Home ಜಿಲ್ಲೆ ೧೨೫ ಎಕರೆಯಲ್ಲಿ ಜಿಲ್ಲಾ ಕ್ರೀಡಾಂಗಣ ನಿರ್ಮಾಣ: ಸಚಿವ ಖಂಡ್ರೆ

೧೨೫ ಎಕರೆಯಲ್ಲಿ ಜಿಲ್ಲಾ ಕ್ರೀಡಾಂಗಣ ನಿರ್ಮಾಣ: ಸಚಿವ ಖಂಡ್ರೆ

ಬೀದರ್: ನಗರಕ್ಕೆ ಸಮೀಪ ೧೨೫ ಎಕರೆ ಪ್ರದೇಶದಲ್ಲಿ ಸುಸಜ್ಜಿತ ಜಿಲ್ಲಾ ಕ್ರೀಡಾಂಗಣ ನಿರ್ಮಿಸಲು ಯೋಜಿಸಲಾಗಿದೆ ಎಂದು ಜಿಲ್ಲಾ ಉಸ್ತುವಾರಿ ಸಚಿವ ಈಶ್ವರ ಖಂಡ್ರೆ ಹೇಳಿದರು.
ನಗರದ ಗುರುನಾನಕ ದೇವ ಎಂಜಿನಿಯರಿAಗ್ ಕಾಲೇಜು ಕ್ರೀಡಾಂಗಣದಲ್ಲಿ ರೋಟರಿ ಕ್ಲಬ್ ಆಫ್ ಬೀದರ್ ಸಿಲ್ವರ್ ಸ್ಟಾರ್ ವತಿಯಿಂದ ಬೇಟಿ ಪಡಾವೋ, ಬೇಟಿ ಬಚಾವೋ ಘೋಷವಾಕ್ಯದಡಿ ಹಮ್ಮಿಕೊಳ್ಳಲಾದ ರೋಟರಿ ಕ್ರಿಕೆಟ್ ಪ್ರಿಮಿಯರ್ ಲೀಗ್ ೩.೦ ಟ್ರೋಫಿ ಶನಿವಾರ ಅನಾವರಣಗೊಳಿಸಿ ಅವರು ಮಾತನಾಡಿದರು.
ಕ್ರೀಡಾಂಗಣಕ್ಕಾಗಿ ಸ್ಥಳ ಹುಡುಕಾಟ ನಡೆಸಲಾಗುತ್ತಿದೆ. ಸೂಕ್ತ ಸ್ಥಳ ದೊರೆತ ನಂತರ ಸಚಿವ ಸಂಪುಟದ ಅನುಮೋದನೆ ಪಡೆದು, ಕ್ರೀಡಾಂಗಣ ನಿರ್ಮಾಣ ಮಾಡಲಾಗುವುದು ಎಂದು ತಿಳಿಸಿದರು.
ಭಾಲ್ಕಿಯಲ್ಲಿ ಕ್ರೀಡಾಂಗಣ ನಿರ್ಮಾಣ ಕಾಮಗಾರಿ ಪ್ರಗತಿಯಲ್ಲಿದೆ. ಕ್ರೀಡೆಗೆ ಉತ್ತೇಜನ ನೀಡಲು ಜಿಲ್ಲೆಯ ಎಲ್ಲ ಹೋಬಳಿಗಳಲ್ಲೂ ಕ್ರೀಡಾಂಗಣ ನಿರ್ಮಿಸಲಾಗುವುದು. ಇದಕ್ಕಾಗಿ ಸರ್ಕಾರದಿಂದ ರೂ. ೧೦ ಕೋಟಿ ಅನುದಾನ ಮೀಸಲಿಡಲಾಗಿದೆ ಎಂದು ಹೇಳಿದರು.
