
ಕೆಂಭಾವಿ:ನ.28: ನಮ್ಮ ಸಂವಿಧಾನ ಎಲ್ಲ ಜಾತಿ, ಧರ್ಮ, ಭಾಷೆ, ಲಿಂಗ, ಪ್ರದೇಶದ ಜನರಿಗೂ ಸಮಾನ ಹಕ್ಕು, ಅವಕಾಶ ಮತ್ತು ನ್ಯಾಯ ನೀಡುವ ಸರ್ವ ಶ್ರೇಷ್ಠ ಸಮರ್ಪಿತ ಗ್ರಂಥವಾಗಿದೆ ಎಂದು ಸರ್ಕಾರಿ ಪದವಿ ಪೂರ್ವ ಕಾಲೇಜಿನ ಪ್ರಾಚಾರ್ಯರಾದ ಅಶೋಕ್ ಕುಮಾರ್ ತಳಕೇರಿ ಹೇಳಿದರು.
ಪಟ್ಟಣದ ಮಹಾ ನಾಯಕ ಡಾ. ಬಿ ಆರ್ ಅಂಬೇಡ್ಕರ್ ಅವರ ಪುತ್ತಳಿ ಆವರಣದಲ್ಲಿ ನಡೆದ ಸಂವಿಧಾನ ಸಮರ್ಪಣೆ ದಿನದ ಅತಿಥಿಯಾಗಿ ಭಾಗವಹಿಸಿ ಮಾತನಾಡಿದ ಅವರು ಭಾರತದ ಸಂವಿಧಾನ ಸಮಾನತೆಯ ತಳಹದಿ ಮೇಲೆ ರೂಪುಗೊಂಡಿದೆ.ಯಾವುದೇ ಒಂದು ವರ್ಗದ ಜನರಿಗಾಗಿ ಅಲ್ಲ, ದೇಶದ ಪ್ರತಿಯೊಬ್ಬ ನಾಗರಿಕನಿಗಾಗಿ ಇರುವ ಮೂಲ ಕಾನೂನು ಎಂದ ಅವರು ಡಾ. ಬಿ ಆರ್ ಅಂಬೇಡ್ಕರ್ ಅವರು ಯಾವತ್ತೂ ಹಿಂದುಳಿದ ದಲಿತ ನಾಯಕರಲ್ಲ ಎಲ್ಲಾ ಜನಾಂಗದ ನಾಯಕರು ಸಮಾಜದ ಕಟ್ಟ ಕಡೆಯ ಶೋಷಿತರಿಂದ ಹಿಡಿದು ಮೇಲ್ವರ್ಗದ ಪ್ರತಿಯೊಬ್ಬರಿಗೂ ಅವರ ರಚಿಸಿದ ಸಂವಿಧಾನದಿಂದ ಸಮಾನತೆ ತೋರುತ್ತಿದ್ದಾರೆ ಎಂದು ಹೇಳಿದರು. ಈ ದೇಶಕ್ಕೆ ದೊಡ್ಡದಾದ ಲಿಖಿತ ಸಂವಿಧಾನವನ್ನು ಕೊಟ್ಟಂತ ಮಹಾ ಮಾನವತವಾದಿ 1949 ನವಂಬರ್ 26ರಂದು ಸಂವಿಧಾನದ ಸಮರ್ಪಣೆ ದಿನವನ್ನಾಗಿ ಇಂದು ಆಚರಿಸುತ್ತಿದ್ದೇವೆ ಎಂದರು.
ಕಾರ್ಯಕ್ರಮದ ಅಧ್ಯಕ್ಷತೆ ಮುಖಂಡ ರಾಮನಗೌಡ ಪೆÇಲೀಸ್ ಪಾಟೀಲ್ ವಹಿಸಿದರು. ಕಾರ್ಯಕ್ರಮದಲ್ಲಿ ನೂತನ ಪುರಸಭೆ ಅಧ್ಯಕ್ಷರಿಗೆ ಹಾಗೂ ಪದವಿಪೂರ್ವ ಕಾಲೇಜಿನ ಪ್ರಾಂಶುಪಾಲರಿಗೆ ಗೌರವಿಸಲಾಯಿತು.
ಈ ಸಂದರ್ಭದಲ್ಲಿ ಪರಶುರಾಮ ಬಳಬಟ್ಟಿ, ಶರಣಪ್ಪ ಗಾಯಕವಾಡ, ಮಲ್ಲಿಕಾರ್ಜುನ್ ಶಿಕ್ಷಕರು, ಮಡಿವಾಳಪ್ಪ ಕಟ್ಟಿಮನಿ, ಬಸವಣ್ಣಪ್ಪ ಆರ್,ಮಾಳಳ್ಳಿಕರ್, ದೇವೇಂದ್ರಪ್ಪ ವಠಾರ, ಸಂಗಣ್ಣ ಕರಡಕ್ಕಲ, ಡಾ ಪರಶುರಾಮ, ದೇವೀಂದ್ರ ಮ್ಯಾಗೇರಿ, ಗೋಪಾಲ ಬಡಿಗೇರ, ಸುರೇಶ ಮಾಳಳ್ಳಿಕರ್, ಬಡಿಗೇರ, ಸಾಯಿಬಣ್ಣ ಎಂಟುಮಾನ, ಮಲ್ಲು ವಠಾರ, ಕುಮಾರ್ ಮೋಪುಗಾರ, ಸಂಗಣ್ಣ ಚಿಂಚೋಳಿ, ಲಕ್ಷ್ಮಣ್ಣ ಬಾವಿಮನಿ ಸೇರಿದಂತೆ ಪುರಸಭೆ ಸದಸ್ಯರು, ಸಿಬ್ಬಂದಿ ಇತರರು ಭಾಗವಹಿಸಿದ್ದರು.

























