ಕಾಂಗ್ರೆಸನವರು ಗುಂಡಾಗಿರಿ ಮಾಡಿಲ್ಲ ನ್ಯಾಯ ಕೇಳಿದ್ದೇವೆ; ಪಾಟೀಲ್

ಚಿತ್ತಾಪುರ; ಮೇ.24:ಸಚಿವ ಪ್ರಿಯಾಂಕ್ ಖರ್ಗೆ ಅವರನ್ನು ನಾಯಿಗೆ ಹೋಲಿಸಿದ ವಿಧಾನ ಪರಿಷತ್ ವಿರೋಧ ಪಕ್ಷದ ನಾಯಕ ಛಲವಾದಿ ನಾರಾಯಣಸ್ವಾಮಿ ಅವರ ವಿರುದ್ಧ ಕಾಂಗ್ರೆಸ್ ಪಕ್ಷದ ಯುವ ಘಟಕದವರು ಪ್ರತಿಭಟನೆ ಮಾಡಿದ್ದಾರೆ ಹೊರತು ಗುಂಡಾಗಿರಿ ಮಾಡಿಲ್ಲ ಎಂದು ಕೆಪಿಸಿಸಿ ಸದಸ್ಯ ನಾಗರೆಡ್ಡಿ ಪಾಟೀಲ್ ಕರದಾಳ ಹೇಳಿದರು.
ಪಟ್ಟಣದ ಕಾಂಗ್ರೆಸ್ ಕಚೇರಿಯಲ್ಲಿ ಸುದ್ದಿಗೋಷ್ಠಿ ನಡೆಸಿ ಮಾತನಾಡಿದ ಅವರು, ವಿಧಾನ ಪರಿಷತ್ ವಿರೋಧ ಪಕ್ಷದ ನಾಯಕರಾದವರು ಸಚಿವರ ಬಗ್ಗೆ ಹಗುರವಾಗಿ ಮಾತಾಡುವುದಲ್ಲದೇ ನಾಯಿಗೆ ಹೋಲಿಸುತ್ತಾರೆ ಎಂದರೇ ನಾವುಗಳು ಕೇಳಿಕೊಂಡು ಸುಮ್ಮನೆ ಕುಡುವುದಕ್ಕಾಗುತ್ತಾ? ಅವರು ಚಿತ್ತಾಪುರ ಪ್ರವಾಸಿ ಮಂದಿರದಲ್ಲಿ ಇದ್ದಾರೆ ಅನ್ನುವ ಮಾಹಿತಿ ಬಂದ ಕೂಡಲೇ ಅವರು ನಮ್ಮ ಬಳಿ ಬಂದು ಕ್ಷಮೆ ಕೇಳಬೇಕೆಂದು ನಾವು ಪ್ರವಾಸಿ ಮಂದಿರದ ಹೊರಗಡೆ ಕುಳಿತು ಪ್ರತಿಭಟನೆ ಮಾಡಿದ್ದೇವೆ ಹೊರತು ಗುಂಡಾ ವರ್ತನೆ ಮಾಡಿಲ್ಲ ಎಂದರು.
ಬಿಜೆಪಿ ಅವರು ಪ್ರತಿಭಟನೆಯಲ್ಲಿ ಲಿಕ್ಕರ್ ಮಾಫಿಯಾದವರು, ಮರಳು ಮಾಫಿಯಾದವರು, ರೌಡಿಶಿಟರ್’ಗಳು, ಗುಂಡಾಗಳಿದ್ದರು ಎಂದು ಸುಖಾ ಸುಮ್ಮನೆ ಸುಳ್ಳು ಆರೋಪ ಮಾಡಿದ್ದಾರೆ. ಅಲ್ಲಿರುವುದು ಕಾಂಗ್ರೆಸ್ ಪಕ್ಷದವರು, ಯುವ ಮುಖಂಡರು, ಕಾರ್ಯಕರ್ತರು ಹಾಗೂ ಸಚಿವ ಪ್ರಿಯಾಂಕ್ ಖರ್ಗೆ ಅವರ ಅಭಿಮಾನಿಗಳು ಮಾತ್ರ ಇದ್ದರು ಎಂದರು.
ಅಂಬರಾಯ ಅಷ್ಟಗಿ ಅವರು ತಮ್ಮ ಪಾಡಿಗೆ ತಾವು ಬಂದು ಛಲವಾದಿ ನಾರಾಯಣ ಸ್ವಾಮಿ ಹತ್ತಿರ ಹೋಗುವುದನ್ನು ಬಿಟ್ಟು, ನಾವು ನಡೆಸುತ್ತಿರುವ ಪ್ರತಿಭಟನೆಯ ಮಧ್ಯದಲ್ಲಿ ಬಂದು ನಾಲಾಯಕ ಪ್ರಿಯಾಂಕ್ ಖರ್ಗೆ ಅವರಿಗೆ ಧಿಕ್ಕಾರ ಎಂದು ಕೋಗಿದ್ದಾರೆ. ಮೊದಲೇ ನಮ್ಮ ಕಾರ್ಯಕರ್ತರು ನಾರಾಯಣ ಸ್ವಾಮಿ ಅವರು ಕ್ಷಮೆ ಕೇಳಬೇಕೆಂದು ಪಟ್ಟು ಹಿಡಿದು ಕುಳಿತೊರುವಾಗ ಅವರು ಬಂದು ಹೀಗೆ ಅನ್ನುವುದು ಸರೀನಾ? ಹೀಗಾಗಿ ಅಲ್ಲಿದ್ದ ನಮ್ಮ ಕಾರ್ಯಕರ್ತರು ಅವರ ಜೊತೆಯಲ್ಲಿ ವಾಗ್ವಾದ ಮಾಡಿ, ತಳ್ಳಾಡಿದ್ದಾರೆ ಹೊರತು ಹಲ್ಲೆ ಮಾಡಿಲ್ಲ ಎಂದು ಸ್ಪಷ್ಟನೆ ನೀಡಿದರು.
400-500 ಜನ ಪೆÇಲೀಸರಿದ್ದು ಸಚಿವರ ಗುಲಾಮರಂತೆ ವರ್ತಿಸಿ ಸಚಿವರ ಕಾವಲುಗಾರರಾಗಿ ಕೆಲಸ ಮಾಡುತ್ತಿದ್ದಾರೆ ಎಂದು ಆರೋಪ ಮಾಡುತ್ತಾರೆ. ಒಂದು ವೆಳೆ ಆ ಜಾಗದಲ್ಲಿ ಪೆÇಲೀಸರು ಇಲ್ಲದಿದ್ದರೇ ಪರಿಸ್ಥಿತಿ ಏನಾಗುತ್ತಿತ್ತು ಎನ್ನುವುದಮ್ಮೆ ಯೋಚಿಸಿ, ಅವರು ತಮ್ಮ ಕೆಲಸವನ್ನು ಪ್ರಾಮಾಣಿಕವಾಗಿ ಮಾಡುವ ಮೂಲಕ ಅಂಬರಾಯ ಅಷ್ಟಗಿ ಅವರನ್ನು ತಹಶೀಲ್ ಕಚೇರಿ ಒಳಗೆ ಕರೆದುಕೊಂಡು ಹೋಗುವ ಮೂಲಕ ಪರಿಸ್ಥಿತಿಯನ್ನು ತಿಳಿಗೊಳಿಸಿದ್ದರು ಎಂದರು.
ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಭೀಮಣ್ಣ ಸಾಲಿ, ಜಿಪಂ ಮಾಜಿ ಸದಸ್ಯ ಶಿವರುದ್ರ ಭೀಣಿ ಮಾತನಾಡಿದರು.

