Home ಜಿಲ್ಲೆ ಹುಬ್ಬಳ್ಳಿ ಅಭಿನಂದನಾ ಸಮಾರಂಭ

ಅಭಿನಂದನಾ ಸಮಾರಂಭ


ಚನ್ನಮ್ಮನ ಕಿತ್ತೂರು,ಫೆ.೧೨: ಸುಮಾರು ೪೦ ವರ್ಷಗಳಿಂದ ಡಿಸಿಸಿ ಬ್ಯಾಂಕ ನಿರ್ದೇಶಕರಾಗಿ ಸೇವೆಸಲ್ಲಿಸುತ್ತಿರುವ ಮಾಜಿ ಶಾಸಕ ಹಾಲಿ ನಿರ್ದೇಶಕ ಮಹಾಂತೇಶ ದೊಡ್ಡಗೌಡರ ಕೊಡುಗೆ ವಿಶಿಷ್ಟವಾಗಿದೆ ಅವರು ಸಹಕಾರಿ ಸಂಘಗಳ ಭೀಷ್ಮ ಎಂದು ಮಾಜಿ ಸಂಸದ ಹಾಗೂ ಬೆಳಗಾವಿ ಡಿಸಿಸಿ ಬ್ಯಾಂಕ ಅಧ್ಯಕ್ಷ ಅಣ್ಣಾಸಾಬ ಜೊಲ್ಲೆ ಪ್ರಶಂಸೆ ವ್ಯಕ್ತಪಡಿಸಿದರು.


ಅಭಿಮಾನಿಗಳ ಹಾಗೂ ಸಹಕಾರಿ ಮುಖಂಡರ ಇವರ ಸಂಯುಕ್ತಾಶ್ರಯದಲ್ಲಿ ಸಮೀಪದ ಗದ್ದಿಕರವಿನಕೊಪ್ಪ ಕ್ರಾಸ್ ಹತ್ತಿರ ಯಡಿಯೂರಪ್ಪ ಕಲ್ಯಾಣ ಮಂಟಪದಲ್ಲಿ ಏರ್ಪಡಿಸಿದ್ದ ಅಭಿನಂದನಾ ಸಮಾರಂಭದ ಕಾರ್ಯಕ್ರಮದಲ್ಲಿ ದೀಪ ಬೆಳಗಿಸಿ ಉದ್ಘಾಟಿಸಿ ಮಾತನಾಡಿದರು.


ಮಾಜಿ ಶಾಸಕ ಹಾಗೂ ಡಿಸಿಸಿ ಬ್ಯಾಂಕ ನಿರ್ದೇಶಕ ಮಹಾಂತೇಶ ದೊಡ್ಡಗೌಡರ ಅಧ್ಯಕ್ಷತೆವಹಿಸಿ ಮಾತನಾಡಿ ಜನರ ಪ್ರೀತಿ, ವಿಶ್ವಾಸವೇ ನನ್ನನ್ನು ಈ ಮಟ್ಟಕ್ಕೆ ಬೆಳೆಸಿದೆ ಎಂದರು.
ಬೈಲಹೊAಗಲ ಟಿಎಪಿಸಿಎಂಎಸ್ ಅಧ್ಯಕ್ಷ ಈಶ್ವರ ಉಳ್ಳಾಗಡ್ಡಿ ಮಾತನಾಡಿದರು.


ಕೆಎಲ್‌ಇ ಉಪಾಧ್ಯಕ್ಷ ಬಸವರಾಜ ತಟವಟಿ, ಕೆಎಲ್‌ಇ ನಿರ್ದೇಶಕ ವಿಜಯ ಮೆಟಗುಡ್ಡ, ಟಿಎಪಿಸಿಎಂಎಸ್ ಉಪಾಧ್ಯಕ್ಷ ಅಜ್ಜಪ್ಪ ದೊಡ್ಡಕುರಬರ, ಕಿತ್ತೂರ ಟಿಎಪಿಸಿಎಂಎಸ್ ಅಧ್ಯಕ್ಷ ಸಕ್ರಗೌಡರ ಪಾಟೀಲ, ಸರಸ್ವತಿ ಹೈಬತ್ತಿ, ಡಿಸಿಸಿ ಬ್ಯಾಂಕ ಜಿಎಂ, ಎನ್‌ಜಿ ಕಲಾವಂತ, ಡಿಜಿಎಂ ಎಸ್.ಬಿ. ಬಾಗೇವಾಡಿ, ಮಂಡಳ ಅಧ್ಯಕ್ಷ ಶ್ರೀಕರ ಕುಲಕರ್ಣಿ, ಚನ್ನಬಸಪ್ಪ ಮೊಖಾಸಿ, ನಿಜಲಿಂಗಯ್ಯಾ ಹಿರೇಮಠ, ಮಲ್ಲಿಕಾರ್ಜುನ ಉಳ್ಳಾಗಡ್ಡಿ, ಮುರಳೀಧರ ಮಲ್ಲೂರ, ಮಲ್ಲಿಕಾರ್ಜುನ ಗೂಳಪ್ಪನವರ, ನಿಂಗಪ್ಪ ಚೌಡಣ್ಣವರ, ಸೇರಿದಂತೆ ಬೈಲಹೊಂಗಲ, ಚನ್ನಮ್ಮನ ಕಿತ್ತೂರು, ಪಿಕೆಪಿಎಸ್‌ಗಳ ಅಧ್ಯಕ್ಷರು, ಆಡಳಿತ ಮಂಡಳಿ, ಕಾರ್ಯದರ್ಶಿಗಳು, ದೊಡ್ಡಗೌಡರ ಗೆಳೆಯg, ಅಭಿಮಾನಿಬಳಗ, ಪಿಕೆಪಿಎಸ್ ಸಿಬ್ಬಂದಿ ಮುದಕಪ್ಪ ತೋಟಗಿ, ವಿರುಪಾಕ್ಷ ಗಿರನ್ನವರ, ಶಿವಾನಂದ ಹನಮಸಾಗರ ನಿರೂಪಿಸಿ, ಉಪಸ್ಥಿತರಿದ್ದರು.