ಸಂವಿಧಾನ ಸಮರ್ಪಣಾ ದಿನಾಚರಣೆ ಹಾಗೂ ಸಾಧಕರಿಗೆ ಸನ್ಮಾನ

ಕಲಬುರಗಿ:ಡಿ.3: ನಗರದ ಡಾ.ಎಸ್.ಎಂ.ಪಂಡಿತ್ ರಂಗ ಮಂದಿರದಲ್ಲಿ ಕರ್ನಾಟಕ ರಾಜ್ಯ/ಸರ್ಕಾರಿ/ ಅರೆ ಸರ್ಕಾರಿ/ಪರಿಶಿಷ್ಟ ಜಾತಿ/ ಪರಿಶಿಷ್ಟ ಪಂಗಡ/ನೌಕರರ ಸಂಘ/ರಾಜ್ಯ ಘಟಕ/ಕೇಂದ್ರ ಕಛೇರಿ ಜಿಲ್ಲಾ ಘಟಕದಿಂದ 76ನೇ ಸಂವಿಧಾನ ಸಮರ್ಪಣಾ ದಿನಾಚರಣೆ ಹಾಗೂ ಸಾಧಕರಿಗೆ ಸನ್ಮಾನ ಕಾರ್ಯಕ್ರಮವನ್ನು ರಾಜ್ಯಾಧ್ಯಕ್ಷರಾದ ಮಹೇಶ್ ಸಿ ಹುಬ್ಬಳ್ಳಿ ಅವರ ನೇತೃತ್ವದಲ್ಲಿ ಹಮ್ಮಿಕೊಳ್ಳಲಾಗಿತ್ತು.
ಕಾರ್ಯಕ್ರಮದಲ್ಲಿ ಪ್ರಾರ್ಥನೆ ಗೀತೆಯನ್ನು ಗಜೇಂದ್ರ ಮಿಂಚಾ ನಡೆಸಿಕೊಟ್ಟರು.
ಮಲ್ಲಿಕಾರ್ಜುನ್ ಹಲಗೇರಾ, ಡಾ. ಅಂಬಾರಾಯ ರುದ್ರವಾಡಿ, ಡಾ. ಶರಣಬಸಪ್ಪ ಖ್ಯಾತನಾಳ, ಸ್ವಾತಿ ದರ್ಗಿ ಇವರು ಕಾರ್ಯಕ್ರಮ ಉದ್ಘಾಟಿಸಿದರು. ಸಂವಿಧಾನ ಪೀಠಿಕೆಯನ್ನು ವಿದ್ಯಾಧರ್ ಕಾಂಬಳೆ ಮಂಡಿಸಿದರು. ವಿಠ್ಠಲ್ ಗೋಳಾ ಅವರು ಸಂಘ ನಡೆದು ಬಂದ ದಾರಿ, ಈ ಕಾರ್ಯಕ್ರಮವನ್ನು ಏಕೆ ಆಯೋಜಿಸಲಾಗಿದೆ, ಸಂವಿಧಾನ ಜಾಗೃತಿ ಮೂಡಿಸುವುದು, ವೈಚಾರಿಕವಾಗಿ ನಾವೆಲ್ಲ ಸಂವಿಧಾನದ ಬಗ್ಗೆ ಅರ್ಥ ಮಾಡಿಕೊಳ್ಳಬೇಕು. ಪ್ರತಿಯೊಬ್ಬರಿಗೂ ಇದರ ಬಗ್ಗೆ ಅರ್ಥವಾಗಬೇಕು ಎಂದು ಹೇಳಿದರು.

ವಿಶೇಷ ಉಪನ್ಯಾಸಕರಾಗಿ ರಮೇಶ್ ಮಾಡ್ಯಾಳ್ಕರ್ ಅವರು, ಸಂವಿಧಾನದ ಬಗ್ಗೆ ಪ್ರತಿಯೊಬ್ಬರಿಗೂ ಜಾಗೃತಿ ಮೂಡಿಸುವುದು,ನಮ್ಮ ಸಂವಿಧಾನ ನಮ್ಮ ಹೆಮ್ಮೆ. ಸಂವಿಧಾನ ಓದಬೇಕು ಅರ್ಥಮಾಡಿಕೊಳ್ಳಬೇಕು. ಶಿಕ್ಷಣದಿಂದಲೇ ಎಲ್ಲಾ ಸಾಧ್ಯ, ಶಿಕ್ಷಣ ಸಂಘಟನೆ ಹೋರಾಟ ಬಾಬಾ ಸಾಹೇಬರ ಪಾಂಡಿತ್ಯಕ್ಕಾಗಿ ನಾವೆಲ್ಲರೂ ತಲೆಬಾಗಬೇಕು.ನಾವು ಅಷ್ಟೇ ಓದಿ ತಿಳಿದುಕೊಂಡಿದ್ದರೆ ಸಾಕಾಗದು.