಳಿ ಕಾಲವಾಗಿರುವುದರಿಂದ ಸೊಂಕುಗಳು ವೇಗವಾಗಿ ಹರಡುವ ಸಾಧ್ಯತೆಗಳಿದೆ ಹಾಗಾಗಿ ಜಿಲ್ಲಾಡಳಿತವು ಮುನ್ನೆಚ್ಚರಿಕೆ ಕ್ರಮವಾಗಿ ಅಗತ್ಯವಾದ ಎಲ್ಲಾ ಕ್ರಮಗಳಿಗೆ ಮುಂದಾಗ ಬೇಕಾಗಿದೆ.
ಕಳೆದ ಬಾರಿ ಕೊರೋನಾ ಸೊಂಕು ಹರಡಿದಾಗ ಜಿಲ್ಲೆಯಲ್ಲಿ ನೊರಾರು ಮಂದಿಯನ್ನು ಕಳೆದು ಕೊಂಡ ನೆನಪುಗಳು ಮಾಸುವ ಮುನ್ನವೇ ಮತ್ತೆ ಕೊರೋನಾ ಬಂದಿರುವುದ ಕಂಡರೆ ಇದು ಸಹ ಪಂಚವಾರ್ಷಿಕ ಯೋಜನೆಯನ್ನು ರೊಪಿಸಿ ಕೊಂಡಿದೆಯೇನೂ ಎಂಬ ಸಂಶಯ ಬರುವುದು ಸಹಜವಾಗಿದೆ. ಅದರೆ ಕೊರೋನಾ ವೈರಸ್‌ಗಳು ಕಳೆದ ಬಾರಿ ಇದ್ದಷ್ಟು ತೀವ್ರ ಪ್ರಬಲವಾಗಿಲ್ಲ ಎಂದು ಬೆಂಗಳೂರಿನ ಆರೋಗ್ಯ ಇಲಾಖೆಯ ಮೂಲಗಳು ತಿಳಿಸಿವೆ.
ಏನೇ ಅದರೂ ಸಾರ್ವಜನಿಕರು ಕಳೆದ ಬಾರಿಯಂತೆ ಮಾಸ್ಕ್‌ಗಳನ್ನು ಧರಿಸ ಬೇಕು. ಪರಸ್ಪರ ಅಂತರವನ್ನು ಕಾಯ್ದೆಕೊಂಡರೆ ಸಾಕು ಎಂದು ವಿಶ್ವ ಆರೋಗ್ಯ ಸಂಸ್ಥೆಯ ಸೂಚನೆಗಳನ್ನು ಪ್ರತಿಯೊಬ್ಬರೂ ಪಾಲಿಸ ಬೇಕು. ಅದರೆ ಕೆಲವು ಮಾದ್ಯಮಗಳು ಸಾರ್ವಜನಿಕರಲ್ಲಿ ಭೀತಿ ಹುಟ್ಟಿಸುವಂತೆ ವಿಕೃತಿಯನ್ನು ಮೆರೆಯುವುದನ್ನು ನಿಯಂತ್ರಿಸ ಬೇಕಾಗಿದೆ. ಜನರಿಗೆ ಕೊರೋನಾ ಸೊಂಕು ನಿಯಂತ್ರಿಸುವಂತ ಜಾಗೃತಿಯ ಅರಿವು ಮೂಡಿಸ ಬೇಕಾಗಿದೆ ಹೊರತು ವಿನಾ ಭಯ ಪಡುವಂತೆ ಆತಂಕ ವಾತವರಣ ಸೃಷ್ಠಿಸುವಿಕೆಗೆ ಕಡಿವಾಣ ಹಾಕ ಬೇಕು. ಈ ಬಗ್ಗೆ ಜಿಲ್ಲಾಡಳಿತ ಅಪಪ್ರಚಾರಗಳಿಗೆ ಕಡಿವಾಣ ಹಾಕ ಬೇಕಾಗಿದೆ. ಇತ್ತೀಚೆಗೆ ಸಮಾಜಿಕ ಜಾಲತಾಣಗಳು ಲಂಗು,ಲಾಗಮು ಇಲ್ಲದಂತೆ ಸತ್ಯಕ್ಕೆ ದೂರವಾದ ಸಂಗತಿಗಳನ್ನು ಅಪಪ್ರಚಾರ ಮಾಡುತ್ತಿರುವ ಸಂಖ್ಯೆ ಹೆಚ್ಚಳವಾಗಿದೆ ಸಾರ್ವಜನಿಕರು. ಕೋರೋನಾ ಗಿಂತ ಹೆಚ್ಚಾಗಿ ಭೀತಿಗಳಿಗೆ ತುತ್ತಾಗಿ ಸಾವನ್ನಾಪ್ಪುವಂತ ಪ್ರಕರಣಗಳೇ ಹೆಚ್ಚಾಗುವ ಸಾಧ್ಯತೆ ಇರುವುದು ಹಾಗಾಗಿ ಈ ಕುರಿತು ಅಪಪ್ರಚಾರಗಳಿಗೆ ಕಡಿವಾಣ ಹಾಕುವ ನಿಟ್ಟಿನಲ್ಲಿ ಸಂಬಂಧ ಪಟ್ಟ ಇಲಾಖೆಗಳು ಮುಂದಾಗ ಬೇಕಾಗಿದೆ,
ಬೆಂಗಳೂರಿನಲ್ಲಿ ಶುಕ್ರವಾರ ೪ ಪ್ರಕರಣಗಳು ಪತ್ತೆಯಾಗಿದೆ ಹಾಗಾಗಿ ಕೋಲಾರದಿಂದ ಪ್ರತಿನಿತ್ಯ ಸಾವಿರಾರು ಮಂದಿ ಬೆಂಗಳೂರಿಗೆ ಪ್ರಯಾಣಿಸುವುದರಿಂದ ಸಾರ್ವಜನಿಕರಿಗೆ ಮುನ್ನೆಚ್ಚರಿಕೆಯ ಅರಿವು ಮೂಡಿಸುವ ಮೂಲಕ ಮುಂದಿನ ಸಾವು-ನೋವುಗಳನ್ನು ನಿಯಂತ್ರಿಸ ಬೇಕಾಗಿದೆ. ಮಾಸ್ಕ್‌ನ್ನು ಕಡ್ಡಾಯಗೊಳಿಸ ಬೇಕಾಗಿದೆ. ಸಾರ್ವಜನಿಕರು ಜನದಟ್ಟನೆ ಕೊಡುವ ಜಾಗದಲ್ಲಿ ಮಾಸ್ಕ್ ಧರಿಸುವುದು ಸೂಕ್ತವಾದ ಕ್ರಮವಾಗಿದೆ.
