ಪ್ರಾಮಾಣಿಕತೆಯಿಂದ ಸಹಕಾರಿ ರಂಗ ಬೆಳೆಯಲು ಸಾಧ್ಯ:ಸಚಿವ ಶಿವಾನಂದ

ತಾಳಿಕೋಟೆ : ಜ.೧೩: ದುಡ್ಡನ್ನು ಯಾವರೀತಿಯಾಗಿ ಚಲಾವಣೆ ಮಾಡಬೇಕೆಂಬುದು ನೋಡಿ ಕಲಿಯಬೇಕಾದರೆ ವಿಜಯಪುರ ಜಿಲ್ಲೆಯ ತಾಳಿಕೋಟೆಯಲ್ಲಿ ನೋಡಿ ಕಲಿಯಬೇಕಾಗಿದೆ ಪ್ರಾಮಾಣಿಕತೆಗೆ ಇನ್ನೊಂದು ಹೆಸರೇ ತಾಳಿಕೋಟೆ ಜನರಾಗಿದ್ದಾರೆಂಬುದು ಸಹಕಾರಿ ಕ್ಷೇತ್ರದ ಬೆಳವಣಿಗೆ ನೋಡಿದರೆ ತಿಳಿಯುತ್ತದೆ ಎಂದು ಜವಳಿ ಮತ್ತು ಕಬ್ಬು ಅಭಿವೃದ್ದಿ ಮತ್ತು ಸಕ್ಕರೆ ಹಾಗೂ ಕೃಷಿ ಉತ್ಪನ್ನ ಮಾರುಕಟ್ಟೆ ಸಚಿವರು, ಡಿಸಿಸಿ ಬ್ಯಾಂಕ್‌ನ ಅಧ್ಯಕ್ಷರಾದ ಶಿವಾನಂದ ಪಾಟೀಲ ಅವರು ಹೇಳಿದರು.
ಸೋಮವಾರರಂದು ಪಟ್ಟಣ ವಿಜಯಪುರ ರಸ್ತೆಗೆ ಹೊಂದಿಕೊAಡು ಶಿವಶರಣೆ ಹೇಮರಡ್ಡಿ ಮಲ್ಲಮ್ಮ ಪತ್ತಿನ ಸಹಕಾರಿ ಸಂಘ ನಿ,ದ ನೂತನ ಕಟ್ಟಡದ ಅಡಿಗಲ್ಲು ಹಾಗೂ ನೂತನ ಕಟ್ಟಡದ ಭೂಮಿ ಪೂಜೆಯನ್ನು ನೇರವೇರಿಸಿ ಮಾತನಾಡುತ್ತಿದ್ದ ಅವರು ವ್ಯವಹಾರ, ವ್ಯಾಪಾರಕ್ಕೆ ಇನ್ನೊಂದು ಹೇಸರೆ ತಾಳಿಕೋಟೆಯಾಗಿದೆ ರೈತರ ಬಧುಕು ಹಿಡಿದುಕೊಂಡು ಎಲ್ಲದರಲ್ಲಿಯೂ ಮುಂಚೂಣಿಯ ವ್ಯಾಪಾರ ನಡೆಯುತ್ತಿದೆ ಇಲ್ಲಿ ಬಂದಿರುವ ಜನ ದೈನಂದಿನ ಬಧುಕನ್ನು ಕಟ್ಟಿಕೊಳ್ಳಲಿಕ್ಕೆ ದಾರಿ ಮಾಡಿಕೊಂಡಿದ್ದಾರೆ ವ್ಯವಹಾರದಲ್ಲಿ ಕತ್ತಲು ಆಗುತ್ತಿದ್ದಂತೆ ಎಲ್ಲ ಊರುಗಳೇಲ್ಲವೂ ಮಲಕೋತಾವೇ ತಾಳಿಕೋಟೆಯಲ್ಲಿ ರಾತ್ರಿ ೧೧ ಗಂಟೆಯವರೆಗೆ ವ್ಯವಹಾರ ನಡೆಯುತ್ತಿರುತ್ತದೆ ಸಾಕಷ್ಟು ಕಡೆಗಳಲ್ಲಿ ಸಹಕಾರಿ ಸಂಘಗಳು ಹುಟ್ಟಿ ಕೆಲವೇ ವರ್ಷಗಳಲ್ಲೇ ಮುಚ್ಚಿ ಹೋಗುತ್ತವೆ ಆದರೆ ತಾಳಿಕೋಟೆಯಲ್ಲಿ ಹುಟ್ಟಿರುವ ಸಹಕಾರಿ ಸಂಘಗಳು ಹುಟ್ಟಿ ಬಹು ಎತ್ತರಕ್ಕೇ ಬೇಳೆದಿವೆ ಹೇಮರಡ್ಡಿ ಮಲ್ಲಮ್ಮ ಪತ್ತಿನ ಸಹಕಾರಿ ಸಂಘ ಹುಟ್ಟಿ ಅಲ್ಪ ಅವಧಿಯಲ್ಲಿಯೇ ಬಹು ಎತ್ತರದಲ್ಲಿ ಬೆಳೆದು ಸ್ವಂತ ಕಟ್ಟಡವನ್ನು ಹೊಂದುತ್ತಿರುವದು ಸಂತಸದ ಸಂಗತಿಯಾಗಿದೆ ಬೆಳಗಾವಿ ವಿಭಾಗದಲ್ಲಿ ಸಹಕಾರಿ ಕ್ಷೀಣಿಸ್ತಾಯಿದೆ ನಮ್ಮ ವಿಜಯಪುರ ಜಿಲ್ಲೆಯಲ್ಲಿ ಬೆಳೆಯುತ್ತಿದೆ ಇದೊಂದು ಖುಷಿ ವಿಚಾರವಾಗಿದೆ ಎಂದ ಅವರು ಹಾಲು ಉತ್ಪಾದನೆಯಲ್ಲಿ ರಾಜ್ಯದಲ್ಲಿಯೇ ೩ ನೇ ಸ್ಥಾನದಲ್ಲಿ ಬೆಳೆದು ನಿಂತಿದೆ ಇದು ಖುಷಿ ವಿಚಾರವೆಂದ ಅವರು ಬರುವ ವರ್ಷದಲ್ಲಿ ತಾಳಿಕೋಟೆ ಎಪಿಎಂಸಿಗೆ ನಾನು ಮತ್ತು ಶಾಸಕ ಅಪ್ಪಾಜಿ ನಾಡಗೌಡರು ಸೇರಿ ೧೦ ಕೋಟಿ ರೂ. ಖರ್ಚು ಮಾಡಿ ಮಾದರಿಯ ಎಪಿಎಂಸಿಯಾರ್ಡನ್ನಾಗಿ ಮಾಡುತ್ತೇವೆಂದರು.
ಇನ್ನೋರ್ವ ಕರ್ನಾಟಕ ಸರ್ಕಾರದ ಸಾಬೂನು ಮಾರ್ಜಕ ನಿಗಮದ ಅಧ್ಯಕ್ಷರು ಮುದ್ದೇಬಿಹಾಳ ಮತಕ್ಷೇತ್ರದ ಶಾಸಕರಾದ ಸಿ.ಎಸ್.ನಾಡಗೌಡ(ಅಪ್ಪಾಜಿ) ಅವರು ನೂತನ ಕಟ್ಟಡದ ಭೂಮಿ ಪೂಜೆ ನಂತರ ಶಿಲನ್ಯಾಸವನ್ನು ನೇರವೇರಿಸಿದರು.
ಕಾರ್ಯಕ್ರಮದ ದಿವ್ಯ ಸಾನಿದ್ಯ ವಹಿಸಿದ ಶ್ರೀ ಖಾಸ್ಗತೇಶ್ವರ ಮಠದ ಬಾಲ ಶಿವಯೋಗಿ ಶ್ರೀ ಸಿದ್ದಲಿಂಗ ದೇವರು ಜನ್ಮ ತಾಳಿ ಅಲ್ಪ ಅವಧಿಯಲ್ಲಿಯೇ ಸ್ವಂತ ಕಟ್ಟಡದ ಭಾಗ್ಯ ಹೊಂದುತ್ತಿರುವ ಶಿವಶರಣೆ ಹೇಮರಡ್ಡಿ ಮಲ್ಲಮ್ಮ ಬ್ಯಾಂಕಿನ ನಿಸ್ಪಕ್ಷಪಾತ ಆಡಳಿ ಕಾರ್ಯವೈಖರ್ಯ ಕುರಿತು ಮೇಚ್ಚುಗೆ ವ್ಯಕ್ತಪಡಿಸಿದರು.
