Home ಜಿಲ್ಲೆ ಕಾನೂನು ಚೌಕಟ್ಟಿನಡಿ ಮೇಯರ್-ಉಪ ಮೆಯರ್ ಚುನಾವಣೆ ನಡೆಸಿ: ಕೆಂಪೆನೋರ್

ಕಾನೂನು ಚೌಕಟ್ಟಿನಡಿ ಮೇಯರ್-ಉಪ ಮೆಯರ್ ಚುನಾವಣೆ ನಡೆಸಿ: ಕೆಂಪೆನೋರ್

ಬೀದರ್:ಏ.3: ಕಾನೂನು ಚೌಕಟ್ಟಿನಡಿ ಮೇಯರ್ ಹಾಗೂ ಉಪ ಮೆಯರ್ ಚುನಾವಣೆ ನಡೆಸಿ ಇಲ್ಲವಾದರೆ ನ್ಯಾಯಾಲಯದ ಮೊರೆ ಹೋಗುತ್ತೇವೆಂದು ಕಲ್ಯಾಣ ಕರ್ನಾಟಕ ನಿರ್ಮಾಣ ಸೇನೆ ಸಂಸ್ಥಾಪಕ ಅಧ್ಯಕ್ಷರಾದ ಸ್ವಾಮಿದಾಸ ಕೆಂಪೆನೋರ್ ಎಚ್ಚರಿಸಿದ್ದಾರೆ.
ಬುಧವಾರ ನಗರದ ಜಿಲ್ಲಾ ಪತ್ರಿಕಾ ಭವನದಲ್ಲಿ ಪತ್ರಿಕಾಗೋಷ್ಟಿ ಉದ್ದೇಸಿಸಿ ಮಾತನಾಡಿರುವ ಅವರು, ಮೇಯರ್ ಹಾಗೂ ಉಪ ಮೆಯರ್ ಇವರನ್ನು ಆಯ್ಕೆ ಮಾಡಲು ಕಾಪೆರ್Çೀರೆಟರ್‍ಗಳೆ ಬೇಕು ಹೊರತು ನಗರ ಸಭೆ ಸದಸ್ಯರಲ್ಲ. ಈಗಿರುವವರು ನಗರ ಸಭೆ ಸದಸ್ಯರು. ಇವರು ಮೆಯರ್ ಹಾಗೂ ಉಪ ಮೆಯರ್‍ರನ್ನು ಆಯ್ಕೆ ಮಾಡಲು ಸಾಧ್ಯವಿಲ್ಲ. ಇದು ಸ್ಥಳಿಯ ಸಂಸ್ಥೆಗಳ ಕಾಯ್ದೆಯ ಸ್ಪಷ್ಟ ಉಲ್ಲಂಘನೆಯಾಗಿದೆ. ಈ ವಿಚಾರವಾಗಿ ಇಲ್ಲಿಯ ಜಿಲ್ಲಾ ಉಸ್ತುವಾರಿ ಸಚಿವ ಈಶ್ವರ್ ಖಂಡ್ರೆ, ಪೌರಾಡಳಿತ ಸಚಿವ ರಹಿಮ್ ಖಾನ್, ನಗರಾಭಿವೃದ್ಧಿ ಸಚಿವ ಭೇರತಿ ಸುರೇಶ ಈ ಬಗ್ಗೆ ಸಾರ್ವಜನಿಕರಿಗೆ ಸ್ಪಷ್ಟಿಕರಣ ಕೊಡಬೇಕು ಎಂದು ಆಗ್ರಹಿಸಿದರು.
ಈಲ್ಲಾ ಪಂಚಾಯತ, ತಾಲೂಕು ಪಂಚಾಯತ ಚುನಾವಣೆಗಳು ನಡೆದು ಎಳೆಂಟು ವರ್ಷಗಳೆ ಕಳೆದು ಹೋಗಿವೆ. ಇತ್ತಿಚೀಗೆ ಗ್ರಾಮ ಪಂಚಾಯತ ಅಧ್ಯಕ್ಷ-ಉಪಾಧ್ಯಕ್ಷರು ಹಾಗೂ ಸದಸ್ಯರ ಅಧಿಕಾರ ಅವಧಿ ಮುಗಿದು, ಅಲ್ಲಿ ನೋಡಲ್ ಅಧಿಕಾರಿಗಳು, ಅಡಳಿತಾಧಿಕಾರಿಗಳು ಕಾರ್ಯ ನಿರ್ವಹಿಸುತ್ತಿರುವಾಗ ಬೀದರ್ ಮಹಾನಗರ ಪಾಲಿಕೆಗೆ ಈ ರೀತಿ ಅನಧಿಕೃಯ ಮಾನದಂಡವೇಕೆ? ಎಂದು ಪ್ರಶ್ನೆ ಮಾಡಿದರು.
ಬೀದರ್ ನಗರ ಸಭೆ ಮಹಾನಗರ ಪಾಲಿಕೆಯಾಗಿರುವುದು ಸಂತೋಷ. ಆದರೆ ನಿಯಮ ಗಾಳಿಗೆ ತೂರಿ ಈ ತಿಂಗಳು 10ರಂದು ಮೆಯರ್, ಉಪ ಮೆಯರ್ ಚುನಾವಣೆ ನಡೆಸಲು ಮುಂದಾಗಿರುವುದು. ಮುರ್ಖತನದ ಪರಮಾವಧಿ. ಈ ವಿಚಾರ ಕೈ ಬಿಟ್ಟು ಉಳಿದ ಅವಧಿಗಾಗಿ ನಗರ ಸಭೆಯ ಅಧ್ಯಕ್ಷ, ಉಪಾಧ್ಯಕ್ಷರನ್ನೇ ಆಯ್ಕೆ ಮಾಡಿ ಸಮಾಜಕ್ಕೆ ಒಳ್ಳೆಯ ಸಂದೇಶ ರವಾನಿಸುವಂತಾಗಲಿ ಎಂದು ಕೆಂಪೆನೋರ್ ಅಭಿಪ್ರಾಯ ಪಟ್ಟಿರುವರು.
ಕಲ್ಯಾಣ ಕರ್ನಾಟಕ ನಿರ್ಮಾಣ ಸೇನೆಯ ಜಿಲ್ಲಾಧ್ಯಕ್ಷ ಡಾ.ಜೇಮ್ಸ್, ಪದಾಧಿಕಾರಿಗಳಾದ ಸೂರಜ್ ನೆಲವಾಳಕರ್, ವಿಲ್ಸನ್ ಕುಡ್ತೆನೊರ್, ಅಂಬಣ್ಣ ಬೇಲೂರ್, ವೆಂಕಟರಾವ ಪಾಟೀಲ, ಘಾಳೆಪ್ಪ ಹಂತಿ, ಸುನೀಲ ವಾಟರಕರ್ ಹಾಗೂ ಇತರರು ಪತ್ರಿಕಾಗೋಷ್ಟಿಯಲ್ಲಿದ್ದರು.