ಕಾನೂನು ಮಹಾವಿದ್ಯಾಲಯದಲ್ಲಿ ಸಂವಿಧಾನ ದಿನ ಆಚರಣೆ

ತಾಳಿಕೋಟೆ : ನ.೨೭: ಪಟ್ಟಣದ ಮಾತೋಶ್ರೀ ಕಮಲಾಬಾಯಿ ಸಿದ್ದಪ್ಪ ಕರ್ಜಗಿ ಕಾನೂನು ಮಹಾವಿದ್ಯಾಲಯದಲ್ಲಿ ಬುಧವಾರರಂದು ಸಂವಿಧಾನ ದಿನಾಚರಣೆಯನ್ನು ಆಚರಿಸಲಾಯಿತು.
ಸಂಸ್ಥೆಯ ಸಂಸ್ಥಾಪಕರಾದ ಎಂ.ಎಸ್.ಕರ್ಜಗಿಯವರು ನಮ್ಮ ಸಂವಿಧಾನದ ಆಶೋತ್ತರಗಳು ಎಲ್ಲ ಜನರನ್ನು ಸಮಾತೆಯ ಅಂಗಳದಲ್ಲಿ ನಿಲ್ಲಿಸುವಂತೆ ಮಾಡಿದೆ ಸಮಾಜದ ಕಟ್ಟಕಡೆಯ ವ್ಯಕ್ತಿಗೂ ಎಲ್ಲ ರೀತಿಯ ಮೂಲಭೂತ ಹಕ್ಕುಗಳು ಸಿಗಬೇಕೆಂಬುದಾಗಿದೆ ಈ ಅತ್ಯಂತ ಪವಿತ್ರವಾದ ಸಂವಿದಾನವನ್ನು ರಚಿಸಿ ಅರ್ಪಿಸಿದ ಡಾ.ಬಿ.ಆರ್.ಅಂಬೇಡ್ಕರ್ ಅವರನ್ನು ನೆನೆಯದೇ ಇರಬಾರದು ಸಂವಿದಾನದ ಅಡಿಯಲ್ಲಿ ಎಲ್ಲರೂ ಸಾಗುವದರೊಂದಿಗೆ ಬಲಿಷ್ಠ ಪ್ರಜಾಪ್ರಭುತ್ವ ರಾಷ್ಟç ನಿರ್ಮಾಣದಲ್ಲಿ ಎಲ್ಲರೂ ಪ್ರಮುಖ ಪಾತ್ರ ವಹಿಸಬೇಕಾಗಿದೆ ಎಂದರು.
ಹಿರಿಯ ಸಾಹಿತಿ ಶ್ರೀ ಚಂದ್ರಶೇಖರ ಗೋಗಿ, ಸಂಸ್ಥೆಯ ಸಂಸ್ಥಾಪಕರು ಎಂ.ಎಸ್.ಕರ್ಜಗಿ, ಪ್ರಾಂಶುಪಾಲರಾದ ಶ್ರೀಮತಿ ಅನಾಮಿಕಾ ಅಗರ್ವಾವಾಲ್ ಹಾಗೂ ಉಪನ್ಯಾಸಕರಾದ ಶ್ರೀಮತಿ ಶೋಭಾ ಪಾಟೀಲ ಮತ್ತು ಬಸವರಾಜ ಹೊಸಮಠ ಹಾಗೂ ಮಹಾವಿದ್ಯಾಲಯದ ಎಲ್ಲಾ ಕಾನೂನು ವಿದ್ಯಾರ್ಥಿಗಳು ಭಾಗವಹಿಸಿದ್ದರು.