ಬೆಂಗಳೂರು, ಆ.೨೦- ಅನುದಾನ ಹಂಚಿಕೆ, ಅಭಿವೃದ್ಧಿ ವಿಚಾರದಲ್ಲಿ ರಾಜ್ಯ ಸರ್ಕಾರದ ವಿರುದ್ಧ ಸ್ವಪಕ್ಷದ ಶಾಸಕರೇ ಆಕ್ರೋಶ ಹೊರಹಾಕುತ್ತಿದ್ದು, ಒಟ್ಟಾರೆ, ಸಿದ್ದರಾಮಯ್ಯ ಅವರ ಸರ್ಕಾರ ‘ಒಡೆದ ಮನೆ’ಯಾಗಿದೆ ಎಂದು ವಿಧಾನಸಭೆಯ ವಿಪಕ್ಷ ನಾಯಕ ಆರ್.ಅಶೋಕ್ ಚಾಟಿ ಬೀಸಿದರು.
ವಿಧಾನಸಭೆಯಲ್ಲಿಂದು ನಿಯಮ ೬೯ರ ಮೇರೆಗೆ ಸಾರ್ವಜನಿಕ ಮಹತ್ವದ ವಿಷಯಗಳ ಬಗ್ಗೆ ಅಲ್ಪ ಕಾಲಾವಧಿ ಚರ್ಚೆಯಲ್ಲಿ ಅನುದಾನ ಹಂಚಿಕೆ, ಅಭಿವೃದ್ಧಿಯಲ್ಲಿ ರಾಜ್ಯ ಸರ್ಕಾರ ವಿಫಲವಾಗಿದೆ ಎಂದು ಅಶೋಕ್ ಪ್ರಸ್ತಾಪಿಸಿದರು.
ಈ ಹಿಂದೆ ನಮ್ಮ ಸರ್ಕಾರ ಇದ್ದ ಸಂದರ್ಭದಲ್ಲಿ ಮಾಡಿದ್ದ ೪೦% ಆರೋಪಕ್ಕೆ ಸಾಕ್ಷಿ ಇಲ್ಲ. ಆದರೆ ಕಾಂಗ್ರೆಸ್ ಸರ್ಕಾರ ೭೦% ಕಮಿಷನ್ ಪಡೆದುಕೊಳ್ಳುತ್ತಿದೆ. ಮನೆ, ಕಟ್ಟಡ ನಿರ್ಮಾಣ ಅರ್ಜಿ ಸಲ್ಲಿಸಿದ ಆರಂಭದಲ್ಲೇ ಕಮಿಷನ್ ನೀಡುವ ವ್ಯವಸ್ಥೆ ಹುಟ್ಟುಹಾಕಿದೆ. ಜನರ ಮೇಲೆ ತೆರಿಗೆ ಭಾರ ಬೀಳುವಲ್ಲಿ ಈ ಸರ್ಕಾರ ಯಶಸ್ವಿಯಾಗಿದೆ ಎಂದು ವಾಗ್ದಾಳಿ ನಡೆಸಿದರು.
ಗ್ಯಾರಂಟಿಗಳಿಗಾಗಿ ಹಾಲು, ಮದ್ಯ, ಪೆಟ್ರೋಲ್, ಡೀಸಲ್ ಬೆಲೆ ಏರಿಕೆ ಮಾಡಿ ಜನರಿಗೆ ಸಂಕಷ್ಟವನ್ನುಂಟು ಮಾಡಿರುವ ಸರಕಾರ ರಾಜ್ಯದಲ್ಲಿ ಅಭಿವೃದ್ಧಿ ಕೆಲಸಗಳಿಗೆ ಅನುದಾನ ನೀಡುತ್ತಿಲ್ಲ ಎಂದ ಅವರು, ನಾವು ಬಂದರೆ, ಬೆಂಗಳೂರನ್ನು ಕೃಷ್ಣದೇವರಾಯ ರೀತಿ ಮಾಡುತ್ತೇವೆ.
