
ಕೆ.ಆರ್.ಪುರ, ಆ.೫-ಟೇಕ್ವಾಂಡೋ ಇಂಡಿಯಾ ಯೂತ್ ನ್ಯಾಷನಲ್ ಚಾಂಪಿಯನ್‌ಶಿಪ್ ಪ್ರಥಮ ಸ್ಥಾನ ಪಡೆದು ಚಿನ್ನದ ಪದಕವನ್ನು ಗೆದ್ದಿರುವ ನೇಹಾ ಕೆ ಅವರನ್ನು ಕ್ಷೇತ್ರದ ಚೇಳಕೆರೆ ಗ್ರಾಮದ ನಿವಾಸಿಗಳು ಅಭಿನಂದಿಸಿದರು.
ರಾಜ್ಯದ ವತಿಯಿಂದ ಒಡಿಶಾ (ಒರಿಸ್ಸಾ) ರಾಜ್ಯದ ಕಟಕ್ ಜವಾಹರಲಾಲ್ ನೆಹರು ಒಳಾಂಗಣ ಕ್ರೀಡಾಂಗಣದಲ್ಲಿ ನಡೆದ ೧ನೇ ಇಂಡಿಯಾ ಯೂತ್ ನ್ಯಾಷನಲ್ ಚಾಂಪಿಯನ್‌ಶಿಪ್ ಗಮನಾರ್ಹ ಪ್ರದರ್ಶನ ನೀಡಿದ ನೇಹಾ ಕೆ ಸೆಮಿಫೈನಲ್ ಮಹಾರಾಷ್ಟ್ರ, ಹಾಗೂ ಪೈನಲ್ ನಲ್ಲಿ ಗುಜರಾತ್ ರಾಜ್ಯದ ಸ್ಪರ್ಧಿಗಳನ್ನು ಮಣಿಸಿ ಪ್ರಥಮ ಸ್ಥಾನ ಪಡಿಯುವಲ್ಲಿ ಯಶಸ್ವಿಯಾಗಿದ್ದಾರೆ.
ಈ ಸಂದರ್ಭದಲ್ಲಿ ಮಾತನಾಡಿದ ಕೆ.ನೇಹಾ ಅವರು ಪೋಷಕರು ಹಾಗೂ ಗುರುಗಳ ಪ್ರೋತ್ಸಾಹದಿಂದ ಈ ಸಾಧನೆ ಮಾಡಿದ್ದು,ಮುಂದಿನ ದಿನಗಳಲ್ಲಿ ಭಾರತ ದೇಶವನ್ನು ಪ್ರತಿನಿಧಿಸುವುದು ನನ್ನ ಗುರಿ ಎಂದು ಹೇಳಿದರು.
ಅಭಿನಂಧಿಸಿ ಮಾತನಾಡಿದ ಮಾಸ್ಟರ್ ಕುಮಾರ್ ಅವರು ಕಠಿಣ ಪರಿಶ್ರಮ, ಸಮರ್ಪಣೆ, ಶಿಸ್ತು ಮತ್ತು ದೃಢಸಂಕಲ್ಪದಿಂದ ಕರ್ನಾಟಕಕ್ಕೆ ಕೀರ್ತಿ ತಂದುಕೊಟ್ಟಿದ್ದಾರೆ ಎಂದು ನುಡಿದರು. ಈ ಅದ್ಭುತ ಸಾಧನೆ ರಾಜ್ಯದ ಹಾಗೂ ದೇಶದ ಯುವ ಕ್ರೀಡಾಪಟುಗಳಿಗೆ ಪ್ರೇರಣೆಯಾಗಿದೆ ಎಂದು ನುಡಿದರು.
ಯಶಸ್ವಿಗೆ ಮಾಸ್ಟರ್ ಕುಮಾರ್ ಹಾಗೂ ಮಾಸ್ಟರ್ ಜೈ ಕುಮಾರ್ ಅಭಿನಂದನೆ ಸಲ್ಲಿಸಿದರು.

































