
ಹಾನಗಲ್,ಜೂ.೩೦: ಗಟ್ಟಿಯಾಗಿ ಜೊತೆ ನಿಂತರೆ ಬದಲಾವಣೆ ತರಲು ಸಾಧ್ಯವಿದೆ. ಮಾಡುವ ಕೆಲಸದಲ್ಲಿ ಅಡ್ಡಿ ಬರದಿದ್ದರೆ ಆಡಳಿತದಲ್ಲಿ ಸಾಕಷ್ಟು ಸುಧಾರಣೆ ಮಾಡಬಹುದಾಗಿದೆ ಎಂದು ಶಾಸಕ ಶ್ರೀನಿವಾಸ ಮಾನೆ ಹೇಳಿದರು.
ಇಲ್ಲಿನ ನೌಕರರ ಭವನದಲ್ಲಿ ನಗರ ವರ್ತಕರ ಸಂಘ ಸೇರಿದಂತೆ ನಾನಾ ಸಂಘಟನೆಗಳ ಆಶ್ರಯದಲ್ಲಿ ನಡೆದ ಶಿಗ್ಗಾಂವಿ ಕೊಲೆ ಪ್ರಕರಣದ ಆರೋಪಿಗಳ ಮೇಲೆ ಗುಂಡು ಹಾರಿಸಿದ ಹಾನಗಲ್ ಪಿಎಸ್‌ಐ ಸಂಪತ್ ಆನಿಕಿವಿ ಹಾಗೂ ಆಡೂರು ಪಿಎಸ್‌ಐ ಶರಣಪ್ಪ ಹಂಡರಗಲ್ ಅವರ ಅಭಿನಂದನಾ ಸಮಾರಂಭದಲ್ಲಿ ಭಾಗವಹಿಸಿ ಅವರು ಮಾತನಾಡಿದರು.
ಸನ್ಮಾನ ಸ್ವೀಕರಿಸಿದ ಹಾನಗಲ್ ಪಿಎಸ್‌ಐ ಸಂಪತ್ ಆನಿಕಿವಿ ಹಾಗೂ ಆಡೂರು ಪಿಎಸ್‌ಐ ಶರಣಪ್ಪ ಹಂಡರಗಲ್ ಮಾತನಾಡಿ, ಅಪರಾಧಿಗಳನ್ನು ಪತ್ತೆ ಹಚ್ಚಲು ಸಾಕಷ್ಟು ಅವಕಾಶಗಳಿವೆ. ಹೊಸ, ಹೊಸ ತಂತ್ರಜ್ಞಾನ ಬಳಕೆ ಮಾಡಿಕೊಳ್ಳಬಹುದಾಗಿದೆ. ಸಾರ್ವಜನಿಕರು ಮಾಹಿತಿ ನೀಡಿ, ಸಾಥ್ ನೀಡಿದರೆ ಇನ್ನಷ್ಟು ಪರಿಣಾಮಕಾರಿಯಾಗಿ ಅಪರಾಧ ಕೃತ್ಯ ಮಟ್ಟ ಹಾಕಬಹುದಾಗಿದೆ ಎಂದರು.