ವಜ್ರಗಳು ರಸ್ತೆಯಲ್ಲಿ ಸಿಗುತ್ತೇವೆ ಎಂದು ಕಾಂಗ್ರೆಸ್ ನಾಯಕರು ಹೇಳಿದ್ದರು. ಆದರೆ, ಈಗ ಜಲ್ಲಿ ಕಲ್ಲುಗಳು ಸಿಗುತ್ತೇವೆ. ಜತೆಗೆ, ರಸ್ತೆಗಳ ಮೇಲೆ ಗುಂಡಿಗಳು, ಕೆಳಗಡೆ ಸುರಂಗದ ಕನಸುಗಳು-ಇದುವೇ ಕಾಂಗ್ರೆಸ್‌ನ ಬ್ರ್ಯಾಂಡ್ (ಬ್ರೋಕನ್) ಬೆಂಗಳೂರಿನ ಪರಿಕಲ್ಪನೆಯಾಗಿದೆ ಎಂದು ಕಿಡಿಕಾರಿದ್ದಾರೆ.
ನಗರದ ರಸ್ತೆಗಳಲ್ಲಿ ಎಲ್ಲೇ ನೋಡಿದರೂ ಗುಂಡಿಗಳಿದ್ದು, ಸಾವಿನ ಕೂಪವಾಗಿ ಮಾರ್ಪಟ್ಟಿದೆ. ನಿರಂತರವಾಗಿ ಸುರಿಯುತ್ತಿರುವ ಮಳೆ, ಬಿಬಿಎಂಪಿಯ ನಿರುತ್ಸಾಹ ಮತ್ತು ಕಾಂಗ್ರೆಸ್ ಆಡಳಿತದ ವೈಫಲ್ಯವನ್ನು ಇದು ತೋರಿಸುತ್ತದೆ ಎಂದು ಅಶೋಕ್ ಉಲ್ಲೇಖಿಸಿದರು.
ರಾಜ್ಯದಲ್ಲಿ ಕಾಂಗ್ರೆಸ್ ಸರ್ಕಾರ ಅಧಿಕಾರಕ್ಕೆ ಬಂದು ಎರಡು ವರ್ಷ ಮೂರು ತಿಂಗಳು ಆಗಿದೆ. ಎಷ್ಟು ಡೆಲಿವರಿ ಆಗಬೇಕಿತ್ತು. ಮೂರಾದರೂ ಡೆಲಿವರಿ ಆಗಬೇಕು ಎಂದು ವ್ಯಂಗ್ಯವಾಡಿದ ಅವರು, ನಮ್ಮ ಶಾಸಕರು ಕ್ಷೇತ್ರದಲ್ಲಿ ಮುಖ ತೋರಿಸದ ಪರಿಸ್ಥಿತಿ ಇದೆ.ಅವರ ಶಾಸಕರುಗಳಿಗೂ ಕೂಡ ಆಗುತ್ತಿಲ್ಲ.
ನನಗೂ ಫ್ರೀ, ಮಹದೇವಪ್ಪನಿಗೂ ಫ್ರೀ, ಕಾಕಾ ಪಾಟೀಲ್ ಗೂ ಫ್ರೀ ಅಂದಿದ್ದರು. ಇವಾಗ ನನಗೂ ಅನುದಾನ ಇಲ್ಲ, ಕಾಕಾ ಪಾಟೀಲ್ ಗೂ ಅನುದಾನ ಇಲ್ಲ. ಮಹದೇವಪ್ಪನಿಗೂ ಅನುದಾನ ಇಲ್ಲ
ಸಿದ್ದರಾಮಯ್ಯ ಜೀವನದಲ್ಲಿ ಕಪ್ಪು ಚುಕ್ಕೆ ಕೊಟ್ಟಿದ್ದಾರೆ. ಅದು ಅನುದಾನ ಕೊಡದೇ ಸಿಎಂ ಆರ್ಥಿಕ ಸಲಹೆಗಾರರೇ ರಾಜ್ಯದ ಅಭಿವೃದ್ಧಿ ಆಗುತ್ತಿಲ್ಲ ಎಂದಿದ್ದಾರೆ.
ರಾಜು ಕಾಗೇ ಕಳೆದ ವರ್ಷದಿಂದ ನನ್ನ ಗೋಳು ಆಲಿಸುತ್ತಿಲ್ಲ, ಹೀಗಾಗಿ ವಿಧಾನಸೌಧಕ್ಕೆ ಹೋಗಿ ಆತ್ಮಹತ್ಯೆ ಮಾಡಿಕೊಳ್ತೀನಿ ಎಂದಿದ್ದಾರೆ ಎಂದು ವಾಗ್ದಾಳಿ ನಡೆಸಿದರು.
