ಅಭಿನಂದನಾ ಕಾರ್ಯಕ್ರಮ : ಪೂರ್ವ ಸಿದ್ಧತಾ ಸಭೆ

ಬೀದರ : ಅ.೬:ಅಖಿಲ ಕರ್ನಾಟಕ ಬ್ರಾಹ್ಮಣ ಮಹಾ ಸಬಾ ರಾಜ್ಯಧ್ಯಕ್ಷರಾದ ಶ್ರೀ ಎಸ್. ರಘುನಾಥ್ ಹಾಗೂ ಕರ್ನಾಟಕ ರಾಜ್ಯ ಬ್ರಾಹ್ಮಣ ಅಭಿವೃದ್ದಿ ಮಂಡಳಿ ನಿಗಮದ ಅಧ್ಯಕ್ಷರಾದ ಶ್ರೀ. ಎ. ಜಯಸಿಂಹ ಅವರ ಅಬಿನಂದನಾ ಸಮಾರಂಭವು ಅಕ್ಟೋಬರ್ ೫ರಂದು ಮದ್ಯಾಹ್ನ ೧೧ ಗಂಟೆಗೆ ಬೀದರ ನಗರದ ರಾಘವೇಂದ್ರ ಸ್ವಾಮಿ ಮಠದಲ್ಲಿ ,ಅಖಿಲ ಕರ್ನಾಟಕ ಬ್ರಾಹ್ಮಣ ಮಹಾಸಭಾ ಜಿಲ್ಲಾ ಘಟಕ ಬೀದರ ಹಾಗೂ ಸಮಸ್ತ ಬ್ರಾಹ್ಮಣ ಸಮಾಜದ ವತಿಯಿಂದ ಎರ್ಪಡಿಸಲಾಗಿದ್ದು ಅದರ ಪುರ್ವ ಬಾವಿ ಸಭೆಯನ್ನು ಸೆ. ೨೮ ರಂದು ನಗರದ ರಾಘವೇಂದ್ರ ಸ್ವಾಮಿ ಮಠದಲಿ ಜಿಲ್ಲಾಧ್ಯಕ್ಷ ವೇಂಕಟೇಶ ಕುಲಕರ್ಣಿ ಹುಮನಾಬಾದ ಹಾಗೂ ಸಮಾಜದ ಹಿರಿಯರ ನೇತ್ರೃತ್ವದಲ್ಲಿ ನಡೆಯಿತು. ಅಂದು ಅಥಿತಿಗಳನ್ನು ಬೈಕ ರ‍್ಯಾಲಿ ಮುಖಾಂತರ ಕಾರ್ಯಕ್ರಮ ಸ್ಥಳಕ್ಕೆ ತರುವ ಬಗ್ಗೆ ಚರ್ಚಿಸಲಾಯಿತು. ರಾಜ್ಯ ಅಧ್ಯಕ್ಷರ ಅಮೃತ ಹಸ್ತದಿಂದ ೆಎಕೆಬಿಎಂಸ್ ಜಿಲ್ಲಾ ಕಛೇರಿ ಉದ್ಘಾಟನೆ ಹಾಗೂ ಅಧ್ಯಕ್ಷರಿಂದ ಗುರುತಿನ ಚಿಟಿ ವಿತರಣೆ ಕಾರ್ಯಕ್ರಮ ಕೂಡಾ ನಡಯಲಿದ್ದು ಕಾರ್ಯಕ್ರಮದ ಯಶಸ್ವಿಗಾಗಿ ವಿವಿಧ ಸಮಿತಿಗಳನ್ನು ರಚಿಸಿ, ಜವಾಬ್ದಾರಿಗಳನ್ನು ನೀಡಲಾಯಿತು. ಈ ಸಭೆಯಲ್ಲಿ ಅಧ್ಯಕ್ಷ ಕುಲಕಣಿ ð ಮಾತನಾಡಿ ಕಾರ್ಯ ಕ್ರಮ ಯಶಸ್ವಿಗಾಗಿ ಎಲ್ಲರು ಕೈ ಜೋಡಿಸಬೇಕು ಅದಕ್ಕಾಗಿ ಸಮಾಜದ ಎಲ್ಲಾ ಹಿರಿಯರ, ಸಲಹೆ ಸೂಚನೆ ನೀಡಬೇಕು ಎಂದ ಅವರು ಹೆಚ್ಚಿನ ಸಂಖ್ಯೆಯಲ್ಲಿ ಸಮಾಜದ ಬಾಂಧವರು ಸೇರಿ ಕಾರ್ಯಕ್ರಮ ಯಶಸ್ವಿ ಮಾಡಲು ಸಹಕರಿಸಬೇಕೆಂದು ಮನವಿ ಮಾಡಿದರು. ಸಭೆಯಲ್ಲಿ ಭಾಗವಹಿಸಿದ ಸಮಾಜದ ಬಾಂದವರು ತಮ್ಮ ತಮ್ಮ ಅಭಿಪ್ರಾಯ ವ್ಯಕ್ತ ಪಡಿಸಿದರು. ಈ ಸಭೆಯಲ್ಲಿ . ರಾಜ್ಯ ಜಂಟಿ ಕಾರ್ಯದರ್ಶಿಯಾದ ಶ್ರೀ ರಾಜೇಶ್ ಕುಲಕರ್ಣಿ, ರಾಜ್ಯ ಸಂಘಟನಾ ಕಾರ್ಯದರ್ಶಿಯಾದ ಶ್ರೀ ಸತೀಶ್ ಕುಲಕರ್ಣಿ, ರಾಜ್ಯ ಕಾರ್ಯಕಾರಿಣಿ ಸದಸ್ಯರಾದ ಶ್ರೀ ಸುನಿಲ್ ಕುಮಾರ್ ಕುಲಕರ್ಣಿ, ಶ್ರೀ ಅರವಿಂದ ಕುಲಕರ್ಣಿ, ಮಕರಂದ ಕುಲಕರ್ಣಿ, ಜಿಲ್ಲಾ ಕಾರ್ಯದರ್ಶಿಗಳಾದ ಶ್ರೀ ರಾಮರಾವ್ ಕುಲಕರ್ಣಿ ಶೆಂಬೆಳ್ಳಿ, ಶ್ರೀ ಅನಿಲಕುಮಾರ ಮನೂರ್,ಶ್ರೀ ದಿನಕಾರರಾವ್ ಕುಲಕರ್ಣಿ, ತಾಲೂಕಾ ಅಧ್ಯಕ್ಷರಾದ ಶ್ರೀ ಭೀಮರಾವ್ ಕುಲಕರ್ಣಿ, ಶ್ರೀ ಭಾಲೂರಾವ್, ಶ್ರೀಕಾಂತ್ ಭಟ್, ಮನೋಜ್ ನಾಯಕ, ಉದಯಕುಮಾರ್ ಜೋಶಿ, ರೇಖಾ ಕುಲಕರ್ಣಿ, ಸುಧೀಂದ್ರ, ಮಾನಿಕರಾವ್, ವೆಂಕಟೇಶ್ ಕುಲಕರ್ಣಿ, ಶ್ರೀ ಪ್ರವೀಣ್ ಜೋಶಿ, ಮಹೇಶ ಪತಗಿ, ಭೀಮಸೇನರಾವ ಕನ್ನಿಹಾಳ. ಗೋಪಾಲ ಕುಲಕರ್ಣಿ ಸೇರಿದಂತೆ ವಿವಿಧ ತಾಲ್ಲಾಕಿನಂದ ಬಂದತAಹ ಸದಸ್ಯರು, ಸಮಾಜದ ಬಾಂದವರು ಉಪಸ್ಥಿತರಿದ್ದರು.