Home ಜಿಲ್ಲೆ ಬೆಂಗಳೂರು ಕಾಂಗ್ರೆಸ್ ಅಭಿವೃದ್ಧಿ ವಿರೋಧಿ : ಜಗನ್ನಾಥ್ ಗೌಡ

ಕಾಂಗ್ರೆಸ್ ಅಭಿವೃದ್ಧಿ ವಿರೋಧಿ : ಜಗನ್ನಾಥ್ ಗೌಡ

ರಾಮನಗರ,ಫೆ.೨೨:ಕಾಂಗ್ರೆಸ್ ದೇಶದ ಅಭಿವೃದ್ಧಿ ವಿರುದ್ಧ ಹೋದರೆ ಬಿಜೆಪಿ ಅದರ ಹತ್ತು ಪಟ್ಟು ಭಾರತ ದೇಶವನ್ನು ಸದೃಢವಾಗಿ ಕಟ್ಟು
ತ್ತೇದೆ. ಕಾಂಗ್ರೆಸ್ ತಂತ್ರಜ್ಞಾನವನ್ನು ಬಳಸಿಕೊಂಡು ಹೇಗೆ ಅಭಿವೃದ್ಧಿ ಹೊಂದಬೇಕು ಎನ್ನುವುದನ್ನು ಕಲಿಯಬೇಕು. ದೇಶದ ಅಭಿವೃದ್ಧಿ ಕಡೆಗೆ ಹೆಚ್ಚು ಗಮನ ನೀಡಿದರೆ ಒಳಿತು. ಇಲ್ಲವಾದರೆ ನಿರಂತರ ಬಿಜೆಪಿಯು ಅದರ ವಿರುದ್ಧ ಪ್ರತಿಭಟನೆಗೆ ಸಿದ್ಧವಾಗಿರುತ್ತದೆ ಎಂದು ಜಿಲ್ಲಾ ಯುವ ಬಿಜೆಪಿ ಘಟಕದ ಅಧ್ಯಕ್ಷ ಜಗನ್ನಾಥ್ ಗೌಡ ತಿಳಿಸಿದರು.


ಶನಿವಾರ ನಗರದ ಬಿಜೆಪಿ ಕಾರ್ಯಾಲದಯಲ್ಲಿ ಜಿಲ್ಲಾ ಯುವ ಬಿಜೆಪಿ ಘಟಕದಿಂದ ಏರ್ಪಡಿಸಿದ್ದ ಸುದ್ದಿಗೋಷ್ಠಿಯಲ್ಲಿ ಅವರು ಮಾತನಾಡಿ, ‘ಭಾರತ ದೇಶದಲ್ಲಿ ವಿಶ್ವಮಟ್ಟದಲ್ಲಿ ಎಐ ಇಂಪ್ಯಾಕ್ಟ್ ಸೆಮಿಟ್‌ನ್ನು ಫೆಬ್ರವರಿ ೧೬ ರಿಂದ ೨೦ ತಾರೀಖಿನವರೆಗೆ ಆಯೋಜಿಸಲಾಗಿತ್ತು. ಈ ಸಭೆಯಲ್ಲಿ ೧೦೦ ಕ್ಕೂ ಹೆಚ್ಚು ದೇಶಗಳಿಂದ ೫೦೦ ಕ್ಕೂ ಹೆಚ್ಚು ಎಐ ಸೆಮಿಟ್‌ನಿಂದ ಸಿಇಓಗಳು, ೫೦ ಕ್ಕೂ ಹೆಚ್ಚು ಸಂಘಟನೆಗಳು, ಬೇರೆ ಬೇರೆ ದೇಶಗಳಿಂದ ಸಚಿವರು ಗಣ್ಯರು ಭಾಗವಹಿಸಿದ್ದರು. ಇದೊಂದು ಮಹತ್ತರ ಸೆಮಿಟ್ ಆಗಿತ್ತು. ಇಂದಿನ ಆಧುನಿಕ ನಾಗರೀಕತೆಗೆ ಹೊಸ ತಂತ್ರಜ್ಞಾನ, ಕೃತಕ ಬುದ್ಧಿಮತ್ತೆ ಸ್ವಯಂ ನಿರ್ಧಾರ ತೆಗೆದುಕೊಳ್ಳುತ್ತದೆ. ಸ್ವಯಂ ಚಿಂತನೆಯಿಂದ ಮನುಷ್ಯರು ಹೇಗೆ ನಿರ್ಧಾರಿಸಿಂದತೆಯೇ ಎಐ ತಂತ್ರಜ್ಞಾನ ಕೆಲಸ ಮಾಡುತ್ತದೆ. ಇದು ಪ್ರಕ್ರಿಯೆಯು ಹಿಂದೆ ಎಂದೂ ಆಗಿರದ ಬದಲಾವಣೆಯನ್ನು ಸಮಾಜಕ್ಕೆ ತರುತ್ತಿದೆ. ಈ ರೀತಿಯ ನಿರ್ಧಾರದಿಂದ ಮನುಷ್ಯನ ಅರ್ಧ ಕೆಲಸಗಳನ್ನು ಎಐ ತಂತ್ರಜ್ಞಾನವೇ ಮಾಡುವ ಸಾಮಾರ್ಥ್ಯ ಹೊಂದಿದೆ. ಈ ಸಮಾರಂಭವನ್ನು ಪ್ರಧಾನಿ ಮೋದಿ ಅವರು ಉದ್ಘಾಟನೆ ಮಾಡಿದ್ದರು ಎಂದರು.