ವಿರೋಧ ಪಕ್ಷದವರು ಆತ್ಮಹತ್ಯೆ ಮಾಡಿಕೊಳ್ಳಬೇಕು. ಆದರೆ ಆಡಳಿತ ಪಕ್ಷದ ಶಾಸಕರು ಆತ್ಮಹತ್ಯೆ ಮಾಡಿಕೊಳ್ಳುವ ಪರಿಸ್ಥಿತಿ ಬಂದಿದೆ. ಬಿ ಆರ್ ಪಾಟೀಲ್, ಕೂಡ ನಾನು ಹೇಳಿರೋದು ಸತ್ಯ ಎಂದಿದ್ದಾರೆ. ದಾವಣಗೆರೆ ಶಾಸಕ ನಾನು ತೆಂಗಿನಕಾಯಿಯನ್ನೇ ಹೊಡೆದಿಲ್ಲ ಎಂದಿದ್ದಾರೆ. ಜಿ ಪರಮೇಶ್ವರ್, ಅವರು ಸತ್ಯ ನುಡಿಯುವಂತವರು. ಅವರು ಬಾಗಲಕೋಟೆ ಬಾದಾಮಿ ಯಲ್ಲಿ ಬೆಂಕಿ ಹಾರಿಸಲು ಹೋಗಿದ್ದರು. ಆದರೆ ಅಲ್ಲಿ ಬೆಂಕಿ ಹಚ್ಚಿ ಬಂದಿದ್ದಾರೆ ಎಂದು ಅಶೋಕ್ ಹೇಳಿದರು.
ಸರ್ಕಾರಿ ಆಸ್ಪತ್ರೆ ಗೆ ಜನ ಹೋಗುತ್ತಾರೆ. ಅಲ್ಲಿ ಸಹ ೧೦೦% ತೆರಿಗೆ ಹಾಕಿದ್ದಾರೆ. ನಾನು ಜಯನಗರ ಆಸ್ಪತ್ರೆಗೆ ಹೋಗಿದ್ದೇ. ಅಲ್ಲಿ ಪ್ರತಿ ಸರಿ ಬಂದಾಗ ಬಳಕೆದಾರರು ಹಣ ಕಟ್ಟಬೇಕು ಅನ್ಯಾಯ ತಾನೆ. ಹೊರ ಒಳ ರೋಗಿಗಳಿಗೆ ಬೇರೆ ಡಬಲ್ ಮಾಡಿದ್ದಾರೆ.ಒಟ್ಟಿನಲ್ಲಿ ರೋಗಿಗಳನ್ನು ಮುಟ್ಟಿದ ಮೇಲೆ ಈ ಸರ್ಕಾರಕ್ಕೆ ರೋಗವೇ ಬರುವುದು ಎಂದು ಟೀಕಿಸಿದರು.
ಮೈಸೂರು ಮೃಗಾಲಯ ನೋಡಲು ಸಹ ೨೦% ದರ ಹೆಚ್ಚಳ. ಅದೇ ಹುಲಿ, ಅದೇ ಜಿರಾಫೆ ಬಣ್ಣ ಸುಣ್ಣ ಹೊಡೆದು ವಿದೇಶಿ ಬಟ್ಟೆ ಹಾಕಿದರೆ ಪರವಾಗಿಲ್ಲ. ಏನೂ ಇಲ್ಲದೆ ೨೦% ಹೇಗೆ ಆಗುತ್ತದೆ. ಅಲ್ಲಿಯೂ ವಸೂಲಿ ಮಾಡಬೇಕಾಅಲ್ಲಿ ಮಕ್ಕಳು ಹೋಗುತ್ತಾರೆ, ಅಲ್ಲಿ ಮಕ್ಕಳಿಗೆ ಫ್ರೀಯಾಗಿ ತೋರಿಸಬೇಕು ಎಂದು ಅಶೋಕ್ ನುಡಿದರು.




























