ಆರ್ಥಿಕ ಬೆಳವಣಿಗೆಯಲ್ಲಿ ಸಹಕಾರವೇ ಮೂಲ

ಶಹಾಪುರ:ನ.24: ಆರ್ಥಿಕ ಬೆಳವಣಿಗೆಯಲ್ಲಿ ಸಹಕಾರ ವಲಯದ ಪಾತ್ರ ಬಹಳ ಮಹತ್ವದ್ದಾಗಿದೆ. ಸಾಮಾಜಿಕ ಮತ್ತು ಆರ್ಥಿಕ ಅಭಿವೃದ್ಧಿಗೆ ಸಹಕಾರ ಸಂಸ್ಥೆಗಳು ದೊಡ್ಡ ಕೊಡಗೆಯನ್ನು ನೀಡುತ್ತಿವೆ ಎಂದು ಸಚಿವ ಶರಣಬಸ್ಸಪ್ಪಗೌಡ ದರ್ಶನಾಪುರ ಹೇಳಿದರು.

ನಗರದ ಗೃಹ ನಿರ್ಮಾಣ ನೌಕರರ ಸಹಕಾರ ಸಂಘದ ಭವನದಲ್ಲಿ ನಡೆದ ಕರ್ನಾಟಕ ರಾಜ್ಯ ಸಹಕಾರ ಮಾಹಾಮಂಡಳ ನಿಯಮಿತ ಬೆಂಗಳೂರ, ಯಾದಗಿರಿ ಜಿಲ್ಲಾ ಸಹಕಾರ ಒಕ್ಕೂಟ, ಸಹಕಾರ ಇಲಾಖೆ ಯಾದಗಿರಿ, ನೌಕರರ ಗೃಹ ನಿರ್ಮಾಣ ಸಹಕಾರ ಸಂಘ ಶಹಾಪುರ ಮತ್ತು ತಾಲೂಕಿನ ಸಹಕಾರ ಸಂಘಗಳ ಆಶ್ರಯದಲ್ಲಿ ಹಮ್ಮಿಕೊಂಡ ಅಖಿಲ ಭಾರತ ಸಹಕಾರದ 72ನೇಯ ಸಪ್ತಾಹ ಕಾರ್ಯಕ್ರಮದ ಸಮಾರೋಪ ಸಮಾರಂಭವನ್ನು ಉದ್ಘಾಟಿಸಿ ಮಾತನಾಡಿದ ಅವರು, ಗ್ರಾಮೀಣ ಭಾಗದ ಆರ್ಥಿಕ ಚಟುವಟಿಕೆಗಳಿಗೆ ಸಹಕಾರ ವಲಯವೇ ಮೂಲಾಧಾರವಾಗಿದೆ ಎಂದರು.

ಸಹಕಾರ ಸಂಸ್ಥೆಗಳು ಪಾರದರ್ಶಕವಾಗಿ, ಸುವ್ಯವಸ್ಥಿತ ಕಾನೂನು, ಮತ್ತು ನಿಯಮಗಳ ಪಾಲನೆ ಮೂಲಕ, ಉತ್ತಮ ಆಡಳಿತ ನೀಡಿ ಸಂಘಗಳು ವಿಶ್ವಾಸಾರ್ಹತೆ ಹೆಚ್ಚಿಸಿಕೊಳ್ಳಬೇಕು. ಇತರೆ ಆರ್ಥಿಕ ಸಂಸ್ಥೆಗಳಂತೆಯೆ ಸುಲಭವಾಗಿ ಮತ್ತು ಕೈಗೆಟಕುವ ಹಣಕಾಸಿನ ಅವಕಾಶಗಳನ್ನು ಒದಗಿಸಬೇಕು. ಗ್ರಾಮೀಣ ಮತ್ತು ಪಟ್ಟಣಗಳ ರೈತರು, ಯುವಜನರು, ಸಹಕಾರಿವಲಯದ ಮೂಲಕ ಉತ್ತಮ ಬದುಕು ಕಟ್ಟಿಕೊಳ್ಳಲು ಸಂಘಗಳು

ಶಹಾಪುರದಲ್ಲಿ ಜರುಗಿದ ಅಖಿಲ ಭಾರತ ಸಹಕಾರ 72ನೇ ಸಪ್ತಾಹ ಕಾರ್ಯಕ್ರಮದ ಸಮಾರೋಪ ಸಮಾರಂಭದಲ್ಲಿ ಸಚಿವ ದರ್ಶನಾಪುರಗೆ ಹೃದಯಸ್ಪರ್ಶಿಯಾಗಿ ಸನ್ಮಾನಿಸಲಾಯಿತು.