ಬೆಂಗಳೂರಿನಂತಹ ದೊಡ್ಡ ನಗರಗಳಲ್ಲಿ ಕಸದ ಸಮಸ್ಯೆ ದಿನದಿಂದ ದಿನಕ್ಕೆ ಹೆಚ್ಚುತ್ತಿದೆ. ಎಐ ತಂತ್ರಜ್ಞಾನದ ಮೂಲಕ ಕಸವನ್ನು ೪೮ ತಾಸುಗಳಲ್ಲಿ ಮಣ್ಣಾಗಿ ಪರಿವರ್ತನೆ ಮಾಡುವ ಚಿಂತನೆ ನಮ್ಮೆದುರಿದೆ. ಇದು ನಮಗೆ ದೇವರು ಕೊಟ್ಟಿರುವ ವರವಲ್ಲವೇ? ಎಐ ತಂತ್ರಜ್ಞಾನದ ಮೂಲಕ ಭಾರತವು ವಿಶ್ವದಲ್ಲಿ ವಿಶ್ವನಾಯಕನಾಗಿ ಹೊರಹೊಮ್ಮುತ್ತಿದೆ. ಈ ಸಂದರ್ಭದಲ್ಲಿ ನೆನ್ನೆ ಯುವ ಕಾಂಗ್ರೆಸ್ ಕಾರ್ಯಕರ್ತರು ಇಂತಹ ಜಾಗತೀಕ ಮಟ್ಟದಲ್ಲಿ ನಡೆಯುತ್ತಿರುವ ಎಐ ಸಮಾವೇಶದ ಸ್ಥಳಕ್ಕೆ ಅರೆ ಬೆತ್ತಲೆಯಲ್ಲಿ ಹೋಗಿ ಪ್ರಧಾನಮಂತ್ರಿ ಅವರಿಗೆ ಧಿಕ್ಕಾರ ಕೂಗುವುದು, ಟ್ರಂಪ್‌ಗೆ ಧಿಕ್ಕಾರ ಕೂಗುವುದು ಸರಿಯಲ್ಲ ಎಂದು ಕಾಂಗ್ರೆಸ್ ವಿರುದ್ಧ ಕಿಡಿಕಾರಿದರು.


ಪ್ರತಿಪಕ್ಷವಾದ ಕಾಂಗ್ರೆಸ್ ಮಾಡಬೇಕಾದ ಕೆಲಸ ಯಾವುದು ಮಾಡುತ್ತಿಲ್ಲ. ಇವರು ದೇಶವಿರೋಧಿ ಚಟುವಟಿಕೆಯತ್ತ ಹೋಗುತ್ತಿದ್ದಾರೆ. ವಿಶ್ವಮಟ್ಟದಲ್ಲಿ ಎಐ ತಂತ್ರಜ್ಞಾನಕ್ಕೆ ಭಾರತದ ಕೊಡುಗೆಯನ್ನು ಪ್ರಸ್ತುತಪಡಿಸುತ್ತಿರುವ ಸಂದರ್ಭದಲ್ಲಿ ದೇಶಕ್ಕೆ ಅಪಮಾನ ಮಾಡುವ ಹಾಗೆ ಕಾಂಗ್ರೆಸ್ ವರ್ತಿಸುತ್ತಿರುವುದು ಖಂಡನೀಯ. ಆ ಪಕ್ಷದ ನಾಯಕರು ವಿದೇಶದ ವಿಶ್ವವಿದ್ಯಾಲಯಗಳಿಗೆ ಭೇಟಿ ನೀಡಿ ಭಾರತದ ವಿರುದ್ಧ ಮಾತನಾಡಿ ತಪ್ಪು ಸಂದೇಶ ನೀಡುತ್ತಾರೆ. ಇಲ್ಲಿ ಯುವ ಕಾಂಗ್ರೆಸ್‌ನವರು ಇದೇ ವರ್ತನೆ ಮಾಡಿದರೆ ಹೇಗೆ? ಇದನ್ನು ಯುವ ಭಾರತೀಯ ಜನತಾ ಪಾರ್ಟಿ ಖಂಡಿಸುತ್ತದೆ. ಇದರ ವಿರುದ್ಧ ಯುವ ಬಿಜೆಪಿ ಘಟಕವು ಕಾಂಗ್ರೆಸ್ ವಿರುದ್ಧ ನಿರಂತರ ಪ್ರತಿಭಟನೆ ಮಾಡುತ್ತೇವೆ ಎಂದು ಎಚ್ಚರಿಕೆ ನೀಡಿದರು.


ಸುದ್ದಿಗೋಷ್ಠಿಯಲ್ಲಿ ಬಿಜೆಪಿ ಜಿಲ್ಲಾಧ್ಯಕ್ಷ ಅನಂದಸ್ವಾಮಿ, ಯುವ ಮೋರ್ಚಾ ಪ್ರಧಾನ ಕಾರ್ಯದರ್ಶಿ ರಾಮು, ಕಾರ್ಯದರ್ಶಿ ಕೃಷ್ಣ, ರಾಮನಗರ ಪ್ರಾಧಿಕಾರದ ಮಾಜಿ ನಿರ್ದೇಶಕ ಕಾಳಯ್ಯ, ಯುವ ಮುಖಂಡರಾದ ಹೆಚ್.ಎಸ್.ಮಂಜುನಾಥ್, ಪ್ರತಾಪ್, ಜ್ಞಾನೇಶ್, ಸುಮಂತ್, ಚೌಕಳ್ಳಿ ಮಂಜುನಾಥ್ ಇನ್ನಿತರು ಉಪಸ್ಥಿತರಿದ್ದರು.