
ಅಫಜಲಪುರ:ನ.25: ತಾಲೂಕಿನ ಸರಕಾರಿ ಕಛೇರಿ ಹಾಗೂ ಶಾಲಾ ಕಾಲೇಜುಗಳಲ್ಲಿ ನ.26 ರಂದು ಬೆಳಿಗ್ಗೆ ಡಾ.ಬಿ.ಆರ್. ಅಂಬೇಡ್ಕರ್ ಅವರ ಭಾವಚಿತ್ರಕ್ಕೆ ಪೂಜೆ ಸಲ್ಲಿಸುವ ಮೂಲಕ ಸಂವಿಧಾನ ದಿನವನ್ನು ಬಹಳ ಅರ್ಥಪೂರ್ಣವಾಗಿ ಆಚರಿಸಬೇಕು ಎಂದು ಗ್ರೇಡ್-2 ತಹಸಿಲ್ದಾರ ಶರಣಬಸು ಹೊಸಮನಿ ಹೇಳಿದರು.
ಪಟ್ಟಣದ ತಹಸಿಲ್ ಕಾರ್ಯಾಲಯದಲ್ಲಿ ಸಂವಿಧಾನ ದಿನ ಆಚರಣೆಯ ಪ್ರಯುಕ್ತ ನಡೆದ ತಾಲೂಕು ಆಡಳಿತ ವಯಿತಿಂದ ನಡೆದ ಪೂರ್ವ ಭಾವಿ ಸಭೆಯ ಅಧ್ಯಕ್ಷತೆ ವಹಿಸಿ ಮಾತನಾಡಿ, ಸಂವಿಧಾನ ದಿನವನ್ನು ಬಹು ಎಲ್ಲರೂ ಸೇರಿಕೊಂಡು ಅರ್ಥಪೂರ್ಣವಾಗಿ ಆಚರಿಸುವ ನಿಟ್ಟಿನಲ್ಲಿ ದಿ. 26 ಬೆಳಿಗ್ಗೆ 9:30 ಕ್ಕೆ ಡಾ.ಅಂಬೇಡ್ಕರ್ ವೃತ್ತದಿಂದ ಪಟ್ಟಣದ ಪ್ರಮುಖ ರಸ್ತೆಗಳ ಮೂಲಕ ಪ್ರಭಾತ್ ಪೇರಿ ಮಾಡಲಾಗುವುದು. ಪಟ್ಟಣದ ಪದವಿ ಪೂರ್ವ ಹಾಗೂ ಪ್ರಥಮ ದರ್ಜೆ ಕಾಲೇಜುಗಳ ವಿದ್ಯಾರ್ಥಿಗಳು ಹೆಚ್ಚಿನ ಸಂಖ್ಯೆಯಲ್ಲಿ ಭಾಗಿಯಾಗಬೇಕು. ನಂತರ ಸರಕಾರಿ ಪ್ರೌಢ ಶಾಲೆಯ ಆವರಣದ ಸಭಾ ಭವನದಲ್ಲಿ ಕಾರ್ಯಕ್ರಮ ನಡೆಸಲಾಗುವುದು. ಇನ್ನೂ ಕಾಲೇಜಿನ ಪ್ರಾಂಶುಪಾಲರು ಸಿಬ್ಬಂದಿಗಳು, ಇಲಾಖೆಗಳ ಅಧಿಕಾರಿಗಳು ಭಾಗಿಯಾಗಬೇಕು ಎಂದು ತಿಳಿಸಿದರು.
ಈ ಸಂದರ್ಭದಲ್ಲಿ ಅಧಿಕಾರಿಗಳಾದ ಅಶೋಕ ನಾಯ್ಕ, ವಿ.ವೈ.ಗುಡಮಿ, ಅಬ್ದುಲ್ ರಜಾಕ್, ಶಂಕರಗೌಡ ಪಾಟೀಲ, ಡಾ.ಚೇತನ್, ಶರಣಬಸಪ್ಪ, ಪ್ರವೀಣ ಹೇರೂರ್, ಜೆಟ್ಟೆಪ್ಪಾ ಜಾಮಗೊಂಡ, ವಿಜಯಕುಮಾರ ಹಳಗೋದಿ, ಚಂದ್ರಕಾಂತ ರಾಠೋಡ್, ಪ್ರಾಂಶುಪಾಲ ಗುರುಲಿಂಗಯ್ಯ ಸಾಲಿಮಠ ಸೇರಿದಂತೆ ಅನೇಕರು ಇದ್ದರು.


