ಅತಿಯಾದ ಮೊಬೈಲ್ ಬಳಕೆಯಿಂದ ಯುವಜನರ ಆರೋಗ್ಯದ ಮೇಲೆ ದುಷ್ಪರಿಣಾಮ ಉಂಟಾಗುತ್ತಿದೆ. ಯುವಕರು ಉತ್ತಮ ಆರೋಗ್ಯಕ್ಕಾಗಿ ಕ್ರೀಡಾ ಚಟುವಟಿಕೆಗಳಲ್ಲಿ ಭಾಗವಹಿಸಬೇಕು. ಸದೃಢ ರಾಷ್ಟ್ರ ಕಟ್ಟಲು ಕೈಜೋಡಿಸಬೇಕು ಎಂದು ತಿಳಿಸಿದರು.
ಶಾಸಕ ರಹೀಂಖಾನ್ ಮಾತನಾಡಿ, ನಗರದಲ್ಲಿ ಕ್ರೀಡಾ ಚಟುವಟಿಕೆ ನಡೆಸಲು ಅಗತ್ಯ ಸೌಕರ್ಯ ಕಲ್ಪಿಸಲಾಗುವುದು. ಕ್ರೀಡಾ ಪಟುಗಳಿಗೆ ಪ್ರೋತ್ಸಾಹ ನೀಡಲಾಗುವುದು ಎಂದು ಹೇಳಿದರು.
ಅಧ್ಯಕ್ಷತೆ ವಹಿಸಿದ್ದ ಕ್ಲಬ್ ಅಧ್ಯಕ್ಷೆ ಸ್ಫೂರ್ತಿ ಬಸವರಾಜ ಧನ್ನೂರ ಮಾತನಾಡಿ, ಕ್ಲ???ನಿಂದ ರೂ. ೨೫ ಲಕ್ಷ ವೆಚ್ಚದಲ್ಲಿ ಅನೇಕ ಶಾಲೆಗಳಿಗೆ ಮೂಲಸೌಕರ್ಯ ಒದಗಿಸಲಾಗಿದೆ. ಕ್ಯಾನ್ಸರ್ ರೋಗಿಗಳಿಗೆ ನೆರವು ನೀಡಲಾಗಿದೆ ಎಂದು ತಿಳಿಸಿದರು.
ಕ್ರಿಕೆಟ್ ಟೂರ್ನಿಯಿಂದ ಸಂಗ್ರಹವಾಗುವ ಹಣವನ್ನು ಹೆಣ್ಣುಮಕ್ಕಳ ಶಿಕ್ಷಣ ಹಾಗೂ ಸಬಲೀಕರಣಕ್ಕೆ ಬಳಸಲಾಗುವುದು ಎಂದು ಹೇಳಿದರು.
ಗುರುನಾನಕ ಶಿಕ್ಷಣ ಸಂಸ್ಥೆಯ ಅಧ್ಯಕ್ಷ ಸರ್ದಾರ್ ಬಲಬೀರಸಿಂಗ್, ದಿ ಗ್ರೇನ್ ???ಂಡ್ ಸೀಡ್ಸ್ ಮರ್ಚಂಟ್ಸ್ ಅಸೋಸಿಯೇಷನ್ ಅಧ್ಯಕ್ಷ ಬಸವರಾಜ ಧನ್ನೂರ, ಲೋಕೋಪಯೋಗಿ ಇಲಾಖೆಯ ಕಾರ್ಯನಿರ್ವಾಹಕ ಎಂಜಿನಿಯರ್ ಶಿವಶಂಕರ ಕಾಮಶೆಟ್ಟಿ, ರೋಟೆರಿಯ???ಗಳಾದ ರವಿ ಮೂಲಗೆ, ಹಾವಶೆಟ್ಟಿ ಪಾಟೀಲ, ಸುರೇಶ ಚನಶೆಟ್ಟಿ, ತರುಣ್ ನಾಗಮಾರಪಳ್ಳಿ, ಜಹೀರ್ ಅನ್ವರ್, ಶಿವಕುಮಾರ ಯಲಾಲ್, ವಸಂತ ಪವಾರ್, ಸೋಮಶೇಖರ ಬಿ. ಪಾಟೀಲ, ನಾಗರಾಜ ಕರ್ಪೂರ, ಮಂಜುನಾಥ ಹೂಗಾರ, ಸುವರ್ಣಾ ಧನ್ನೂರ, ಕೀರ್ತಿ ವಾಲೆ, ನೆಹಾಲ್ ಸಿಂಗ್, ಅಮಯ್ ಸಿಂದೋಲ್, ಪುನೀತ್ ಸಿಂಗ್, ಡಾ. ಸಂಗಮೇಶ ವಡಗಾವೆ, ಜೈಕಿಶನ್ ಬಿಯಾನಿ, ಕಿರಣ್ ಬೆಲ್ದಾಳೆ, ಅಶೋಕ ಹೆಬ್ಬಾಳೆ, ಗುರು ಸಿಂದೋಲ್, ಹರ್ಷದ್ ಪಟೇಲ್, ನಿಖಿಲ್ ಖಂಡ್ರೆ, ಶುಭಂ ಶರ್ಮಾ, ದೀಪಕ್ ಪಾಂಚಾಳ್ ಇದ್ದರು.
