
ತಾಳಿಕೋಟೆ :ನ.೨೭: ಪಟ್ಟಣದ ಸರ್ವಜ್ಞ ವಿದ್ಯಾಪೀಠ ಕನ್ನಡ ಮತ್ತು ಆಂಗ್ಲ ಮಾಧ್ಯಮ ಪ್ರಾಥಮಿಕ ಹಾಗೂ ಪ್ರೌಢಶಾಲೆಯಲ್ಲಿ ಬುಧವಾರರಂದು ಸಂವಿಧಾನ ದಿನಾಚರಣೆಯನ್ನು ಆಚರಿಸಲಾಯಿತು.
ಮಕ್ಕಳಿಂದ ಸಂವಿಧಾನದ ಪೀಠಿಕೆಯನ್ನು ಪಠಿಸಲಾಯಿತು. ಇದೇ ಸಂದರ್ಭದಲ್ಲಿ ಸಮಾಜ ವಿಜ್ಞಾನ ಶಿಕ್ಷಕರಾದ ರಾಜು ಜವಳಗೇರಿ ಅವರು ವಿದ್ಯಾರ್ಥಿಗಳಿಗೆ ಸಂವಿಧಾನದ ಕುರಿತು ಸಂಪೂರ್ಣವಾದ ಮಾಹಿತಿಯನ್ನು ನೀಡಿದರು.
ಕಾರ್ಯಕ್ರಮದಲ್ಲಿ ಶಿಕ್ಷಣ ಸಂಸ್ಥೆಯ ಸಂಸ್ಥಾಪಕ ಅಧ್ಯಕ್ಷರಾದ ಸಿದ್ದನಗೌಡ ಮಂಗಳೂರ, ಮುಖ್ಯಗುರುಗಳಾದ ಸಂತೋಷ ಪವಾರ, ದೈಹಿಕ ಶಿಕ್ಷಕರಾದ ಬಸವರಾಜ ಚಳಗಿ, ಶಾಂತಗೌಡ ಬಿರಾದಾರ, ಸಂಜು ಕುಮಾರ ರಾಠೋಡ, ಬಸವರಾಜ ಸವದತ್ತಿ, ರವಿಕುಮಾರ ಅನಧಿನಿ, ರವಿಕುಮಾರ ಮಲಾಬಾದಿ, ರಸೂಲಸಾ ತುರ್ಕಣಗೇರಿ, ಸಿದ್ದನಗೌಡ ಮುದ್ನೂರ, ಭೀಮನಗೌಡ ಸಾಸನೂರ, ಚೇತನ ನಾವದಗಿ, ಸವಿತಾ ಅಸ್ಕಿ, ಶಿವಲೀಲಾ ಚುಂಚೂರು, ರೂಪ ಪಾಟೀಲ, ಸಂಗಮೇಶ ಬಿರಾದಾರ, ಸಂಗೀತ ಬಿರಾದಾರ, ಮೇಘಾ ಪಾಟೀಲ, ಬೋರಮ್ಮ ಉಕ್ಕಲಿ, ಅನಿತಾ ಚೌದ್ರಿ, ಜ್ಯೋತಿ ಪೋಲಿಸ್ ಪಾಟೀಲ, ಶೃತಿ ಚೌದ್ರಿ, ರಾಜಬಿ ಬಿದರಿ, ನಾಗರತ್ನ ಮೈಲೇಶ್ವರ, ಶಿವಕುಮಾರ ಕುಂಬಾರ, ಹೀನಾ ಸನದಿ, ದೇವೇಂದ್ರ ಗುಳೆದ, ಮುಬಾರಕ ಬನ್ನಟ್ಟಿ, ದೇವರಾಜ ದೇಸಾಯಿ, ಸುಮಾ ಹಿರೇಮಠ, ಪ್ರತಿಭಾ ಗುಬ್ಬೇವಾಡ, ಗುರುದೇವಿ ಮಡಿವಾಳರ, ಜೈಯಶ್ರೀ ಹದಿಮೂರ, ಜೈರಾಬಿ ಮುಲ್ಲಾ ಸರ್ವ ಸಿಬ್ಬಂದಿ ವರ್ಗದವರು ಮತ್ತು ವಿದ್ಯಾರ್ಥಿಗಳು ಉಪಸ್ಥಿತರಿದ್ದರು.

























