ಜಗದ್ಗುರುಗಳ ಅಡ್ಡ ಪಲ್ಲಕ್ಕಿ ಮಹೋತ್ಸವ ಯಶಸ್ವಿಗೆ ಸಹಕಾರ:ಸೋಮನಗೌಡ

ತಾಳಿಕೋಟೆ:ಜ.28: ತಾಲೂಕಿನ ಚಬನೂರ ಗ್ರಾಮದಲ್ಲಿ ನೂತನವಾಗಿ ನಿರ್ಮಿಸಲಾಗಿರುವ ಸಿದ್ದಿ ಪುರುಷ ಶ್ರೀ ರಾಮಲಿಂಗೇಶ್ವರ ಮಠದ ಹಾಗೂ ಸಭಾ ಭವನದ ಉದ್ಘಾಟನಾ ಕಾರ್ಯಕ್ರಮದ ಅಂಗವಾಗಿ ಫೇಬ್ರವರಿ 7 ರಂದು ನಡೆಯಲಿರುವ ಸದ್ದರ್ಮ ಸಮಾರಂಭದ ಅಂಗವಾಗಿ ಶ್ರೀಮದ್ ಉಜ್ಜಯಿನಿ ಸದ್ಧರ್ಮ ಮಹಾ ಸಿಂಹಾಸನಾಧೀಶ್ವರ ಶ್ರೀಶ್ರೀಶ್ರೀ 1008 ಜಗದ್ಗುರು ಡಾ.ಸಿದ್ದಲಿಂಗ ರಾಜ ದೇಶಿಕೇಂದ್ರ ಶಿವಾಚಾರ್ಯ ಭಗವತ್ಪಾದಂಗಳವರ ಅಡ್ಡ ಫಲ್ಲಕ್ಕಿ ಮಹೋತ್ಸವದ ಕುಂಭ ಮೇಳದಲ್ಲಿ ಪಾಲ್ಗೊಳ್ಳುವ ಸುಮಾರು 5 ಸಾವಿರ ತಾಯಂದಿರರಿಗೆ ಕುಂಭ, ಸೀರೆ, ಒಳಗೊಂಡಂತೆ ಎಲ್ಲದಕ್ಕೆ ತನುಮನ ಧನದಿಂದ ತಾವೇ ಜವಾಬ್ದಾರಿ ಹೊತ್ತುಕೊಂಡು ನಿರ್ವಹಿಸುವದಾಗಿ ಮಾಜಿ ಶಾಸಕ ಸೋಮನಗೌಡ ಪಾಟೀಲ(ಸಾಸನೂರ) ಅವರು ಹೇಳಿದರು.
ಚಬನೂರ ಗ್ರಾಮದ ಶ್ರೀ ರಾಮಲಿಂಗೇಶ್ವರ ಮಠದ ಆವರಣದಲ್ಲಿ ನಡೆದ ಶ್ರೀಮದ್ ಉಜ್ಜಯಿನಿ ಸದ್ಧರ್ಮ ಮಹಾ ಸಿಂಹಾಸನಾಧೀಶ್ವರ ಶ್ರೀಶ್ರೀಶ್ರೀ 1008 ಜಗದ್ಗುರು ಡಾ.ಸಿದ್ದಲಿಂಗ ರಾಜ ದೇಶಿಕೇಂದ್ರ ಶಿವಾಚಾರ್ಯ ಭಗವತ್ಪಾದಂಗಳವರ ಅಡ್ಡ ಫಲ್ಲಕ್ಕಿ ಮಹೋತ್ಸವ ಯಶಸ್ವಿ ಕುರಿತು ಸೋಮವಾರರಂದು ನಡೆದ ಪೂರ್ವಭಾವಿ ಸಭೆಯಲ್ಲಿ ಮಾತನಾಡಿದ ಅವರು ಜಗದ್ಗುರುಗಳ ಅಡ್ಡ ಫಲ್ಲಕ್ಕಿ ಮಹೋತ್ಸವಕ್ಕೆ 25 ಸಾವಿರಕ್ಕೂ ಅಧಿಕ ಜನ ಸಂಖ್ಯೆ ಪಾಲ್ಗೊಳ್ಳುವ ನೀರಿಕ್ಷೆಯನ್ನು ಇಟ್ಟುಕೊಳ್ಳಲಾಗಿದೆ ಈ ಅದ್ದೂರಿ ಅಡ್ಡಫಲ್ಲಕ್ಕಿ ಮಹೋತ್ಸವದಲ್ಲಿ ಈಗಾಗಲೇ ಸುಮಾರು 5 ಸಾವಿರ ತಾಯಂದಿರರು ಕುಂಭ ಮೇಳದಲ್ಲಿ ಪಾಲ್ಗೊಳ್ಳುವ ನಿರಕ್ಷೆಯನ್ನು ಇಟ್ಟುಕೊಳ್ಳಲಾಗಿದೆ ಶ್ರೀಮಠದ ಶ್ರೀ ರಾಮಲಿಂಗಯ್ಯ ಸ್ವಾಮಿಗಳ ಅಪೇಕ್ಷೆಯಂತೆ ಮತ್ತು ನಾನುಕೂಡಾ ಶ್ರೀಮಠದ ಭಕ್ತನಾಗಿರುವದರಿಂದ ಮಠದ ಕಾರ್ಯಕ್ರಮದ ಯಶಸ್ವಿಗೆ ಕೈಜೋಡಿಸಬೇಕಾಗಿರುವದು ನನ್ನ ಕರ್ತವ್ಯವೂ ಕೂಡಾ ಆಗಿದೆ ಹೀಗಾಗಿ ಅಂದಿನ ಅಡ್ಡ ಫಲ್ಲಕ್ಕಿ ಮಹೋತ್ಸವಕ್ಕೆ ಸಂಬಂದಿಸಿ ನಾನು ಜವಾಬ್ದಾರಿಯನ್ನು ಹೊತ್ತುಕೊಂಡು ಎಲ್ಲ ರೀತಿಯಿಂದಲೂ ಸಹಕರಿಸುತ್ತೇನೆಂದು ಮಾಜಿ ಶಾಸಕ ಸೋಮನಗೌಡ ಪಾಟೀಲ(ಸಾಸನೂರ) ಅವರು ಹೇಳಿದರು.
ಇನ್ನೋರ್ವ ಬಿಜೆಪಿ ಮಾಜಿ ಜಿಲ್ಲಾ ಅಧ್ಯಕ್ಷ ಆರ್.ಎಸ್.ಪಾಟೀಲ(ಕೂಚಬಾಳ) ಅವರು ಮಾತನಾಡಿ ಈ ಭಾಗದಲ್ಲಿಯೇ ಅತ್ಯಂತ ಶಕ್ತಿಪೀಠವಾಗಿರುವ ಶ್ರೀ ರಾಮಲಿಂಗೇಶ್ವರ ಮಠವು ಪುರಾತನ ಮಠವಾಗಿದೆ ಶ್ರೀ ರಾಮಲಿಂಗೇಶ್ವರರು ಸಿದ್ದಿಪುರುಷರಾಗಿರುವದರಿಂದ ಈ ಭಾಗದ ಎಲ್ಲ ಜನರು ಸಂದಿಗ್ದ ಪರಸ್ಥಿತಿಗಳು ಎದುರಾದಾಗ ಶ್ರೀಗಳನ್ನು ನೆನಿಸಿಕೊಂಡಾಗ ಎಲ್ಲ ಕಷ್ಟಗಳು ತನ್ನಿಂದ ತಾನೇ ನಿವಾರಣೆಯಾಗಿರುವ ಸಾಕಷ್ಟು ಉದಾಹರಣೆಗಳು ಇವೆ ಇಂತಹ ಪವಾಡ ಸದೃಶ್ಯದ ಸಿದ್ದಿಪುರುಷ ಶ್ರೀ ರಾಮಲಿಂಗೇಶ್ವರರ ನೂತನ ಮಠದ ಉದ್ಘಾಟನೆಗೆ ಮಾಜಿ ಶಾಸಕ ಸೋಮನಗೌಡ ಪಾಟೀಲ(ಸಾಸನೂರ) ಅವರ ಕುಂಭ ಮೇಳಕ್ಕೆ ಅವಶ್ಯವಿರುವ ಎಲ್ಲ ರೀತಿಯ ತನುಮನ ಧನದಿಂದ ಸಹಕಾರ ನೀಡಲು ಮುಂದಾಗಿರುವದು ಶ್ರೀಮಠದ ಶಕ್ತಿ ಎತ್ತಿ ತೋರಿಸುತ್ತಿದೆ ಈ ಮಠದ ಉದ್ಘಾಟನೆಗೆ ತಾವು ಕೂಡಾ ಸಹಕರಿಸುವದಾಗಿ ಹೇಳಿದರು.
