ಸಂಜೆವಾಣಿ ವಾರ್ತ
ಹುಮನಾಬಾದ್:ಸೆ.೭:ಶಿಕ್ಷಕರುಮಕ್ಕಳಅಭ್ಯಾಸದಕಡೆಗೆಗಮನ ಹರಿಸಬೇಕು.ಇತರೆ ಇಲಾಖೆಗಳಂತೆ ಸಂಘಗಳನ್ನು ನಿರ್ಮಿಸಿ ಶಾಲಾ ಅವಧಿಯಲ್ಲಿ ಕಾರ್ಯಕ್ರಮ, ಇನ್ನಿತರ ಚಟುವಟಿಕೆ ಗಳು ನಡೆಸುವ ಮೂಲಕ ಮಕ್ಕಳ ಶಿಕ್ಷಣಕ್ಕೆ ನಿರ್ಲಕ್ಷ ವಹಿಸಬಾರದು ಎಂದು ಶಾಸಕ ಡಾ.ಸಿದ್ದಲಿಂಗಪ್ಪಾ ಪಾಟೀಲ್ ಶಿಕ್ಷಕರ ಸಂಘಕ್ಕೆ ಕಿವಿಮಾತು ಹೇಳಿದರು.
ಪಟ್ಟಣದ ವೀರಭದ್ರೇಶ್ವರಕಲ್ಯಾಣಮಂಟಪದಲ್ಲಿ ಶಾಲಾ ಶಿಕ್ಷಣ ಇಲಾಖೆ, ಕ್ಷೇತ್ರ ಶಿಕ್ಷಣಾಧಿಕಾರಿಗಳು ಹಾಗೂಕ್ಷೇತ್ರ ಸಮನ್ವಯಾಧಿಕಾರಿಗಳಕಾರ್ಯಾಲಯ ಹುಮನಾಬಾದ್ ಸಂಯುಕ್ತಾಶ್ರಯದಲ್ಲಿ ೬೪ನೇ ಶಿಕ್ಷಕರ ದಿನಾಚರಣೆಯ ಸಮಾರೋಪ ಸಮಾರಂಭಉದ್ಘಾಟಿಸಿ ಮಾತನಾಡಿ,
ವಿದ್ಯಾರ್ಥಿಗಳ ವ್ಯಕ್ತಿತ್ವ ರೂಪಿಸುವಲ್ಲಿಶಿಕ್ಷಕರಪಾತ್ರ ಮಹತ್ವಪೂರ್ಣವಾಗಿದೆ. ಶಿಕ್ಷಕರಿಗೆ ವಿದ್ಯಾರ್ಥಿಗಳನ್ನು ಉತ್ತಮ ವ್ಯಕ್ತಿಯಾಗಿ, ಪ್ರಜೆಯನ್ನಾಗಿ ರೂಪಿಸಿ ಅವರನ್ನು ದೇಶಕ್ಕೆ ಕೊಡು ಗೆಯಾಗಿ ನೀಡುವುದು ಶಿಕ್ಷಕರ ಜವಾಬ್ದಾರಿಯಾಗಿದೆ. ಕಲ್ಯಾಣ ಕರ್ನಾಟಕ ಭಾಗದಲ್ಲಿ ಗುಣಮಟ್ಟದ ಶಿಕ್ಷಣ ನೀಡಲು ಅಕ್ಷರ ಆವಿಷ್ಕಾರ ಯೋಜನೆ ಅಡಿ ೧೬ ಕೋಟಿ ಶಿಕ್ಷಣಕ್ಕೆ ಮೀಸಲಿಡಲಾಗಿದೆ. ಅದರಲ್ಲಿ ಕ್ಷೇತ್ರದ ೪೧ ಶಾಲೆಗಳಿಗೆ ಸ್ಮಾರ್ಟ ಕ್ಲಾಸ್ ಸೇರಿದಂತೆಮಕ್ಕಳಉಜ್ವಲಭವಿಷ್ಯಕ್ಕೆಬೇಕಾದಮೂಲಸೌಕರ್ಯ ಕ್ಕೆ ಬಳಸಲಾಗುತ್ತಿದೆ ಎಂದು ಮಾಹಿತಿ ನೀಡಿದರು.
