ಮುಸ್ತರಿ ಗ್ರಾಮದಲ್ಲಿ ಸಹಕಾರ ಸಪ್ತಾಹ

ಬೀದರ,ನ.20 : ಹುಮನಾಬಾದ್ ತಾಲೂಕಿನ ಮುಸ್ತರಿ ಪ್ರಾಥಮಿಕ ಕೃಷಿ ಪತ್ತಿನ ಸಹಕಾರ ಸಂಘದಲ್ಲಿ 72ನೇ ಅಖಿಲ ಭಾರತ ಸಹಕಾರ ಸಪ್ತಾಹದ ಅಂಗವಾಗಿ 6ನೇ ದಿನದ ವಿಷಯ ಪ್ರವಾಸೋದ್ಯಮ, ಆರೋಗ್ಯ ಹಸಿರು ಇಂಧನ, ಪ್ಲಾಟ್ ಫಾರಂ, ಸಹಕಾರಿ ಸಂಸ್ಥೆಗಳು ಕಿಚನ್ ಸಹಕಾರ ಸಂಘಗಳು ವ್ಮತ್ತಿತರ ಉದಯೋನ್ಮುಖ ಸಹಕಾರ ಸಂಘಗಳನ್ನು ಅನುಕೂಲಕರ ಪ್ರದೇಶಗಳಿಗೆ ವಿಸ್ತರಣೆ ದಿನವನ್ನು ಜರುಗಿಸಲಾಯಿತು.
ಕಾರ್ಯಕ್ರಮವನ್ನು ಬೀದರ ಜಿಲ್ಲಾ ಸಹಕಾರ ಕೇಂದ್ರ ಬ್ಯಾಂಕ್ ನಿರ್ದೇಶಕ ಉಮೇಶ ಕುಲಕರ್ಣಿ ಅವರು ಉದ್ಘಾಟಿಸಿ ಮಾತನಾಡಿ, ಸಹಕಾರ ಕ್ಷೇತ್ರ ಬಹಳ ಪರಿಣಾಮಕಾರಿಯಾಗಿ ಕೆಲಸ ನಿರ್ವಹಿಸುತ್ತಿದೆ. ಸಹಕಾರ ರಂಗ ಮೂಲಕ ಮುಸ್ತರಿ ಗ್ರಾಮಕ್ಕೆ ಅಂಬುಲೆನ್ಸ ವ್ಯವಸ್ಥೆ ಮಾಡಬೇಕು ಎಂದು ಹೇಳಿದರು. ಸಹಕಾರ ಬ್ಯಾಂಕಿನಿಂದ ಎಲ್ಲಾ ಸೌಲಭ್ಯಗಳನ್ನು ಒದಗಿಸಲಾಗುವುದು. ಸಹಕಾರಿ ಬಂಧುಗಳು ತಮ್ಮ ಆರೋಗ್ಯದ ಹೆಚ್ಚಿನ ಒತ್ತು ಕೊಡಬೇಕು ಎಂದರು. ಆರೋಗ್ಯದ ಬಗ್ಗೆ ಹೆಚ್ಚು ಕಾಳಜಿ ವಹಿಸಬೇಕು. ಆರೋಗ್ಯ ಚೆನ್ನಾಗಿದ್ದರೆ ಮಾತ್ರ ಯಾವುದೇ ಕೆಲಸಗಳನ್ನು ಮಾಡಲು ಸಾಧ್ಯವಾಗುತ್ತದೆ ಎಂದರು.ಕಾರ್ಯಕ್ರಮದ ಅಧ್ಯಕ್ಷತೆಯನ್ನು ಮುಸ್ತರಿ ಪ್ರಾಥಮಿಕ ಕೃಷಿ ಪತ್ತಿನ ಸಹಕಾರ ಸಂಘದ ಅಧ್ಯಕ್ಷ ಈಶ್ವರ ಎಸ್. ಜಕ್ಕಾ ವಹಿಸಿದ್ದರು.
ಕಾರ್ಯಕ್ರಮದಲ್ಲಿ ಪಿಕೆಪಿಎಸ್ ಮುಸ್ತರಿ ನಿರ್ದೇಶಕರುಗಳಾದ ಗಂಗಾಧರ, ಎಂ. ಡಿ ಐಸಾನ್ ವೀರಪ್ಪ ತೂಗಾಂವೆ, ಶ್ರೀದೇವಿ,ಮೈನೋದ್ದೀನ್ ಮುಸ್ತರಿ ಶ್ರೀ ವಿನಾಯಕ ರೆಡ್ಡಿ ಪಿಕೆಪಿಎಸ್ ಉಡಬಾಳಉಪಸ್ಥಿತರಿದ್ದರು. ವೀರೇಶ ತೂಗಾಂವ ಅವರಿಗೆ ಸಹಕಾರ ರತ್ನ ಪ್ರಶಸ್ತಿ ಪುರಸ್ಕøತರಿಗೆ ವಿಶೇಷವಾಗಿ ಸನ್ಮಾನಿಸಲಾಯಿತು.ನಿವೃತ್ತ ಪ್ರಾಂಶುಪಾಲ ದೇವಿದಾಸ ತುಮಕುಂಟೆಉಪನ್ಯಾಸ ನೀಡಿದರು.ಕಾರ್ಯಮದಲ್ಲಿ ಪ್ರಾರ್ಥನೆ ರೇಣುಕಾ ಪಾಟೀಲ ನಡೆಸಿಕೊಟ್ಟರು. ಮಾರುತಿ ನಿರೂಪಣೆ ಮಾಡಿದರು ಮತ್ತು ವಂದನಾರ್ಪಣೆ ಹೆಚ್ ಆರ್. ಮಲ್ಲಮ್ಮ ನಡೆಸಿಕೊಟ್ಟರು.