ವಾಡಿ :ನ.28:ಚಿತ್ತಾಪುರ ಪಟ್ಟಣದ ಪೆÇಲೀಸ್ ಠಾಣೆಯಲ್ಲಿ ಸಂವಿಧಾನ ಸಮರ್ಪಣೆ ದಿನಾಚರಣೆ ಆಚರಿಸಲಾಯಿತು. ಪಿಎಸ್ ಐ ಮಂಜುನಾಥ್ ರೆಡ್ಡಿ ಪೆÇಲೀಸ್ ಪೇದೆಗಳಿಗೆ ಸಂವಿಧಾನದ ಪೀಠಕ್ಕೆ ಬೋಧಿಸಿದರು.
ಬಳಿಕ ಮಾತನಾಡಿದ ಪಿಎಸ್‍ಐ ಮಂಜುನಾಥ್ ರೆಡ್ಡಿ, ನಮ್ಮ ದೇಶದ ಸಂವಿಧಾನ ಅತ್ಯಂತ ಶ್ರೇಷ್ಠವಾಗಿದೆ. ಡಾ.ಅಂಬೇಡ್ಕರ್ ಅವರು ರಚಿಸಿರುವ ಸಂವಿಧಾನದಲ್ಲಿ ಮಾನವೀಯ ಮೌಲ್ಯಗಳಿಗೆ ಹೊಸ ಚೈತನ್ಯ ತರಲಾಗಿದೆ. ಸಮಾನತೆ, ವ್ಯಕ್ತಿ ಗೌರವ ಹಾಗೂ ಪ್ರತಿಯೊಂದುಕ್ಕೂ ಸಂವಿಧಾನ ಅಡಿಪಾಯವಾಗಿದೆ. ಅದರ ಆಶಯಗಳಿಗೆ ವಿರುದ್ಧವಾಗಿ ನಾವು ಎಂದಿಗೂ ನಡೆದುಕೊಳ್ಳಬಾರದು. ಪ್ರಜಾಪ್ರಭುತ್ವ ಉಳಿವಿಗಾಗಿ ಸಂವಿಧಾನ ಗಟ್ಟಿಯಾಗಿ ಉಳಿಯಬೇಕು ಎಂದರು.
ಪೆÇಲೀಸ್ ಪೇದೆಗಳಾದ ರಮೇಶ, ತಿಮ್ಮಯ್ಯ, ನಿತಿನ್, ವೀರೇಶ್, ಮಹೇಶ್, ಮಂಜುನಾಥ್ ಇದ್ದರು.