ಇದೇ ಸಮಯದಲ್ಲಿ ಸದರಿ ಬ್ಯಾಂಕಿನ ಕಟ್ಟಡಕ್ಕೆ ಜಾಗೆ ನೀಡಲು ಹಿಂದೆ ಸಹಕರಿಸಿದ್ದ ಎಪಿಎಂಸಿ ಮಾಜಿ ಅಧ್ಯಕ್ಷ ಮಲ್ಲನಗೌಡ ಯಾತಗಿರಿ, ಗುರಣ್ಣ ತಾರನಾಳ, ಒಳಗೊಂಡು ಅತಿಥಿ ಮಹೋದಯರನ್ನು ಸನ್ಮಾನಿಸಿ ಗೌರವಿಸಲಾಯಿತು.
ಕಾರ್ಯಕ್ರಮದ ದಿವ್ಯ ಸಾನಿದ್ಯವನ್ನು ಇಂಗಳೇಶ್ವರ ಶ್ರೀ ಜಗದ್ಗುರು ಡಾ.ಸಿದ್ದಲಿಂಗ ಸ್ವಾಮಿಗಳು ವಹಿಸಿದ್ದರು.
ಕಾರ್ಯಕ್ರಮದ ಅಧ್ಯಕ್ಷತೆಯನ್ನು ಶಿವಶರಣೆ ಹೇಮರಡ್ಡಿ ಮಲ್ಲಮ್ಮ ಪತ್ತಿನ ಸಹಕಾರಿ ಸಂಘ ನಿ,ದ ಅಧ್ಯಕ್ಷರಾದ ಬಿ.ಎನ್.ಹಿಪ್ಪರಗಿ ಅವರು ವಹಿಸಿದ್ದರು.
ಈ ಸಮಯದಲ್ಲಿ ಡಿಸಿಸಿ ಬ್ಯಾಂಕ್ ನಿರ್ದೇಶಕ ಬಿ.ಎಸ್.ಪಾಟೀಲ(ಯಾಳಗಿ), ಮಾಜಿ ಶಾಸಕ ಶಿವಪುತ್ರಪ್ಪ ದೇಸಾಯಿ, ಭರತಗೌಡ ಪಾಟೀಲ(ನಡಹಳ್ಳಿ), ಸಹಕಾರಿ ಸಂಘಗಳ ಉಪನಿಬಂದಕ ಚೇತನ ಭಾವಿಕಟ್ಟಿ, ಎಪಿಎಂಸಿ ಕಾರ್ಯದರ್ಶಿ ರಾಜು ರಾಠೋಡ, ಸಹಕಾರಿಯ ಉಪಾಧ್ಯಕ್ಷ ರವಿಂದ್ರನಾಥ ಪಾಟೀಲ, ನಿರ್ದೇಶಕ ಮಂಡಳಿಯವರಾದ ಹಣಮಗೌಡ ಗೂಗಲ್ಲ, ಪ್ರಭುಗೌಡ ಮದರಕಲ್ಲ, ಶರಣಗೌಡ ಇಬ್ರಾಹಿಂಪೂರ, ಚಿನ್ನಪ್ಪಗೌಡ ಮಾಳಿ, ಸುಭಾಸಚಂದ್ರ ಗುರಡ್ಡಿ, ಶಾಂತಗೌಡ ಪಾಟೀಲ(ಕೇಸರಭಾವಿ), ಶ್ರೀಮತಿ ಶಾಂತಾ ಕಂತಲಗಾವಿ, ಶ್ರೀಮತಿ ಸುಜಾತಾ ಮಂಗಳೂರ, ರಮೇಶ ನಾಯಕ, ವ್ಯವಸ್ಥಾಪಕ ಚಂದ್ರಶೇಖರ ಮಾಲಿಪಾಟೀಲ, ಮೊದಲಾದವರು ಉಪಸ್ಥಿತರಿದ್ದರು.