ಪೊಲೀಸ್ ಠಾಣೆಯಲ್ಲಿ ಸಂವಿಧಾನ ಸಮರ್ಪಣ ದಿನಾಚರಣೆ

ವಾಡಿ: ನ.26:ಪಟ್ಟಣದ ಪೆÇಲೀಸ್ ಠಾಣೆಯಲ್ಲಿ ಸಂವಿಧಾನ ಸಮರ್ಪಣ ದಿನಾಚರಣೆ ಆಚರಿಸಲಾಯಿತು. ಪಿಎಸ್‍ಐ ಕೆ.ತಿರುಮಲೇಶ ಸಿಬ್ಬಂದಿಗಳಿಗೆ ಸಂವಿಧಾನದ ಪೀಠಿಕೆ ಬೋಧಿಸಿದರು.
ಬಳಿಕ ಮಾತನಾಡಿದ ಪಿಎಸ್‍ಐ ಕೆ.ತಿರುಮಲೇಶ, ಸಂವಿಧಾನ ಸಮರ್ಪಣ ದಿನವನ್ನು ಪ್ರತಿ ವರ್ಷ ನವೆಂಬರ್ 26 ರಂದು ಆಚರಿಸಲಾಗುತ್ತದೆ. ಸಂವಿಧಾನದ ಪೀತಮಹಾ ಡಾ.ಅಂಬೇಡ್ಕರ್ ಅವರ
ಕೊಡುಗೆ ಈ ದೇಶಕ್ಕೆ ಅಪಾರವಾಗಿದೆ.
ಈ ದಿನದಂದು, ಭಾರತೀಯ ಸಂವಿಧಾನವನ್ನು ಅಂಗೀಕರಿಸಲಾಗಿತ್ತು. 1949ರ ನವೆಂಬರ್ 26ರಂದು ಸಂವಿಧಾನ ರಚನಾ ಸಭೆಯಿಂದ ಅಂಗೀಕರಿಸಲ್ಪಟ್ಟಿತ್ತು. 2015 ರಿಂದ ಈ ದಿನವನ್ನು ಸಂವಿಧಾನ ದಿನವನ್ನಾಗಿ ಆಚರಿಸಲು ಸರ್ಕಾರ ಘೋಷಿಸಿದೆ ಎಂದರು.

ಪೆÇಲೀಸ್ ಠಾಣೆಯ ಎಎಸ್‍ಐ ಶರಣಪ್ಪ ಜಾಂಜಿ, ಮುಖ್ಯ ಪೇದೆಗಳಾದ ರಮೇಶ, ಅಮರನಾಥ, ಜ್ಯೋತಿ, ಸುನಿಲ್, ಶಿವಪ್ಪ, ಅಂಬ್ರೇಶ, ಸಂಗಮೇಶ, ಗವಿಸಿದ್ದ ಇದ್ದರು.