Home ಜಿಲ್ಲೆ ಕಲಬುರಗಿ ಶಿವಲಿಂಗ ಪೂಜೆಗೆ ಅಡ್ಡಿಪಡಿಸಿದ ಹಿಂದು ವಿರೋಧಿಗಳ ರಕ್ಷಣೆಗೆ ನಿಂತ ಕಾಂಗ್ರೆಸ್ ಸರ್ಕಾರ

ಶಿವಲಿಂಗ ಪೂಜೆಗೆ ಅಡ್ಡಿಪಡಿಸಿದ ಹಿಂದು ವಿರೋಧಿಗಳ ರಕ್ಷಣೆಗೆ ನಿಂತ ಕಾಂಗ್ರೆಸ್ ಸರ್ಕಾರ

ಕಲಬುರಗಿ,ಜೂ.1- ಜಿಲ್ಲೆಯ ಆಳಂದ ಪಟ್ಟಣದ ರಾಘವ ಚೈತನ್ಯ ಶ್ರೀಶಿವಲಿಂಗ ದೇವಸ್ಥಾನದಲ್ಲಿಮ ಶಿವಲಿಂಗ ಪೂಜೆಗೆ ಅಡ್ಡಿಪಡಿಸಿದ ಹಿಂದು ವಿರೋಧಿಗಳ ವಿರುದ್ಧದ ಪ್ರಕರಣ ವಾಪಸ ಪಡೆಯುವ ಮೂಲಕ ಹಿಂದು ವಿರೋಧಿಗಳಿಗೆ ರಕ್ಷಣೆ ನೀಡುವ ರಾಜ್ಯ ಕಾಂಗ್ರೆಸ್ ಸರ್ಕಾರದ ದೋರಣೆಯನ್ನು ಬಿಜೆಪಿ ರಾಜ್ಯಾಧ್ಯಕ್ಷ ಬಿ.ವೈ ವಿಜಯೇಂದ್ರ ಅವರು ಬಲವಾಗಿ ಖಂಡಿಸಿದರು.
ನಗರದ ಮಿನಿ ವಿಧಾನಸೌಧದ ಕಚೇರಿ ಎದುರು ಭಾರತೀಯ ಜನತಾ ಪಾರ್ಟಿ ಕಲಬುರಗಿ ಜಿಲ್ಲಾ ಘಟಕ ನೆತೃತ್ವದಲ್ಲಿ ಹಮ್ಮಿಕೊಂಡಿದ್ದ ಬೃತಹ ಪತ್ರಿಭಟನೆ ಉದ್ದೇಶಿಸಿ ಮಾತನಾಡಿದ ಅವರು, ಹಿಂದು ವಿರೋಧಿ ಪ್ರಕರಣಗಳನ್ನು ಸರ್ಕಾರ ವಾಪಸ ಪಡೆಯದೇ ಅವರ ವಿರುದ್ಧ ತ್ವರಿತ ಕಾನೂನು ಕ್ರಮ ಕೈಗೊಳ್ಳಲು ಮುಂದಾಗಬೇಕು ಎಂದು ಒತ್ತಾಯಿಸಿದರು.
ಪ್ರತಿಭಟನೆಯಲ್ಲಿ ಮಾಜಿ ಶಾಕರ ಸುಭಾಷ ಗುತ್ತೇದಾರ, ಶಶೀಲ ನಮೋಶಿ, ರಾಜುಕುಮಾರ ತೇಲ್ಕರ, ಬಿ.ಜಿ ಪಾಟೀಲ, ಅಮರನಾಥ ಪಾಟೀಲ, ಉಮೇಶ ಜಾಧವ, ಬಸವರಾಜ ಮತ್ತಿಮುಡು ಸೇರಿದಂತೆ ಪಕ್ಷದ ಧುರಿಣರು, ಮುಖಂಡರು ಮತ್ತು ಕಾರ್ಯಕರ್ತರು ಭಾಗವಹಿಸಿದ್ದರು.