ಮತ ಚೀಟಿ ಅಭಿಯಾನಕ್ಕೆ ಸಹಕಾರ ಅಗತ್ಯ

ಕೆ.ಆರ್.ಪುರ, ನ.೫-ಮತಗಳ್ಳತನ ಬಗ್ಗೆ ದೇಶದಲ್ಲೆ ಅತಿಹೆಚ್ಚು ಸಹಿ ಸಂಗ್ರಹ ಮಹದೇವಪುರ ಕ್ಷೇತ್ರದಲ್ಲಿ ನಡೆಯಬೇಕು, ಇಲ್ಲಿಂದಲೇ ಪ್ರಾರಂಭವಾದ ಅಭಿಯಾನಕ್ಕೆ ಇಲ್ಲಿ ಅತಿಹೆಚ್ಚು ಸಹಕಾರ ದೊರೆಯಬೇಕು ಎಂದು ಬೆಂಗಳೂರು ಪೂರ್ವ ಜಿಲ್ಲಾ ಅಧ್ಯಕ್ಷ ಡಿ.ಕೆ.ಮೋಹನ್ ಅವರು ತಿಳಿಸಿದರು.


ಮಹದೇವಪುರ ಕ್ಷೇತ್ರದ ಹಿಂದುವರ್ಗಗಳ ಸಮಾವೇಶದ ಪೂರ್ವ ಭಾವಿ ಸಭೆಯಲ್ಲಿ ಅವರು ಮಾತನಾಡಿದರು.


ಮಹದೇವಪುರ ಕ್ಷೇತ್ರದಿಂದಲೇ ಮತಗಳ್ಳತನದ ಆರೋಪ ಬೆಳಕಿಗೆ ಬಂದಿದ್ದು ಮುಂದಿನ ಚುನಾವಣೆಯಲ್ಲಿ ಮತಗಳ್ಳತನಕ್ಕೆ ಕಡಿವಾಣ ಹಾಕಬೇಕು ಎಂದು ನುಡಿದರು.
ಹಿಂದುಳಿದ ವರ್ಗಗಳ ಸಮಾವೇಶ ಮುಂದಿನ ಜಿಬಿಎ ಚುನಾವಣೆಗೆ ಮಾರ್ಗದರ್ಶನವಾಗಿದ್ದು,ಸಂಘಟನೆಗೆ ಸಹಕಾರಿಯಾಗಲಿದೆ ಎಂದು ನುಡಿದರು.


ಬೆಂಗಳೂರು ಪೂರ್ವ ಜಿಲ್ಲಾ ಓಬಿಸಿ ಅಧ್ಯಕ್ಷ ಕುಪ್ಪಿ ಮಂಜುನಾಥ ಅವರು ಹಿಂದುಳಿದ ವರ್ಗಗಳ ಸಮಾವೇಶದ ಯಶಸ್ವಿಗೆ ಪ್ರತಿಯೊಬ್ಬರು ಕೈಜೋಡಿಸುವ ಮೂಲಕ ಸಮಾವೇಶವನ್ನು ಯಶಸ್ವಿಗೊಳಿಸಬೇಕು ಎಂದು ನುಡಿದರು.


ಈ ಸಂದರ್ಭದಲ್ಲಿ ಮಾಜಿ ಸಚಿವ ನಾಗೇಶ್, ಜಿಲ್ಲಾಧ್ಯಕ್ಷ ನಂದಕುಮಾರ್,ಬ್ಲಾಕ್ ಅಧ್ಯಕ್ಷರಾದ ಮಯಾಂಕ್ ಬಾಬು,ವಿನೋದ, ಪೂರ್ವ ತಾಲ್ಲೂಕಿನ ಗ್ಯಾರಂಟಿ ಅಧ್ಯಕ್ಷರಾದ ಪ್ರಶಾಂತ್,ಕ್ಷೇತ್ರದ ಅಧ್ಯಕ್ಷ ಸುರೇಶ್,ಮುಖಂಡರಾದ ನಿರ್ಮಾಪಕ ಯಲ್ಲಪ್ಪ,ಚಾನ್ ಪಾಷ ಇದ್ದರು.