Home ಜಿಲ್ಲೆ ಕಲಬುರಗಿ ಸೌಹಾರ್ದ ಸಂಘ ಸಂಸ್ಥೆಗಳು ಜನ ಸಹಕಾರಿಯಾಗಿ ಕೆಲಸ ಮಾಡುತ್ತಿವೆ:ನೀಲಕಂಠ ಮೂಲಗೆ

ಸೌಹಾರ್ದ ಸಂಘ ಸಂಸ್ಥೆಗಳು ಜನ ಸಹಕಾರಿಯಾಗಿ ಕೆಲಸ ಮಾಡುತ್ತಿವೆ:ನೀಲಕಂಠ ಮೂಲಗೆ

ಕಲಬುರಗಿ:ಆ.3:ಸೌಹಾರ್ದ ಸಹಕಾರಿ ಸಂಘಗಳು ಇಂದು ರಾಜ್ಯಾದ್ಯಂತ ರಾಷ್ಟ್ರೀಕರತ ಬ್ಯಾಂಕಗಳಿಗೆ ಪೈಪೆÇೀಟಿಯಾಗಿ ಬೆಳೆಯುತ್ತಿವೆ.ಜನರ ಸಹಕಾರಿಯಾಗಿ ಕೆಲಸ ಮಾಡುತ್ತಿವೆ ಎಂದು ಉದ್ಯಮಿ ಹಾಗೂ ಕಾಂಗ್ರೆಸ್ ಮುಖಂಡ ನೀಲಕಂಠ ಮೂಲಗೆ ಅವರು ಶ್ಲಾಘೀಸಿದರು.

ನಗರದ ಸಪ್ತಗಿರಿ ಹೋಟೇಲ್ ಸಭಾಂಗಣದಲ್ಲಿ ಕಲಬುರಗಿ ಚಾಣಕ್ಯ ಸೌಹಾರ್ದ ಸಹಕಾರಿ ಸಂಘ ನಿಯಮಿತ ಹಮ್ಮಿಕೊಂಡಿದ್ದ 3 ನೆಯ ಸಾಮಾನ್ಯ ಸಭೆ ಹಾಗೂ ವಾರ್ಷಿಕೋತ್ಸವ ಸಮಾರಂಭವನ್ನು ಉದ್ಘಾಟಿಸಿ ಮಾತನಾಡಿದ ಅವರು ಸೌಹಾರ್ದ ಸಂಘಗಳು ಕಡಿಮೆ ದರದಲ್ಲಿ ಹಾಗೂ ಸಕಾಲಕ್ಕೆ ಸಾಲ ನೀಡುತ್ತಿವೆ.ಇದರಿಂದ ರೈತರಿಗೆ,ವ್ಯಾಪಾರಸ್ಥರಿಗೆ ಹಾಗೂ ಸಾಮಾನ್ಯ ಜನರಿಗೂ ಬಹಳಷ್ಟು ಸಹಾಯವಾಗುತ್ತಿವೆ ಎಂದರು.

ಶ್ರೀನಿವಾಸ ಸರಡಗಿಯ ಮಹಾಲಕ್ಷೀ ಶಕ್ತಿ ಪೀಠದ ಪೂಜ್ಯ ಡಾ.ಅಪ್ಪಾರಾವ ದೇವಿ ಮುತ್ಯಾ ಅವರು ದಿವ್ಯಸಾನಿಧ್ಯ ವಹಿಸಿ ಮಾತನಾಡಿದ ಅವರು ಇಂದು ಸೌಹಾರ್ದ ಸಹಕಾರಿ ಸಂಘಗಳು ಜನರ ಹೆಚ್ಚಿನ ವಿಶ್ವಾಸ ಗಳಿಸುತ್ತಿವೆ.ಸಂಘದ ಜೊತೆ ಸಂಬಂಧ ಹಾಗೂ ವ್ಯವಹಾರ ಉತ್ತಮ ಇದ್ದರೆ ಆಪತ್ಕಾಲದಲ್ಲಿ ನೆರವಿಗೆ ಬರುತ್ತವೆ ಎಂದು ಸದಸ್ಯರಿಗೆ ಕಿವಿಮಾತು ಹೇಳಿದರು.ಮುಖ್ಯ ಅತಿಥಿಯಾಗಿ ಆಗಮಿಸಿದ್ದ ಕಲಬುರಗಿ ಸೌಹಾರ್ದ ಒಕ್ಕೂಟದ ಅಧ್ಯಕ್ಷ ಎಸ್.ಎಸ್.ಪಾಟೀಲ ಮಾತನಾಡಿ ಅಲ್ಪ ಸಮಯದಲ್ಲೇ ಕಲಬುರಗಿ ಚಾಣಕ್ಯ ಸೌಹಾರ್ದ ಸಹಕಾರಿ ಸಂಘ ಎತ್ತರಕ್ಕೆ ಬೆಳೆದಿದೆ.ಇದಕ್ಕೆ ಸದಸ್ಯರೊಂದಿಗೆ ಇರುವ ಒಡನಾಟವೇ ಕಾರಣ ಎಂದು ಶ್ಞಾಘೀಸಿದರು.ಸಂಘದ ಅಧ್ಯಕ್ಷತೆ ವಹಿಸಿ ಮಾತನಾಡಿದರು.ಡಾ.ಲಿಂಗರಾಜ ಸಿರಗಾಪೂರ ಅಧ್ಯಕ್ಷತೆ ವಹಿಸಿದ್ದರು.ಹೋರಾಟಗಾರ ಡಾ.ಎ.ಎಸ್ .ಭದ್ರಶೆಟ್ಟಿ ವೇದಿಕೆ ಮೇಲೆ ಇದ್ದರು.ನಿರ್ದೇಶಕ ಸೂರ್ಯಕಾಂತ ಸೂಜಾತ್ಯ ಸ್ವಾಗತಿಸಿದರು.ಜಿ.ಜಿ.ವಣಿಕ್ಯಾಳ ನಿರೂಪಿಸಿದರು.ಉಪಾಧ್ಯಕ್ಷ ಶಿವರಾಜ ಜಮಶೆಟ್ಟಿ,ನಿರ್ದೇಶಕರುಗಳಾದ ಬಸವರಾಜ ಮಾಗಿ,ಪ್ರಭು ಪಾಟೀಲ,ಪದಮಗುಂಡ ಕಣಮಸ್,ಶಿವಶಂಕರ ಪಾಟೀಲ,ಸಂಜೀವಕುಮಾರ ಕರಿಕಲ್,ರೇಷ್ಮಾ ಸಿರಗಾಪೂರ,ಸಾವಿತ್ರಿ ತೆಲಕುಣಿ ಮುಖ್ಯಕಾರ್ಯ ನಿರ್ವಾಹಕ ಮಂಜುನಾಥ ಸಿರಗಾಪೂರ,ಸದಸ್ಯರಾದ ಸೂರ್ಯಕಾಂತ ಕೆ.ಬಿ,ಮಲ್ಲಿನಾಥ ಸಂಗಶೆಟ್ಟಿ,ಅಮೀತ ನಾಗನಹಳ್ಳಿ,ಶಿವು ಧಂಗಾಪೂರ,ಗುರುಲಿಂಗಪ್ಪ ಟೆಂಗಳಿ,ಶಿವುಕುಮಾರ ಬಗಲೂರ,ಮಲ್ಲಯ್ಯಸ್ವಾಮಿ ಗಂಗಾಧರ ಮಠ,ಮನೋಹರ ಬಡಶೇಷಿ,ಕುಸುಮಾವತಿ,ವಿಜಯಲಕ್ಷೀ ಪಾಟೀಲ,ಗೀತಾ ಸಿರಗಾಪೂರ ಸೇರಿದಂತೆ ನೂರಾರು ಸದಸ್ಯರು ಭಾಗವಹಿಸಿದ್ದರು.