ಕ್ಲಬ್ ಕಾರ್ಯದರ್ಶಿ ಅಭಿಷೇಕ ಚಿಂತಾಮಣಿ ಸ್ವಾಗತಿಸಿದರು. ಸಹನಾ ಪಾಟೀಲ ನಿರೂಪಿಸಿ, ವಂದಿಸಿದರು.
ಚಾಲನೆ: ಬೀದರ್ ದಕ್ಷಿಣ ಶಾಸಕ ಡಾ. ಶೈಲೇಂದ್ರ ಬೆಲ್ದಾಳೆ ಅವರು ಶುಕ್ರವಾರ ಬಲೂನ್ ಹಾರಿಬಿಡುವ ಮೂಲಕ ಟೂರ್ನಿಗೆ ಚಾಲನೆ ನೀಡಿದರು.
ಕರ್ನಾಟಕ ರಾಜ್ಯ ಕ್ರಿಕೆಟ್ ಅಸೋಸಿಯೇಷನ ಸಾಕ್ಷಿ ಕೆ. ಡಾಯಿಜೋಡೆ ಅವರನ್ನು ಸನ್ಮಾನಿಸಲಾಯಿತು.
ಕ್ಲಬ್ ಅಧ್ಯಕ್ಷೆ ಸ್ಫೂರ್ತಿ ಧನ್ನೂರ, ಪ್ರಮುಖರಾದ ಸರ್ದಾರ್ ಬಲಬೀ???ಸಿಂಗ್, ಸಂತೋಷ್ ತಾಳಂಪಳ್ಳಿ, ಕೇಶವರೆಡ್ಡಿ, ಬಸವರಾಜ ಧನ್ನೂರ, ಸುವರ್ಣಾ ಧನ್ನೂರ, ಸುಹಾಸ್ ಸಬಾದೆ, ಯೋಗೇಂದ್ರ ಯದಲಾಪುರೆ ಮತ್ತಿತರರು ಇದ್ದರು.
ಟೂರ್ನಿ ಭಾನುವಾರ ಸಮಾರೋಪಗೊಳ್ಳಲಿದೆ. ಒಟ್ಟು ಎಂಟು ತಂಡಗಳು ಪಾಲ್ಗೊಂಡಿದ್ದು, ವಿಜೇತ ತಂಡ ರೂ. ೫೦ ಸಾವಿರ ಹಾಗೂ ರನ್ನರ್ ಅಪ್ ತಂಡ ರೂ. ೨೫ ಸಾವಿರ ನಗದು ಬಹುಮಾನ ಹಾಗೂ ಟ್ರೋಫಿ ಪಡೆಯಲಿದೆ.
ಲೀಗ್ ಹಂತದ ಪಂದ್ಯಗಳಲ್ಲಿ ತಂಡಗಳ ಮಧ್ಯೆ ತೀವ್ರ ಪೈಪೋಟಿ ಕಂಡು ಬಂದಿತು. ಪ್ರೇಕ್ಷಕರು ಶಿಳ್ಳೆ ಹೊಡೆದು, ಚಪ್ಪಾಳೆ ತಟ್ಟಿ ಆಟಗಾರರನ್ನು ಹುರಿದುಂಬಿಸಿದರು.