
ತಾಳಿಕೋಟೆ:ಫೆ.೧೪: ಕರ್ನಾಟಕ ರಾಜ್ಯ ಸರ್ಕಾರಿ ನೌಕರರ ಸಂಘದ ನೇತೃತ್ವದಲ್ಲಿ ಇತ್ತೀಚಗೆ ವಿಜಯಪುರ ನಗರದ ಅಂಬೇಡ್ಕರ್ ಸ್ಟೇಡಿಯಂನಲ್ಲಿ ನಡೆದ ಜಿಲ್ಲಾ ಮಟ್ಟದ ಕ್ರೀಡಾಕೂಟದಲ್ಲಿ ವಿಜೇತರಾಗಿ ರಾಜ್ಯಮಟ್ಟದ ಕ್ರೀಡಾಕೂಟಕ್ಕೆ ಆಯ್ಕೆಗೊಂಡ ಗ್ರಾಮಾಡಳಿತ ಅಧಿಕಾರಿಗಳಿಗೆ ತಾಲೂಕಾ ಗ್ರಾಮಾಡಳಿತ ಅಧಿಕಾರಿ ಸಂಘದ ವತಿಯಿಂದ ಶುಕ್ರವಾರರಂದು ಸನ್ಮಾನಿಸಿ ಗೌರವಿಸಲಾಯಿತು.
ಪಟ್ಟಣದ ತಹಶಿಲ್ದಾರ ಕಚೇರಿ ಸಭಾಭವನದಲ್ಲಿ ನಡೆದ ಸರಳ ಸಮಾರಂಭದಲ್ಲಿ ಜಿಲ್ಲಾಮಟ್ಟದ ಕ್ರೀಕೇಟ್‌ನಲ್ಲಿ ವಿಜೇತರಾಗಿ ರಾಜ್ಯಮಟ್ಟದ ಕ್ರೀಡೆಗೆ ಆಯ್ಕೆಯಾದ ಗ್ರಾಮಾಡಳಿತ ಅಧಿಕಾರಿಗಳಾದ ಶಿವಾನಂದ ಅಂಗಡಿ ಅವರಿಗೆ ಹಾಗೂ ೨೦೦ ಮೀಟರ್ ಓಟ ಮತ್ತು ಈಜು ಸ್ಪರ್ದೆಯಲ್ಲಿ ರಾಜ್ಯಮಟ್ಟಕ್ಕೆ ಆಯ್ಕೆಯಾದ ಸದಾಶಿವ ಮಾದರ, ಕ್ರೀಕೇಟ್ ೧೦೦ ಮಿಟರ್ ಓಟ, ಉದ್ದ ಜಿಗಿತದಲ್ಲಿ ರಾಜ್ಯಮಟ್ಟದ ಕ್ರೀಡಾಕೂಟಕ್ಕೆ ಆಯ್ಕೆಗೊಂಡ ಜಯರಾಮ ಚವ್ಹಾಣ ಅವರಿಗೆ ಹಾಗೂ ೧೫೦೦ ಮೀಟರ್ ಈಜು ಸ್ಪರ್ದೆಯಲ್ಲಿ ರಾಜ್ಯಮಟ್ಟಕ್ಕೆ ಆಯ್ಕೆಗೊಂಡ ಯಮನಪ್ಪ ಮಾದರ ಅವರಿಗೆ ಸನ್ಮಾನಿಸಿ ಗೌರವಿಸಲಾಯಿತು.
ಕಾರ್ಯಕ್ರಮದ ಅಧ್ಯಕ್ಷತೆಯನ್ನು ಕಂದಾಯ ನಿರೀಕ್ಷಕರಾದ ವಿನೋಧ ಸಿಂಧಗಿ ಅವರು ವಹಿಸಿದ್ದರು.
ಈ ಸಮಯದಲ್ಲಿ ಗ್ರಾಮಾಡಳಿತ ಅಧಿಕಾರಿ ಸಂಘದ ಅಧ್ಯಕ್ಷ ಶಬ್ಬೀರ ಮುಲ್ಲಾ, ಉಪಾದ್ಯಕ್ಷ ಕೀಶೋರ ಹಜೇರಿ, ಎಂ.ಬಿ.ಮಠ, ಪ್ರಕಾಶ ಹೊಸಕೆರಿ, ಪ್ರಶಾಂತ ಶಾಂತಗೇರಿ, ಢವನ ಬೆಂಕಿ, ಫಕೀರಪ್ಪ ಮಾದನವರ ಮೊದಲಾದವರು ಉಪಸ್ಥಿತರಿದ್ದರು.
ತಾಲೂಕಿನ ಗ್ರಾಮಾಡಳಿತ ಅಧಿಕಾರಿಗಳು ಕೆಲಸದ ಒತ್ತಡದ ನಡುವೆಯೂ ಜಿಲ್ಲಾಮಟ್ಟದ ವಿವಿದ ಕ್ರೀಡೆಗಳಲ್ಲಿ ಭಾಗವಹಿಸಿ ರಾಜ್ಯಮಟ್ಟದ ಕ್ರೀಡಾಕೂಟಕ್ಕೆ ಆಯ್ಕೆಯಾಗಿರುವದು ಸಂತಸ ತಂದಿದೆ ಮುಂದಿನ ರಾಜ್ಯಮಟ್ಟದ ಕ್ರೀಡೆಯಲ್ಲಿಯೂ ವಿಜಯಶಾಲಿಯಾಗಿ ಅಂತರಾಷ್ಟಿçÃಯ ಮಟ್ಟದ ಕ್ರೀಡಾಕೂಟಕ್ಕೆ ಆಯ್ಕೆಯಾಗಿ ಹೊರಹೊಮ್ಮಲಿ.
ಶ್ರೀಮತಿ ಡಾ.ವಿನಯಾ ಹೂಗಾರ
ತಾಲೂಕಾ ತಹಶಿಲ್ದಾರ



