ಸುದ್ದಿಗೋಷ್ಠಿಯಲ್ಲಿ ಮುಖಂಡರಾದ ಚಂದ್ರಶೇಖರ ಕಾಶಿ, ಶೀಲಾ ಕಾಶಿ, ಸೂರ್ಯಕಾಂತ ಪೂಜಾರಿ, ಓಂಕಾರೇಶ್ವರ ರೇಶ್ಮಿ, ಶೇಖ ಬಬ್ಲು, ಆರ್.ಡಿ ಪಾಟೀಲ್, ಮಲ್ಲಿನಾಥ ಭಾಗೋಡಿ, ವಿನ್ನು ಜೆ.ಡಿ, ನಾಗು ಹಲಗಿ ಸೇರಿದಂತೆ ಇತರರು ಇದ್ದರು.

ಇಡೀ ರಾಜ್ಯದಲ್ಲಿ ಸಮರ್ಥ ನಾಯಕ ಯಾರಾದರು ಇದ್ದರೇ ಅದು ಪ್ರಿಯಾಂಕ್ ಖರ್ಗೆ ಅವರು ಮಾತ್ರ. ಪ್ರಧಾನ ಮಂತ್ರಿ ನರೇಂದ್ರ ಮೋದಿ ಹಾಗೂ ರಾಜ್ಯ ನಾಯಕರ ತಪ್ಪುಗಳನ್ನು ಏಳೆ ಏಳೆಯಾಗಿ ಬಿಚ್ಚಿಡುವುದರ ಮೂಲಕ ಸಮರ್ಪಕವಾಗಿ ಉತ್ತರ ಕೊಡುವ ಕೆಲಸ ಪ್ರಾಮಾಣಿಕವಾಗಿ ಮಾಡುತ್ತಾರೆ. ಹೀಗಾಗಿ ಬಿಜೆಪಿಯವರಿಗೆ ಅದನ್ನು ಅರಗಿಸಿಕೊಳ್ಳಲು ಆಗುತ್ತಿಲ್ಲ. ಹೀಗಾಗಿ ಪ್ರಿಯಾಂಕ್ ಖರ್ಗೆ ಅವರನ್ನು ಹೇಗಾದರು ಮಾಡಿ ರಾಜಕೀಯವಾಗಿ ಗುರಿಯನ್ನಾಗಿಸಿಕೊಂಡು ತೆಜೋವಧೆ ಮಾಡುವ ಕೆಲಸ ಬಿಜೆಪಿಯವರು ಮಾಡುತ್ತಿದ್ದಾರೆ. ಇಂತಹದಕ್ಕೇಲ್ಲ ಅವರು ಜಗ್ಗಲ್ಲ ಬಗಲ್ಲ.

ಮುಕ್ತಾರ ಪಟೇಲ್ ಅಲ್ಪಸಂಖ್ಯಾತ ಘಟಕ ಅಧ್ಯಕ್ಷ.