ಕೊರೋನಾದ ಲಕ್ಷಣಗಳು ಕಂಡು ಬಂದಲ್ಲಿ ಸರ್ಕಾರಿ ಆಸ್ಪತ್ರೆಗಳು ಕೊರೋನಾ ಟೆಸ್ಟ್‌ಗಳನ್ನು ಪ್ರಾರಂಭಿಸ ಬೇಕು. ವಿಶೇಷ ಕೊಠಡಿಗಳಿಗೆ ಹಾಗೂ ಅಕ್ಸಜನ್ ಪ್ಲಾಂಟ್, ವೆಂಟಿಲೇಟರ್‌ಗಳು ಮುಂಜಾಗೃತಕ್ರಮವಾಗಿ ದಾಸ್ತನು ಮಾಡಿ ಕೊಳ್ಳಬೇಕು, ಕೊರೋನಾ ನಿರೋಧಕ ಲಸಿಕೆಗಳು ಸಿದ್ದಪಡೆಸಿ ಕೊಂಡಿರ ಬೇಕು,
ಕೋರೋನಾ ಲಕ್ಷಣಗಳು ಜ್ವರ, ಸ್ರವಿಸುವ ಮೂಗು, ಗಂಡಲು ನೋವು, ತಲೆನೋವು, ಆಯಾಸ ಬಳಲಿಕೆ ಮುಂತಾದವು ಕಾಣಿಸು ಕೊಳ್ಳುತ್ತದೆ. ಕರ್ನಾಟಕದಲ್ಲಿ ಕೋವಿಡ್-೧೯ ಪ್ರಕರಣಗಳು ಹರಡುತ್ತಿರುವ ಹಿನ್ನಲೆಯಲ್ಲಿ ಊಸಿರಾಟ ಮತ್ತು ಹೃದಯ ಸಂಬಂಧಿ ಕಾಯಿಲೆಗಳಿಂದ ದಾಖಲಾಗುವ ರೋಗಿಗಳಿಂದ ಸ್ಯಾಂಪಲ್‌ಗಳನ್ನು ಸಂಗ್ರಹಿಸಿ ಕೋವಿಡ್ ಟೆಸ್ಟ್‌ಗಳನ್ನು ಕಡ್ಡಾಯವಾಗಿ ಮಾಡ ಬೇಕಾಗಿದೆ.ಕೋರೋನಾ ಕೋಲಾರಕ್ಕೆ ಕಾಲಿಡುವ ಮುನ್ನ ಕಳೆದ ವರ್ಷದ ಅಂಕಿಅಂಶಗಳಿಗೆ ಸಮಾಂತರವಾಗಿ ಔಷಧಿಗಳನ್ನು ಲಸಿಕೆಗಳನ್ನು ಪರೀಕ್ಷಾ ಕಿಟ್‌ಗಳನ್ನು ಸಂಗ್ರಹಿಸಿ ಇಟ್ಟು ಕೊಳ್ಳುವುದು ಸೊಕ್ತವಾಗಿದೆ.
ಈಗಾಗಲೇ ಕೇರಳ, ಮಹಾರಾಷ್ಟ್ರ, ದೆಹಲಿ ಸೇರಿದಂತೆ ವಿವಿಧ ರಾಜ್ಯಗಳಲ್ಲಿ ಕೊರೋನಾ ಸೊಂಕು ಹರಡುತ್ತಿದೆ. ಮಂದಗತಿಯಲ್ಲಿ ಕಾಣಿಸಿ ಕೊಂಡ ಕೋರಾನ ಮುಂದಿನ ದಿನಗಳಲ್ಲಿ ತೀವ್ರವಾಗಿ ಕಾಣಿಸಿಕೊಳ್ಳುವುದನ್ನು ಅಲ್ಲಗೆಳೆಯಲು ಸಾಧ್ಯವಾಗದೆ ಹಾಗಾಗಿ ಜಿಲ್ಲಾಡಳಿತವು ಆರೋಗ್ಯ ಇಲಾಖೆಯೊಂದಿಗೆ ಚರ್ಚಿಸಿ ತುರ್ತು ಕ್ರಮಗಳನ್ನು ಕೈಗೊಳ್ಳುವುದು ಸೊಕ್ತವಾಗಿದೆ ಎಂಬುದು ಪ್ರಜ್ಞಾವಂತ ನಾಗರಿಕರ ಸಲಹೆಯಾಗಿದೆ.