
ಲಕ್ಷ್ಮೇಶ್ವರ,ಡಿ3: ಪಟ್ಟಣದ ಲಿಟಲ್ ಹಾಟ್ರ್ಸ್ ಇಂಟನ್ರ್ಯಾಷನಲ್ ಶಾಲೆಯಲ್ಲಿ ಶಿಕ್ಷಕರಿಗಾಗಿ ಐದುದಿನಗಳ ತರಬೇತಿ ಕಾರ್ಯಗಾರಕ್ಕೆ ಕ್ಷೇತ್ರ ಶಿಕ್ಷಣಾಧಿಕಾರಿ ಎಚ್. ಎನ್. ನಾಯಕ್ ಚಾಲನೆ ನೀಡಿದರು.
ಬಳಿಕ ಅವರು ಮಾತನಾಡಿ ಶಿಕ್ಷಕ ಜೀವನ ನಿರಂತರ ವಿದ್ಯಾರ್ಥಿಯಂತೆ ಸರ್ಕಾರ ಶಿಕ್ಷಣ ಕ್ಷೇತ್ರದ ಅಮೂಲಾಗ್ರ ಬದಲಾವಣೆಗೆ ಮತ್ತು ಶಿಕ್ಷಣದ ಗುಣಮಟ್ಟ ಹೆಚ್ಚಿಸಲು ಅನೇಕ ಯೋಜನೆಗಳನ್ನು ರೂಪಿಸಿ ಶಿಕ್ಷಕರಿಗಾಗಿ ತರಬೇತಿ ಮತ್ತು ಕಾರ್ಯಗಾರಗಳನ್ನು ಹಮ್ಮಿಕೊಳ್ಳುತ್ತಿದೆ.
ಶಿಕ್ಷಕರು ಇವುಗಳ ಸದುಪಯೋಗ ಪಡಿಸಿಕೊಂಡು ವಿದ್ಯಾರ್ಥಿಗಳ ಕಲಿಕಾ ಗುಣಮಟ್ಟ ಹೆಚ್ಚಿಸಲು ನಿರಂತರ ಪ್ರಯತ್ನ ಮಾಡಬೇಕು ಇದರಿಂದಾಗಿ ಪ್ರತಿಯೊಬ್ಬ ವಿದ್ಯಾರ್ಥಿಯು ಶಿಕ್ಷಣಕ್ಕೆ ಪಾತ್ರನಾಗುತ್ತಾನೆ ಎಂದು ಹೇಳಿದರು. ಅಧ್ಯಕ್ಷತೆ ವಹಿಸಿದ್ದ ಶಾಲೆಯ ಮುಖ್ಯೋಪಾಧ್ಯಾಯರಾದ ಗಂಗಾಧರ್ ಶಿರಹಟ್ಟಿಯವರು ಸರ್ಕಾರ ಶಿಕ್ಷಣ ಕ್ಷೇತ್ರದ ಬೆಳವಣಿಗೆಗೆ ಹಾಗೂ ಸಮಾಜದ ಕಟ್ಟ ಕಡೆಯ ವಿದ್ಯಾರ್ಥಿಗೆ ಸೌಲಭ್ಯ ಮತ್ತು ಯೋಜನೆಗಳು ತಲುಪವಂತೆ ಮಾಡಲು ಅನೇಕ ತರಬೇತಿಗಳನ್ನು ನೀಡುತ್ತಿದೆ ಶಿಕ್ಷಕರು ಇದನ್ನು ಸದುಪಯೋಗಪಡಿಸಿಕೊಂಡು ವಿದ್ಯಾರ್ಥಿಗಳ ಮತ್ತು ಕ್ಷೇತ್ರದ ಮೌಲ್ಯವನ್ನು ಹೆಚ್ಚಿಸಬೇಕು ಎಂದು ಹೇಳಿದರು.
ಪ್ರೌಢಶಾಲಾ ವಿಭಾಗದ ಸಂಪನ್ಮೂಲ ವ್ಯಕ್ತಿ ಈಶ್ವರ್ ಮೆಡ್ಲೇರಿ ಅವರು ಕಾರ್ಯಾಗಾರದ ನಿಯಮಾವಳಿ ಮತ್ತು ಮಹತ್ವವನ್ನು ಬಿಂಬಿಸಿದರು.
ವೇದಿಕೆ ಮೇಲೆ ರಾಘವೇಂದ್ರ ಜೋಶಿ, ಡಿಡಿ ಲಮಾಣಿ, ಗೀತಾ ಹಲ್ಯಾಳ, ಡಿಎಚ್ ಪಾಟೀಲ್, ಪಿವೈ ಮ್ಯಾಗೇರಿ, ಎಫ್ ಎಸ್ ತಳವಾರ, ಬಸವರಾಜ ಯರಗುಪ್ಪಿ ಮುಖ್ಯ ಅತಿಥಿಗಳಿಗೆ ಆಗಮಿಸಿ ಮಾತನಾಡಿದರು.
ಉಮೇಶ ನೇಕಾರ, ಜ್ಯೋತಿ ಗಾಯಕ್ವಾಡ, ಎನ್. ಏ ಮುಲ್ಲಾ, ಶ್ರೀನಿವಾಸ ಮತ್ತೂರ ನಿರ್ವಹಿಸಿದರು.

























