
ನವಲಗುAದನ.೩: ಮನುಷ್ಯನಿಗೆ ಹುಟ್ಟು ಸಹಜ, ಸಾವು ನಿಶ್ಚಿತ ಆದರೆ ನೌಕರರಿಗೆ ವಯೋನಿವೃತ್ತಿ ನಿಶ್ಚಿತ ಇವುಗಳ ಮಧ್ಯದಲ್ಲಿ ತಮ್ಮನ್ನು ತಾವು ಗುರುತಿಸಿಕೊಂಡು ಒಳ್ಳೆಯ ಅಧಿಕಾರಿಗಳಾಗಿ ಜನಸೇವೆ ಮಾಡುವುದರ ಮೂಲಕ ಕ್ಷೇತ್ರಶಿಕ್ಷಣಾಧಿಕಾರಿ ಶಿವಾನಂದ ಮಲ್ಲಾಡ ಅವರು ಸರ್ಕಾರದ ಸೇವೆಯನ್ನು ಸಲ್ಲಿಸಿ ತಮ್ಮ ಸೇವೆಯಲ್ಲಿ ಯಾವುದೇ ಕಪುö್ಪ ಚುಕ್ಕಿ ಇಲ್ಲದೆ ನಿವೃತ್ತಿಯಾಗಿರುವುದು ಸಂತಸದ ವಿಷಯ ಎಂದು ಶಾಸಕ ಎನ್ ಎಚ್ ಕೋನರಡ್ಡಿ ಹೇಳಿದರು.
ಅವರು ಪಟ್ಟಣದ ಶಿಕ್ಷಕರ ಕಲ್ಯಾಣಕೇಂದ್ರದಲ್ಲಿ ಕ್ಷೇತ್ರಶಿಕ್ಷಣಾಧಿಕಾರಿ ಶಿವಾನಂದ ಮಲ್ಲಾಡ ಅವರ ಸೇವಾ ನಿವೃತ್ತಿ ಅಭಿನಂದನಾ ಸಮಾರಂಭವನ್ನು ಉದ್ಘಾಟಿಸಿ ಮಾತನಾಡಿ ಯಾರಿಗೂ ಅಧಿಕಾರ ಶಾಶ್ವತವಲ್ಲ ಎಂದರು.
ಕಾರ್ಯಕ್ರಮದ ಸಾನಿಧ್ಯವನ್ನು ಮನಕವಾಡ ಗ್ರಾಮದ ಅಭಿನವ ಶ್ರೀ ಮೃತ್ಯುಂಜಯ ಮಹಾಸ್ವಾಮಿಗಳು ವಹಿಸಿದ್ದರು. ತಹಶೀಲ್ದಾರ್ ಸುಧೀರ್ ಸಾವಕಾರ, ಗಿರೀಶ ಪದಕಿ, ಎಸ್. ಎ. ಸ?ಯದ, ಎ. ಎ. ಖಾಜಿ, ಎಪ್. ಎಚ್. ಪಡ್ನೀಸ್, ಉಮೇಶ ಬೊಮ್ಮಕ್ಕನವರ, ಎಸ್. ಎಸ. ಹರ್ಲಾಪುರ, ಶ್ರೀನಿವಾಸ ಅಮಾತೆನ್ನವರ,ಎ. ಬಿ. ಕೊಪ್ಪದ, ವಿ. ಡಿ. ರಂಗಣ್ಣವರ, ಆರ್. ಎಚ್. ನೆಗಲಿ, ಗಣೇಶ ಹೊಳೆಯಣ್ಣವರ. ಎನ್ ಎಸ್ ತಾಳಿಕೋಟಿಮಠ, ಎಸ್. ಎಪ್ ನೀರಲಗಿ, ಪಿ. ಕೆ. ಹಿರೇಗೌಡ್ರ, ವಿ. ಎಂ. ಹಿರೇಮಠ, ಲಿಂಗರಾಜ. ಕಮತ, ಎ. ಆರ್. ಅಕ್ಕಿ. ಆರ್. ಎಸ್. ಪಾಟೀಲ ಇತರರು ಇದ್ದರು






