ದೇವರ ಹಿಪ್ಪರಗಿ ಜಡಿಮಠದ ಶ್ರೀ ಜಡಿಸಿದ್ದೇಶ್ವರ ಮಹಾಸ್ವಾಮಿಗಳು, ನಾವದಗಿ ಮಠದ ಶ್ರೀ ರಾಜೇಂದ್ರಒಡೆಯರ ಶಿವಾಚಾರ್ಯ ಮಹಾಸ್ವಾಮಿಗಳು, ಪರದೇಶಿಮಠದ ಶ್ರೀ ಶಿವಯೋಗಿ ಮಹಾಸ್ವಾಮಿಗಳು ಮತನಾಡಿ ಜಗದ್ಗುರುಗಳ ಅಡ್ಡ ಫಲ್ಲಕ್ಕಿ ಮಹೋತ್ಸವದಲ್ಲಿ ಪಾಲ್ಗೊಳ್ಳು ತಾಯಂದಿರರಿಗೆ ತಾಯಿಯ ಸ್ವರೂಪದಲ್ಲಿ ಗೌರವಿಸುವದರೊಂದಿಗೆ ಕುಂಭ ಮೇಳಕ್ಕೆ ಮೇರಗನ್ನು ಹೆಚ್ಚಿಸಲು ಮಾಜಿ ಶಾಸಕರಾದ ಸೋಮನಗೌಡ ಪಾಟೀಲ(ಸಾಸನೂರ) ಅವರು ಅವಶ್ಯವಿರುವ ಕುಂಭ, ಸೀರೆ ಒಳಗೊಂಡಂತೆ ಇನ್ನಿತರ ಜವಾಬ್ದಾರಿಯನ್ನು ಸ್ವತಃ ತಾವಾಗಿಯೇ ಹೊತ್ತುಕೊಂಡು ಶ್ರೀಮಠದ ಸೇವಾ ಕಾರ್ಯದಲ್ಲಿ ಪಾಲ್ಗೊಳ್ಳುತ್ತಿರುವದು ಅವರಿಗೆ ಶ್ರೀಮಠದ ಮೇಲಿನ ಭಕ್ತಿ ಏಷ್ಠಿದೆ ಎಂಬುದು ಎತ್ತಿ ತೋರಿಸುತ್ತಿದೆ ಅವರ ಸೇವಾ ಕಾರ್ಯಕ್ಕೆ ಶ್ರೀಮಠವು ಹಾಗೂ ಎಲ್ಲಶ್ರೀಗಳು ಬೆನ್ನೇಲುಭಾಗಿ ನಿಲ್ಲುವದರೊಂದಿಗೆ ಕಾರ್ಯಕ್ರಮದ ಯಶಸ್ವಿಗೆ ಮುಂದಾಗೋಣವೆಂದರು.
ಈ ಸಮಯದಲ್ಲಿ ಚಬನೂರ ಸಿದ್ದಿ ಪುರುಷ ಶ್ರೀ ರಾಮಲಿಂಗೇಶ್ವರ ಮಠದ ಶ್ರೀ ರಾಮಲಿಂಗಯ್ಯ ಮಹಾಸ್ವಾಮಿಗಳು, ಗ್ರಾಮದ ಮುಖಂಡರಾದ ಬಸನಗೌಡ ಪಾಟೀಲ, ಸೋಮನಗೌಡ ಪಾಟೀಲ, ಶರಣಗೌಡ ಪಾಟೀಲ, ಅವ್ವಣ್ಣ ಗ್ವಾತಗಿ, ಬಸಯ್ಯ ಹಿರೇಮಠ, ಮಂಜುನಾಥ ಕವಡಿಮಟ್ಟಿ ಒಳಗೊಂಡು ಶ್ರೀಮಠದ ಭಕ್ತಾಧಿಗಳು ಉಪಸ್ಥಿತರಿದ್ದರು.