ಸಂವಿಧಾನ ದಿನಾಚರಣೆ

ಚನ್ನಮ್ಮನ ಕಿತ್ತೂರು,ನ27: ನವೆಂಬರ್ 26 ರಂದು ಪ್ರತಿ ವರ್ಷ ಸಂವಿಧಾನ ದಿನವಾಗಿ ಆಚರಿಸಲಾಗುತ್ತದೆ, ಇದನ್ನು ‘ಸಂವಿಧಾನ ದಿನಾಚರಣೆ’ ಎಂದೂ ಕರೆಯುತ್ತಾರೆ. ನವೆಂಬರ್ 26, 1949 ರಂದು ಭಾರತದ ಸಂವಿಧಾನವನ್ನು ಅಂಗೀಕರಿಸಲಾಯಿತು ಮತ್ತು ಜನವರಿ 26, 1950 ರಂದು ಜಾರಿಗೆ ತರಲಾಯಿತು ಎಂದು ಪ್ರಾಶುಂಪಾಲ ಮಹೇಶ ಚನ್ನಂಗಿ ಹೇಳಿದರು.

ತಾಲೂಕಾಡಳಿತ, ತಾಪಂ ಚ. ಕಿತ್ತೂರು ಹಾಗೂ ಸಮಾಜ ಕಲ್ಯಾಣ ಇಲಾಖೆ ಬೈಲಹೊಂಗಲ-ಕಿತ್ತೂರು ಇವರುಗಳ ಸಂಯುಕ್ತ ಆಶ್ರಯದಲ್ಲಿ ಸ್ಥಳೀಯ ತಹಶೀಲ್ದಾರ ಕಛೇರಿ ಸಭಾಭವನದಲ್ಲಿ ಸಂವಿಧಾನ ದಿನಾಚರಣೆ ಕಾರ್ಯಕ್ರಮದಲ್ಲಿ ಡಾ.ಬಾಬಾಸಾಹೇಬ ಅಂಬೇಡ್ಕರ ಭಾವಚಿತ್ರಕ್ಕೆ ಪೂಜೆ ಸಲ್ಲಿಸಿ ಅವರು ಉಪನ್ಯಾಸ ನೀಡಿದರು.  ಅಂದಿನಿಂದ, ಸಂವಿಧಾನವು ಭಾರತದ ಹಾದಿ ಮತ್ತು ಪ್ರಕ್ರಿಯೆಯನ್ನು ಯಶಸ್ವಿಯಾಗಿ ಮಾರ್ಗದರ್ಶನ ಮಾಡುತ್ತಿದೆ. ಸಂವಿಧಾನ ದಿನಾಚರಣೆ ಮತ್ತು ನಂತರದ ಚಟುವಟಿಕೆಗಳು ಭಾರತೀಯ ಸಂವಿಧಾನದ ಮಹತ್ವದ ಬಗ್ಗೆ ಜಾಗೃತಿ ಮೂಡಿಸುವುದು ಮತ್ತು ಅದರ ಶಿಲ್ಪಿ ಡಾ. ಬಿ.ಆರ್. ಅಂಬೇಡ್ಕರ್ ಅವರ ಕೊಡುಗೆಗಳನ್ನು ಗುರುತಿಸುವ ಗುರಿ ಹೊಂದಿವೆ ಎಂದರು.

ಕಿತ್ತೂರು ರಾಣಿ ಚನ್ನಮ್ಮ ಬಾಲಕೀಯರ ವಸತಿ ಶಾಲೆ ಮಕ್ಕಳಿಂದ ಭಾರತ ಸಂವಿಧಾನ ಪ್ರಸ್ತಾವಣೆ ಕುರಿತು ಸಂಸ್ಕೃತಿಕ ಕಾರ್ಯಕ್ರಮ ಜರುಗಿದವು.
ಸಭೆ ಅಧ್ಯಕ್ಷತೆ ತಾಪಂ ಇಓ ನಿಂಗಪ್ಪ ಮಸಳಿ ವಹಿಸಿಕೊಂಡಿದ್ದರು. ಪಪಂ ಮುಖ್ಯಾಧಿಕಾರಿ ಮಲ್ಲಯ್ಯಾ ಹಿರೇಮಠ, ಉಪಖಜಾಂಚಿ ಅಧಿಕಾರಿ ಚಂದ್ರಶೇಖರ ಹಾದಿಮನಿ, ಬಿ.ಆರ್.ಪಿ. ಎಂ.ವಾಯ್. ಕಡಕೋಳ, ರಾಜು ಜಾಗಂಟಿ, ಸಂಜೀವ ಲೋಕಾಪೂರ, ಫಕ್ಕೀರಪ್ಪ ಜಾಗಂಟಿ, ಮಂಜು ಮಣ್ಣವಡ್ಡರ, ಲೋಕೋಪಯೋಗಿ ಅಭಿಯಂತರ ಸಂಜೀವ ಮಿರಜಕರ, ಬೀಮಪ್ಪ ದುರಗಣ್ಣವರ, ಆರ್.ಆಯ್. ಎಂಡಿ ಹಿರೇಮಠ, ಉಪತಹಶೀಲ್ದಾರ ಸುರೇಶ ಅಡವಿ, ಶೀರಸ್ಥೆದಾರ ಸುನೀಲ್ ಕುಲಕರ್ಣಿ, ಸವಿತಾ ಹರಿಜನ, ಪ್ರ.ದ.ಸ. ಎಚ್.ಆರ್.ಪಾಟೀಲ, ಕುಮಾರಿ ಕವಿತಾ ಪಾಟೀಲ, ಆರತಿ ಸುಂಟೆ, ಮಂಜುನಾಥ ತೊಟಗಿ, ಸಂಗಮೇಶ ರೊಳ್ಳಿ, ಜಗದೀಶ ಅನ್ನಿಗೇರಿ, ಎಂ.ಎಸ್.ಪಾಟೀಲ್, ಪರಶುರಾಮ ಕಣಬೂರ, ವಿದ್ಯಾ ದೊಡಮನಿ, ರಶ್ಮಿ ಕಾಜಗಾರ, ರೂಪಾ ಜ್ಯೋತಿ ಮತ್ತು ತಹಶೀಲ್ದಾರ ಹಾಗೂ ಸಮಾಜ ಕಲ್ಯಾಣ ಸಿಬ್ಬಂದಿ, ಲೋಕೋಪಯೋಗಿ ವ್ಯವಸ್ಥಾಪಕ ಶ್ರೀಧರ ಪೂಜಾರ, ವಿವಿಧ ಇಲಾಖೆ ಅಧಿಕಾರಿಗಳು, ಶಿಕ್ಷಕರು, ಮಕ್ಕಳಿದ್ದರು. ನಿರೂಪಣೆ, ಸ್ವಾಗತ, ವಂದನಾರ್ಪಣೆ ಮಂಜುನಾಥ ತೊಟಗಿ ಮಾಡಿದರು. ಇದಕ್ಕೂ ಪೂರ್ವ ರಾಣಿ ಚನ್ನಮ್ಮನ ವರ್ತುಳದಲ್ಲಿ ಕಿತ್ತೂರು ರಾಣಿ ಚನ್ನಮ್ಮನ ವಸತಿ ಶಾಲೆ ವಿದ್ಯಾರ್ಥಿಗಳಿಂದ ಸಂವಿಧಾನ ಪೀಠಿಕೆ ಬೋಧಿಸಲಾಯಿತು. ನಂತರ ಗುರುವಾರ ಪೇಟೆ ಮಾರ್ಗವಾಗಿ ಸೋಮವಾರ ಪೇಟೆ ಪಪಂ ವರೆಗೆ ಸಂವಿಧಾನ ಜಾಥಾ ಹಮ್ಮಿಕೊಳ್ಳಲಾಗಿತ್ತು.