ಕೆಆರ್ ಪುರ,ಜೂ.೧೩- ಇತ್ತೀಚಿನ ದಿನಗಳಲ್ಲಿ ಹೃದಯ ಸಂಬಂಧಿರೋಗಗಳು ಹೆಚ್ಚಾಗಿದ್ದು, ೧೬ಸಾವಿರಕ್ಕೂ ಹೆಚ್ಚು ಹೃದ್ರೋಗಳಿಗೆ ಯಶಸ್ವಿ ಚಿಕಿತ್ಸೆ ನೀಡುವ ಮೂಲಕ ಸಾರ್ಥಕ ವೃತ್ತಿ ಜೀವನ ಸಾರಿದ ಹೃದಯ ರೋಗ ತಜ್ಞ ಡಾ.ದುರ್ಗಾ ಪ್ರಸಾದ್ ರೆಡ್ಡಿ ಅವರಿಗೆ ಕರ್ನಾಟಕ ರಾಜ್ಯದ ಕಿಕ್ ಬಾಕ್ಸಿಂಗ್ ಅಧ್ಯಕ್ಷರಾದ ಪುನೀತ್ ರೆಡ್ಡಿ ಹಾಗೂ ವಿನೋದ್ ರೆಡ್ಡಿ ಅವರು ಅಭಿನಂದನೆ ಸಲ್ಲಿಸಿ ಗೌರವಿಸಿದರು.
ವೈಟ್ ಫೀಲ್ಡ್ ನ ವೈದೇಹಿ ಆಸ್ಪತ್ರೆಯಲ್ಲಿ ಹಲವು ವರ್ಷಗಳಿಂದ ಕಾರ್ಯ ನಿರ್ವಹಿಸುತ್ತಿರುವ ಡಾ . ದುರ್ಗಾ ಪ್ರಸಾದ್ ರೆಡ್ಡಿ ತಮ್ಮ ಮಾನವೀಯತೆ ದೃಷ್ಟಿಯಿಂದ ಹಣಕ್ಕೆ ಮಹತ್ವ ಕೊಡದೆ ಬಡವರು ಸೇರಿದಂತೆ ಸುಮಾರು ಹೃದ್ರೋಗಗಳಿಗೆ ಸಣ್ಣ ಹಾಗೂ ಹೆಚ್ಚುವರಿ ಶಸ್ತ್ರ ಚಿಕಿತ್ಸೆ ಮಾಡುವ ಮೂಲಕ ವರದಾನ ನೀಡುತ್ತಿದ್ದಾರೆ .
ಬಡತನದಲ್ಲಿ ಬೆಳೆದು ಹಳ್ಳಿಯಿಂದ ಬಂದ ಇವರು ಒಂದಲ್ಲೊಂದು ಸಮಾಜಸೇವೆಯಲ್ಲಿ ತೊಡಗಿಸಿಕೊಂಡು ಬಡವರಿಗೆ ಮದುವೆ ಕಲ್ಯಾಣ ಮಂಟಪ ನಿರ್ಮಾಣ ಪರಿಸರ ಸಂರಕ್ಷಣೆ ಆರೋಗ್ಯ ಶಿಬಿರಗಳು ಬಡವರಿಗೆ ಉಚಿತ ಶಾಸ್ತ್ರ ಚಿಕಿತ್ಸೆಗಳನ್ನು ಸಹ ನೀಡಿದ್ದಾರೆ.
ಸರಿಸುಮಾರು ೧೬ ಸಾವಿರಕ್ಕೂ ಹೆಚ್ಚು ಹೃದಯ ಶಸ್ತ್ರಚಿಕಿತ್ಸೆಗಳು ಹಾಗೂ ೪೦ ಸಾವಿರಕ್ಕೂ ಹೆಚ್ಚು ಸಣ್ಣ ಶಸ್ತ್ರ ಚಿಕಿತ್ಸೆಗಳನ್ನು ಸಹ ಮಾಡುವ ಮೂಲಕ ಗಿನ್ನಿಸ್ ಓಲ್ಡ್ ರೆಕಾರ್ಡ್ ದಾಖಲೆ ಪಟ್ಟಿ ಹಾಗೂ ಆರ್ಯಾಭಟ ಪ್ರಶಸ್ತಿ ಸೇರಿದಂತೆ ನೂರಾರು ಪ್ರಶಸ್ತಿಗಳು ಇವರನ್ನು ಅರಸಿ ಬಂದಿವೆ, ಸಾವಿರಾರು ಸನ್ಮಾನಗಳು ಇವರನ್ನು ಕೈಬೀಸಿ ಕರೆದಿದೆ. ಪ್ರತಿಷ್ಠಿತ ಟೈಮ್ ೧೦೦ ಮ್ಯಾಜೀನ್ ನಲ್ಲೂ ಸಹ ಇವರ ಬಗ್ಗೆ ವರದಿಯಾಗಿದೆ ಎಂದು ಕರ್ನಾಟಕ ರಾಜ್ಯದ ಕಿಕ್ ಬಾಕ್ಸಿಂಗ್ ಅಧ್ಯಕ್ಷರಾದ ಪುನೀತ್ ರೆಡ್ಡಿ ಅವರು ತಿಳಿಸಿದ್ದಾರೆ.
ಇದೇ ವೇಳೆ ಮಾತನಾಡಿದ ಹೃದಯ ರೋಗ ತಜ್ಞ ಡಾ. ದುರ್ಗಾಪ್ರಸಾದ್ ರೆಡ್ಡಿ ಅವರು ಇಂದಿನ ಯುವ ಪೀಳಿಗೆಗೆ ತಮ್ಮ ಜೀವನಶೈಲಿಯನ್ನು ಬದಲಿಸಿಕೊಳ್ಳಬೇಕಾಗಿದೆ ನಿತ್ಯದ ಬದುಕಿನಲ್ಲಿ ಸಣ್ಣ ವ್ಯಾಯಾಮ ನಿತ್ಯ ಶುದ್ಧ ನೀರನ್ನು ಕುಡಿಯಬೇಕು ,ಧೂಮಪಾನ ಮದ್ಯಪಾನ ತಂಬಾಕು ಸೇರಿದಂತೆ ಇನ್ನಿತರ ದುಷ್ಟಗಳಿಗೆ ಬಲಿಯಾಗದೆ ಆರೋಗ್ಯವಂತ ಜೀವನಶೈಲಿ ರೂಡಿಸಿಕೊಳ್ಳುವಂತೆ ಸಲಹೆ ನೀಡಿದರು.
ಈ ಸಂದರ್ಭದಲ್ಲಿ ಕರ್ನಾಟಕ ರಾಜ್ಯದ ಕಿಕ್ ಬಾಕ್ಸಿಂಗ್ ಅಧ್ಯಕ್ಷರಾದ ಪುನೀತ್ ರೆಡ್ಡಿ , ವಿನೋದ್ ರೆಡ್ಡಿ, ಕಿಕ್ ಬಾಕ್ಸರ್‌ಗಳಾದ ಸಾಗರ್ ಮತ್ತು ಕುರೇಷಿ ಸೇರಿದಂತೆ ಆಸ್ಪತ್ರೆ ಸಿಬ್ಬಂದಿಗಳು ಉಪಸ್ಥಿತರಿದ್ದರು.