ಸಂಜೆವಾಣಿ ಪ್ರತಿನಿಧಿಯಿಂದ
ಹೊಸಪೇಟೆ(ವಿಜಯನಗರ)ಸೆ27: ಮನೆಯ ಅಡುಗೆ ಅನಿಲದ ಸಿಲೆಂಡರ್ ಸ್ಪೋಟಗೊಂಡು ಮನೆಯ 8 ಜನರೂ ಗಾಯಗೊಂಡು ಭಾಗಶಃ ಮನೆ ಹಾನಿಯಾದ ಧಾರುಣ ಘಟನೆ ತಾಲೂಕಿನ ಗಾದಿಗನೂರನಲ್ಲಿ ಬೆಳಗಿನ ಜಾವ ಜರುಗಿದೆ.
ಬೆಳಿಗ್ಗೆ ಅಂದಾಜು 4ಗಂಟೆ ಸುಮಾರಿಗೆ ವಕೀಲ ಹಾಲಪ್ಪ, ಸಹೋದರ ಮೈಲಾರಪ್ಪ ರವರ ಮನೆಯಲ್ಲಿ ಅಡುಗೆ ಸಿಲಿಂಡರ್ ಸ್ಪೋಟಗೊಂಡು, ಕುಟುಂಬದ 8 ಜನರೂ ಗಾಯಗೊಂಡು ಇಬ್ಬರು ಗಂಭೀರ ಸ್ವರೂಪದಲ್ಲಿ ಗಾಯಗೊಂಡಿದ್ದಾರೆ
ಸ್ಪೋಟದ ರಭಸಕ್ಕೆ ಮನೆ ಗೋಡೆ ಕುಸಿತವಾಗಿದೆ.
ಮನೆಯಲ್ಲಿ ಮಲಗಿರುವಾಗ ಬೆಳಗಿನ ಜಾವ ಮತ್ತು ಮಲಗಿರುವಾಗ ಘಟನೆ ನಡೆದಿರುವುದರಿಂದ ತಪ್ಪಿಸಿಕೊಳ್ಳಲು ಸಾದ್ಯವಾಗದ ಕಾರಣ ಹೆಚ್ಚಿನ ಹಾನಿಯಾಗಿದೆ. ಎಲ್ಲಾ ಗಾಯಾಳುಗಳನ್ನು ತೋರಣಗಲ್ಲು ಸಂಜೀವಿನಿ ಆಸ್ಪತ್ರೆಗೆ ಚಿಕಿತ್ಸೆಗೆ ದಾಖಲು ಮಾಡಲಾಗಿದೆ.
ಸ್ಥಳಕ್ಕೆ ಅಗ್ನಿಶಾಮಕದಳದ ಸಿಬ್ಬಂದಿ, ಹೊಸಪೇಟೆ ಗ್ರಾಮೀಣ ಪೊಲೀಸರು ಸ್ಥಳಕ್ಕೆ ಭೇಟಿ ಪರಿಶೀಲನೆ ಮಾಡಿದ್ದಾರೆ.