ವಿಧಾನ ಪರಿಷತ್ ಡಾ.ಚಂದ್ರಶೇಖರ ಸದಸ್ಯ ಪಾಟೀಲ ಮಾತನಾಡಿ, ‘ತಾಲ್ಲೂಕಿನ ಎಲ್ಲ ಸರ್ಕಾರಿ ಶಾಲೆಗಳಿಗೆ ಶುದ್ಧ ಕುಡಿಯುವ ನೀರಿನ ಘಟಕ ಮತ್ತು ಶಾಲೆಯ ಸುತ್ತುಗೋಡೆ ನಿರ್ಮಾಣಕ್ಕೆ ಅನುದಾನ ನೀಡಿದ್ದೇನೆ’ ಎಂದರು.
ವಿಧಾನ ಪರಿಷತ್ ಸದಸ್ಯ ಭೀಮಾರಾವ್ ಪಾಟೀಲ ಮಾತನಾಡಿ, ‘ನಾನೂ ಸೇರಿದಂತೆ ಶಾಸಕ ಡಾ. ಸಿದ್ದಲಿಂಗಪ್ಪ ಪಾಟೀಲ, ವಿಧಾನ ಪರಿಷತ್ ಸದಸ್ಯ ಡಾ.ಚಂದ್ರಶೇಖರ ಪಾಟೀಲ ಅವರು ತಾಲ್ಲೂಕಿನಲ್ಲಿನ ತಲಾ ಐದು ಸರ್ಕಾರಿ ಶಾಲೆಗಳನ್ನು ದತ್ತು ಪಡೆದುಕೊಂಡು ಅಭಿವೃದ್ಧಿ ಮಾಡಬೇಕು’ ಮಾಡಬೇಕು’ ಎಂದು
ಹುಡಗಿಹಿರೇಮಠಸAಸ್ಥಾನದವಿರೂಪಾಕ್ಷಶಿವಾಚಾರ್ಯರು ಆಶಿರ್ವಚನ ನೀಡಿದರು. ಪುರಸಭೆ ಅಧ್ಯಕ್ಷೆಪಾರ್ವತಿ ಮಡಿವಾಳ, ಕ್ಷೇತ್ರ ಶಿಕ್ಷಣ ಅಧಿಕಾರಿ ವೆಂಕಟೇಶ ಗುಡಾಳ, ಸಮನ್ವಯ ಅಧಿಕಾರಿ ಪ್ರೀತಮ್ ಸಿಂಗ್ ಜಾಧವ, ತಾಲೂಕು ದೈಹಿಕ ಶಿಕ್ಷಣ ಪರಿವೀಕ್ಷಕ ಕಾಶಿನಾಥ ಬೋರಾಳೆ, ಅಕ್ಷರ ದಾಸೋಹ ಯೋಜನೆ ತಾಲೂಕು ಸಹಾಯಕ ನಿರ್ದೇಶಕ ಕರುಣಾದೇವಿ ಸಿಂಧೆ, ತಾಲೂಕು ದೈಹಿಕ ಶಿಕ್ಷಣ ಶಿಕ್ಷಕರಸಂಘ ಅಧ್ಯಕ್ಷ ಸೂರ್ಯಕಾಂತ ಹಾವಶೆಟ್ಟಿ, ಕರ್ನಾಟಕ ರಾಜ್ಯ ಪ್ರೌಢಶಾಲಾ ಶಿಕ್ಷಕ ಸಂಘ ಅಧ್ಯಕ್ಷ ಶರದಕುಮಾರ ನಾರಾಯಣಪೇಟಕರ, ಪ್ರಾಥಮಿಕ ಶಾಲಾ ಶಿಕ್ಷಕ ಸಂಘದಜಿಲ್ಲಾಧ್ಯಕ್ಷರವೀAದ್ರ ರೆಡ್ಡಿಮಾಲಿಪಾಟೀಲ್, ತಾಲೂಕು ಅಧ್ಯಕ್ಷ ಮುರಗೇಂದ್ರ ಸಜ್ಜನಶೆಟ್ಟಿ, ಸೇರಿದಂತೆ ಅನೇಕರು ಇದ್ದರು.

























