
ಜೇವರ್ಗಿ : ಮೇ.20:ವಿದ್ಯಾರ್ಥಿಗಳು ನಿರಂತರ ಅಧ್ಯಯನದಲ್ಲಿ ನಿರತರಾಗಬೇಕು. ಓದು ಬರಹದ ಜೊತೆಗೆ ಪ್ರಶ್ನಿಸುವ ಮನೋಭಾವನೆಯನ್ನು ಬೆಳೆಸಿಕೊಳ್ಳಬೇಕು. ಪಠ್ಯದ ಜೊತೆಗೆ ಪಠ್ಯೇತರ ಚಟುವಟಿಕೆಗಳಲ್ಲಿ ಭಾಗವಹಿಸಿ ಉತ್ತಮ ವ್ಯಕ್ತಿತ್ವ ರೂಪಿಸಿಕೊಳ್ಳಬೇಕು. ಜೀವನದಲ್ಲಿ ಸಮಯ ಮತ್ತು ಯೌವ್ವನ ಎಂದೂ ಮರಳಿ ಬರುವುದಿಲ್ಲ. ಅವೆರಡಕ್ಕೂ ಮಹತ್ವ ನೀಡಬೇಕು ಎಂದು ಸೇಡಂ ಸರ್ಕಾರಿ ಪ್ರಥಮ ದರ್ಜೆ ಕಾಲೇಜಿನ ಪ್ರಾಂಶುಪಾಲ ಹಾಗೂ ಗುಲ್ಬರ್ಗ ವಿಶ್ವವಿದ್ಯಾಲಯದ ಪದವಿ ಕಾಲೇಜುಗಳ ಕನ್ನಡ ಅಧ್ಯಾಪಕರ ಸಂಘದ ಉಪಾಧ್ಯಕ್ಷ ಡಾ. ಪಂಡಿತ್ ಬಿ.ಕೆ ಅಭಿಪ್ರಾಯಪಟ್ಟರು. ಅವರು ಪಟ್ಟಣದ ಸರ್ಕಾರಿ ಪ್ರಥಮ ದರ್ಜೆ ಕಾಲೇಜಿನಲ್ಲಿ 2024- 25 ನೇ ಸಾಲಿನ ವಿವಿಧ ಸಮಿತಿಗಳ ಪಠ್ಯೇತರ ಚಟುವಟಿಕೆಗಳ ಸಮಾರೋಪ ಸಮಾರಂಭದಲ್ಲಿ ಮುಖ್ಯ ಅತಿಥಿಯಾಗಿ ಸಸಿಗೆ ನೀರೆರೆಯುವ ಮೂಲಕ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದರು.
ಸಾಂಸ್ಕøತಿಕ ಸಮಿತಿ ಸಂಚಾಲಕರಾದ ಡಾ. ಖಾಜಾವಲಿ ಈಚನಾಳ ಮಾತನಾಡಿ, ವಿದ್ಯಾರ್ಥಿಗಳು ಕೇವಲ ಅಂಕವೀರರಾಗದೇ ಸಾಂಸ್ಕೃತಿಕ ಚಟುವಟಿಕೆಗಳಲ್ಲಿ ಪಾಲ್ಗೊಳ್ಳಬೇಕು. ವಿದ್ಯಾರ್ಥಿಗಳ ಸರ್ವತೋಮುಖ ಬೆಳವಣಿಗೆಗೆ ಮತ್ತು ಪ್ರತಿಭೆಯ ಅನಾವರಣಕ್ಕೆ ಕಾಲೇಜಿನಲ್ಲಿರುವ ವಿವಿಧ ಸಮಿತಿಗಳು ಪೂರಕವಾಗಿ ಕಾರ್ಯನಿರ್ವಹಿಸುತ್ತವೆ. ವಿದ್ಯಾರ್ಥಿಗಳು ಬದುಕಿನಲ್ಲಿ ಉತ್ತಮ ಮೌಲ್ಯಗಳನ್ನು ರೂಢಿಸಿಕೊಳ್ಳಬೇಕೆಂದು ಹೇಳಿದರು. ಕಾರ್ಯಕ್ರಮದ ಅಧ್ಯಕ್ಷತೆಯನ್ನು ವಹಿಸಿದ್ದ ಪ್ರಾಂಶುಪಾಲರಾದ ಡಾ. ಲಕ್ಷ್ಮಣ್ ಬೋಸ್ಲೆ ಅವರು ಮಾತನಾಡಿದರು. ಸಿಬ್ಬಂದಿ ಕಾರ್ಯದರ್ಶಿ, ಡಾ. ಶರಣಪ್ಪ ಸೈದಾಪುರ ಅತಿಥಿಗಳ ಪರಿಚಯ ಮಾಡಿದರು. ಸಾಂಸ್ಕೃತಿಕ ಸಮಿತಿ, ಕ್ರೀಡಾ ವಿಭಾಗ ಹಾಗೂ ಅಂಬೇಡ್ಕರ್ ಸ್ಮರಣಾರ್ಥ ಸ್ಪರ್ಧಾಕೂಟದಿಂದ ಆಯೋಜಿಸಿದ್ದ ವಿವಿಧ ಸ್ಪರ್ಧೆಗಳಲ್ಲಿ ಭಾಗವಹಿಸಿ ವಿಜೇತರಾದ ವಿದ್ಯಾರ್ಥಿಗಳಿಗೆ ಪಾರಿತೋಷಕ ಮತ್ತು ಪ್ರಶಸ್ತಿ ಪತ್ರಗಳನ್ನು ವಿತರಣೆ ಮಾಡಲಾಯಿತು. ಗ್ರಂಥಪಾಲಕರಾದ ಡಾ. ವಿನೋದ್ ಕುಮಾರ್ ಅವರು ಪ್ರತಿನಿತ್ಯ ಗ್ರಂಥಾಲಯದಲ್ಲಿ ಅಧ್ಯಯನದಲ್ಲಿ ನಿರತರಾದ ವಿದ್ಯಾರ್ಥಿಗಳಿಗೆ ‘ಉತ್ತಮ ಓದುಗ ‘ ಪ್ರಶಸ್ತಿ ನೀಡಿದರು. ಜಾನಪದ ಉತ್ಸವ ದಲ್ಲಿ ಭಾಗವಹಿಸಿದ ಎಲ್ಲ ವಿದ್ಯಾರ್ಥಿಗಳಿಗೆ ಪ್ರಶಸ್ತಿ ಪತ್ರಗಳನ್ನು ಪ್ರದಾನ ಮಾಡಲಾಯಿತು.
ಐಕ್ಯೂಏಸಿ ಸಂಯೋಜಕರಾದ ಡಾ.ಸಂದೀಪ ತಿವಾರಿ, ರೆಡ್ಕ್ರಾಸ್ ಸಂಚಾಲಕಿ ಡಾ. ಖುತೇಜಾ ನಸ್ರಿನ್, ದೈಹಿಕ ಶಿಕ್ಷಣ ನಿರ್ದೇಶಕರಾದ ಡಾ. ನಾಗರಡ್ಡಿ, ಡಾ. ಬಿಆರ್ ಅಂಬೇಡ್ಕರ್ ಸ್ಮರಣಾರ್ಥ ಸ್ಪರ್ಧಾಕೂಟ ಸಂಚಾಲಕ ಭೀಮಣ್ಣ, ರೇಂಜರ್ಸ್ ಲೀಡರ್ ಭಾಗ್ಯಶ್ರೀ ಠಾಕೂರ್,
ಎನ್ ಎಸ್ಸೆಸ್ ಸಂಚಾಲಕಿ ಅಪರ್ಣ, ಗಣಿತಶಾಸ್ತ್ರದ ಪ್ರಾಧ್ಯಾಪಕರಾದ ಡಾ. ಶಿಲ್ಪಾ ಜೆ, ನಿರ್ವಹಣಾಶಾಸ್ತ್ರ ವಿಭಾಗದ ಮುಖ್ಯಸ್ಥ ಡಾ.ರವೀಂದ್ರ, ಡಾ. ಡಾ.ಮೋಹನ್ ಬೈಲ್ ಪತ್ತಾರ್, ಡಾ.ವಿಕಾಸ್ ಹಾಗೂ ಇನ್ನಿತರರು ಕಾರ್ಯಕ್ರಮದ ಲ್ಲಿದ್ದರು. ವಾಣಿಜ್ಯ ವಿಭಾಗದ ಮುಖ್ಯಸ್ಥರಾದ ಡಾ. ಶಿವಕುಮಾರ್ ಸ್ವಾಗತಿಸಿದರು. ಎ???ಸ್ಸೆಸ್ ಸಂಚಾಲಕ ಡಾ.ಶರಣಪ್ಪ ಗುಂಡಗುರ್ತಿ ನಿರೂಪಿಸಿ ವಂದಿಸಿದರು.