ಸಮ್ಮೇಳನಾಧ್ಯಕ್ಷ ಡಾ. ಮನ್ಮಥ ಡೋಳೆ ಅವರಿಗೆ ವಿವಿಧ ಸಂಘಟನೆಗಳಿAದ ಸನ್ಮಾನ

ಔರಾದ್ :ಜ.೧೫: ಪಟ್ಟಣದಲ್ಲಿ ಫೆಬ್ರವರಿ ೪ರಂದು ನಡೆಯಲಿರುವ ಏಳನೇ ಕನ್ನಡ ಸಾಹಿತ್ಯ ಪರಿಷತ್ ಸಮ್ಮೇಳನದ ಸರ್ವಾಧ್ಯಕ್ಷರಾಗಿ ಆಯ್ಕೆಯಾಗಿರುವ ಸಾಹಿತಿ, ಚಿಂತಕ ಡಾ. ಮನ್ಮಥ ಡೋಳೆ ಅವರಿಗೆ ವಿವಿಧ ಸಂಘ ಸಂಸ್ಥೆಗಳ ಪದಾಧಿಕಾರಿಗಳು ಸನ್ಮಾನಿಸಿ ಗೌರವಿಸಿದರು.
ಮಂಗಳವಾರ ಸಾವಿತ್ರಿಬಾಯಿ ಫುಲೆ ಶಿಕ್ಷಕಿಯರ ಸಂಘ, ಡಾ.ಚನ್ನಬಸವ ಪಟ್ಟದ್ದೇವರು ಪತ್ತಿನ ಸಹಕಾರ ಬ್ಯಾಂಕ್ ಆಡಳಿತ ಮಂಡಳಿ, ತಾಲೂಕು ಪತ್ರಕರ್ತರ ಸಂಘ, ದಲಿತ ಸಂಘರ್ಷ ಸಮಿತಿ, ಕನ್ನಡಪರ ಸಂಘಟನೆಗಳು, ವೀರಶೈವ ಲಿಂಗಾಯತ ಸಂಘಟನೆಗಳ ಪದಾಧಿಕಾರಿಗಳು ಸತ್ಕಾರಿಸಿ ಅಭಿನಂದನೆ ಸಲ್ಲಿಸಿದರು.
ಸನ್ಮಾನ ಸ್ವೀಕರಿಸಿ ಮಾತನಾಡಿದ ಡಾ. ಮನ್ಮಥ ಡೋಳೆ ಅವರು, ಕನ್ನಡ ಸಾಹಿತ್ಯ ಪರಿಷತ್ ಸಮ್ಮೇಳನವು ಕೇವಲ ಸಾಹಿತ್ಯಿಕ ವೇದಿಕೆಯಾಗದೆ, ಸಮಾಜ ಪರಿವರ್ತನೆಯ ಚಿಂತನೆಗಳನ್ನು ಜನಸಾಮಾನ್ಯರ ನಡುವೆ ತಲುಪಿಸುವ ಮಹತ್ವದ ವೇದಿಕೆಯಾಗಬೇಕು ಎಂದರು. ಬಸವಣ್ಣನವರ ಸಮಾನತೆ, ಮಾನವೀಯತೆ ಮತ್ತು ಶರಣ ಸಂಸ್ಕೃತಿಯ ಮೌಲ್ಯಗಳನ್ನು ಇಂದಿನ ಪೀಳಿಗೆಗೆ ತಲುಪಿಸುವ ಅಗತ್ಯವಿದೆ ಎಂದು ಅವರು ಹೇಳಿದರು. ಔರಾದ್‌ನಲ್ಲಿ ನಡೆಯಲಿರುವ ಸಮ್ಮೇಳನವನ್ನು ಅರ್ಥಪೂರ್ಣವಾಗಿ, ಜನಪರವಾಗಿ ನಡೆಸುವ ಸಂಕಲ್ಪವಿದೆ ಎಂದರು.
ಈ ಸಂಧರ್ಭದಲ್ಲಿ ಸಮಾಜದ ಹಿರಿಯ ಮುಖಂಡರಾದ ರವಿಂದ್ರ ಮೀಸೆ, ಬಂಡೆಪ್ಪ ಕಂಟೆ, ಡಾ.ಸಂಜೀವಕುಮಾರ ಜುಮ್ಮಾ, ಚಂದ್ರಕಾAತ ನಿರ್ಮಳೆ, ಶಿವಶರಣಪ್ಪ ವಲ್ಲೇಪೂರೆ, ಧನರಾಜ ನಿಟ್ಟೂರೆ, ಶಿವಾನಂದ ಮೊಕ್ತೆದಾರ್, ಶರಣಪ್ಪ ಚಿಟಮೇ, ಶಾಂತಮ್ಮ, ಮೀನಾಕುಮಾರಿ, ಕಾವೇರಿ ಸ್ವಾಮಿ, ಶ್ರೀದೇವಿ ಕೊಟಗ್ಯಾಳೆ, ರೇಖಾ ಕೋಟೆ, ರಾಜೇಶ್ವರಿ ಡೋಂಗ್ರೆ, ಲತಾದೇವಿ ಕೋಕನೆ, ಸುಮಾ, ಸಂಗೀತಾ ರೆಡ್ಡಿ, ಬಂಡೆಪ್ಪ ದ್ಯಾಡೆ, ರಜನಿಕಾಂತ್ ಮಲಗೆ, ಸತೀಶ್ ಗಂದಿಗಡೆ, ನಾಗನಾಥ ಪಾಟೀಲ್, ಬಂಡೆಪ್ಪ ಡ್ಯಾಡೆ, ಶ್ರೀಕಾಂತ ಸ್ವಾಮಿ, ಸತೀಶ ಮೂಲಗೆ, ನೀಲಕಂಠ ಬಾವಗೆ, ಶರಣಪ್ಪ ನೌಬಾದೆ, ನಾಗನಾಥ ಶಂಕು, ಅಮರ ನಿಸ್ಪತೆ, ಸಂಜೀವ ವಲಾಂಡೆ, ಬಾಲಾಜಿ ವಲ್ಲೂರೆ, ಸಾಹಿತಿಗಳು, ಶಿಕ್ಷಕರು, ಕನ್ನಡ ಪರ ಹೋರಾಟಗಾರರು ಉಪಸ್ಥಿತರಿದ್ದರು.