ಸಹಕಾರ ನೀಡಬೇಕು ಎಂದು ತಿಳಿಸಿದರು. ನಿರ್ದೇಶಕ ಸುರೇಶ ಸಜ್ಜನ ಪ್ರಾಸ್ತಾವಿಕವಾಗಿ ಮಾತನಾಡಿದರು. ವಿಶೇಷ ಉಪನ್ಯಾಸವನ್ನು ಸಹಕಾರ ಸಂಘಗಳ ಉಪ ನಿಭಂದಕ ಆರ್. ಪವನಕುಮಾರ ನೀಡಿದರು. ಸಹಕಾರ ರತ್ನ ಪ್ರಶಸ್ತಿ ಪುರಸ್ಕøತ ಒಕ್ಕೂಟದ ಅಧ್ಯಕ್ಷ ವಿಶ್ವನಾಥರಡ್ಡಿ ದರ್ಶನಾಪುರ ಅಧ್ಯಕ್ಷತೆ ವಹಿಸಿ ಸನ್ಮಾನ ಸ್ವೀಕರಿಸಿದರು. ಜೊತೆಗೆ ನೂತನ ನಿರ್ದೇಶಕರಾದ ಗುರುನಾಥರಡ್ಡಿ ಪಾಟೀಲ ಹಳಿಸಗರ, ವಿಠಲ ಯಾದವ, ಸುರೇಶ ಸಜ್ಜನ, ಸಿದ್ರಾಮರಡ್ಡಿ ಮಾ.ಪಾ.ಕೌಳೂರ, ಬಸವರಾಜಪ್ಪಗೌಡ ಚಿಂಚೋಳಿ, ಬಸವರಾಜ ಹಿರೇಮಠ ಅಲ್ಲದೆ ತಾಲೂಕಿನ ಪತ್ರಕರ್ತರಿಗೆ ಸೇರಿ ಸಹಕಾರ ಸಂಘಗಳಿಗೆ ಸನ್ಮಾನಿಸಲಾಯಿತು.

ಸಹಕಾರ ಯೂನಿಯನ್ ಒಕ್ಕೂಟದ ಉಪಾಧ್ಯಕ್ಷ ಎಂ.ನಾರಾಯಣ, ಜಿಲ್ಲಾ ಸರ್ಕಾರಿ ನೌಕರರ ಸಂಘದ ಅಧ್ಯಕ್ಷ ರಾಯಪ್ಪಗೌಡ ಹುಡೇದ, ಕೆಂಚಪ್ಪ ನಗನೂರ, ದೇವಿಂದ್ರಪ್ಪ ವಿಶ್ವಕರ್ಮ, ಡಾ.ಅಂಬಣ್ಣಗೌಡ ಗಡ್ಡೆಸೂಗೂರ, ಮಲ್ಲಣ್ಣಗೌಡ ಚಾಮನಾಳ, ಶಾಂತಗೌಡ ಸಾದ್ಯಾಪುರ, ವಿಶ್ವರಾಧ್ಯ ಸತ್ಯಂಪೇಟ, ರಾಯಪ್ಪಗೌಡ ದರ್ಶನಾಪುರ, ವಿಶ್ವನಾಥರೆಡ್ಡಿ, ಎನ್.ಸಿ.ಪಾಟೀಲ್, ಶರಣಬಸವ ಮಾಡ್ಯಾಳ, ಸೀಮಾ ಫಾರೋಜಿ, ಗುರುನಾಥ ಬಾಣತಿಹಾಳ ಅಣ್ಣೆಪ್ಪ, ರವಿಕಾಂತ ಭಾಗವಹಿಸಿದ್ದರು. ರೇಖಾ ಸ್ವಾತಿಸಿದರು. ಫಜಿಲುದ್ದಿನ ಪ್ರಾರ್ಥಿಸಿದರು.ಜಿಲ್ಲಾ ಸಹಕಾರಿ ಒಕ್ಕೂಟ ನಿರ್ದೇಶಕ ಪ್ರಕಾಶ ಅಂಗಡಿ ಕನ್ನಳ್ಳಿ ನಿರೂಪಿಸಿದರು. ಸುಜಾತ ಮಠ ವಂದಿಸಿದರು.