ನಮ್ಮ ಸಮಾಜವನ್ನು ಪರಿವರ್ತನೆ ಮಾಡಬೇಕು. ಎನ್ನುವ ಮಾತನ್ನು ತಮ್ಮ ಉಪನ್ಯಾಸದಲ್ಲಿ ನೀಡಿದರು. ಡಾ. ರುದ್ರವಾಡಿ ಅವರು ಸಂವಿಧಾನದ ಮಹತ್ವವನ್ನು ಪ್ರತಿಯೊಬ್ಬರಿಗೂ ಅರ್ಥವಾಗುವಂತೆ ತಮ್ಮ ಸರಳ ಮಾತಿನಿಂದ ತಿಳಿಸಿದರು. ಸಂವಿಧಾನದ ಕಿರು ಪುಸ್ತಕವನ್ನು ಡಾ. ಶರಣಬಸಪ್ಪ ಖ್ಯಾತನಾಳ ಮತ್ತು ರವಿಕಾಂತಿ ಎಲ್ಲಾ ಗಣ್ಯ ಮಾನ್ಯರು ಲೋಕಾರ್ಪಣೆ ಮಾಡಿದರು. ಸಂಘಟನೆ ಕಡೆಯಿಂದ ವಿವಿಧ ವಿದ್ಯಾರ್ಥಿ ನಿಲಯದ,ವಿದ್ಯಾರ್ಥಿ ವಿದ್ಯಾರ್ಥಿನಿಯರಿಗೆ,ಬಾಬಾ ಸಾಹೇಬರ ವಿಚಾರಧಾರೆಗಳ ಕುರಿತು ರಸಪ್ರಶ್ನೆ,ಭಾಷಣ, ಪ್ರಬಂಧ ಗಾಯನ,ವಿವಿಧ ಸ್ಪರ್ಧೆಗಳನ್ನು ಏರ್ಪಡಿಸಲಾಗಿತ್ತು. ಸ್ಪರ್ಧೆಯಲ್ಲಿ ಭಾಗವಹಿಸಿದ ಎಲ್ಲಾ ವಿದ್ಯಾರ್ಥಿ, ವಿದ್ಯಾರ್ಥಿನಿಯರಿಗೆ ಗೌರವ ಸನ್ಮಾನ ಮಾಡಲಾಯಿತು. ವಿವಿಧ ಕ್ಷೇತ್ರದಲ್ಲಿ ಪ್ರಶಸ್ತಿ ಪಡೆದುಕೊಂಡಿರುವ, ಎಲ್ಲಾ ಇಲಾಖೆಗಳ ಪುರಸ್ಕøತರಿಗೂ ಗೌರವ ಸನ್ಮಾನ ಮಾಡಿ ನೆನಪಿನ ಕಾಣಿಕೆ ನೀಡಲಾಯಿತು.
ಬಾಬಾ ಸಾಹೇಬರ ವಿಚಾರಗಳನ್ನು, ಅವರು ನಡೆದು ಬಂದ ಮಾರ್ಗವನ್ನು,ಅವರು ಏಕಪಾತ್ರ ಅಭಿನಯದಲ್ಲಿ, ಅತ್ಯುತ್ತಮವಾಗಿ ವಿದ್ಯಾಧರ ಕಾಂಬಳೆ ಅವರು ವ್ಯಕ್ತಪಡಿಸಿದರು. ಅಧ್ಯಕ್ಷ ಸ್ಥಾನವನ್ನು ವಹಿಸಿರುವ ರಾಜ್ಯಾಧ್ಯಕ್ಷ ಮಹೇಶ್ ಹುಬ್ಬಳ್ಳಿ ಅವರು, ಪ್ರತಿಯೊಬ್ಬರಲ್ಲಿ ಸಂವಿಧಾನದ ಜಾಗೃತಿಯನ್ನು ಮೂಡಿಸಬೇಕು. ಸಾಧಾರಣ ವ್ಯಕ್ತಿಗೂ ಸವಿಧಾನದ ಅರ್ಥವಾಗಬೇಕು. ಹಕ್ಕುಗಳು ಕರ್ತವ್ಯಗಳ ಬಗ್ಗೆ ತಿಳಿದುಕೊಳ್ಳಬೇಕು ಆಗಲೇ ನಮ್ಮ ಸಮಾಜ ಸುಧಾರಣೆಯಾಗಲು ಸಾಧ್ಯವಾಗುತ್ತದೆ. ಈ ಕಾರ್ಯಕ್ರಮವನ್ನು ಆಯೋಜಿಸಿರುವ ಉದ್ದೇಶವೇ ಅದಾಗಿದೆ, ನಾವು ಅಷ್ಟೇ ತಿಳಿದುಕೊಂಡರೆ ಸಾಲದು ನಮ್ಮ ಸುತ್ತಮುತ್ತ ಇದ್ದವರನ್ನು ನಾವು ಜಾಗೃತಿ ಗೊಳಿಸಬೇಕು. ಅಂದಾಗಲೇ ಸಮಾಜ ಸುಧಾರಣೆಯಾಗುವುದು, ಎಂದು ತಮ್ಮ ಅಧ್ಯಕ್ಷೆ ನುಡಿಯಲ್ಲಿ ನುಡಿದರು. ಡಾ. ಮಾರುತಿ ಬೇಂದ್ರೆ ಅವರು ನಿರೂಪಿಸಿದರು. ಕಾಶಿನಾಥ್ ಮುಖರ್ಜಿ ಸ್ವಾಗತಿಸಿದರು. ಸುಭಾಷ ಆರ್ ವಂದಿಸಿದರು. ಈ ಕಾರ್ಯಕ್ರಮದಲ್ಲಿ ದೇವಮ್ಮ ಹುಲಿಮನಿ, ಸಂಜಯ ಕಪೂರ, ಡಾ.ಚಂದ್ರಕಾಂತ ನರಿಬೋಳ, ಡಾ.ರಾಕೇಶ ಕಾಂಬಳೆ ಸೇರಿದಂತೆ ಹಿರಿಯ ಕಿರಿಯ ಅಧಿಕಾರಿಗಳು, ಸರ್ವ ಪದಾಧಿಕಾರಿಗಳು, ಸದಸ್ಯರು ಇದ್ದರು.