
ಬಾಗಲಕೋಟೆ, ಫೆ.4 : ಅನುಮಾನಾಸ್ಪದಗಳಿಗೆ ಅವಕಾಶ ನೀಡದೇ ಪಾರದರ್ಶಕ ಹಾಗೂ ನಿಷಪಕ್ಷವಾಗಿ ಮುಂಬರುವ ಬಾಗಲಕೋಟ ಮತಕ್ಷೇತ್ರದ ಉಪಚುನಾಣೆಯನ್ನು ನಡೆಸುವ ಕಾರ್ಯವಾಗಬೇಕು ಎಂದು 24-ಬಾಗಲಕೋಟ ವಿಧಾನಸಭೆ ಉಪಚುನಾವಣೆ 2026 ಸಂಬಂದ ರೋಲ್ ಅಬ್ ಸರ್ವರ್ ಆಗಿರುವ ರಾಮಪ್ರಶಾಂತ ಮನೋಹರ ಸೂಚಿಸಿದರು.
ಜಿಲ್ಲಾಧಿಕಾರಿ ಕಚೇರಿ ಸಭಾಂಗಣದಲ್ಲಿ ಬಾಗಲಕೋಟೆ ವಿಧಾನಸಭೆ ಉಪ ಚುನಾವಣೆ ಸಂಬಂಧಿಸಿದಂತೆ ಮತದಾರರ ಪಟ್ಟಿ ವಿಶೇಷ ಪರೀಸ್ಕರಣೆಗೆ ಸಂಬಂಧಪಟ್ಟಂತೆ ಪೂರ್ವ ಸಿದ್ದತೆ ಕುರಿತು ವಿವಿಧ ರಾಜಕೀಯ ಪಕ್ಷಗಳ ಪ್ರತಿನಿಧಿಗಳೊಂದಿಗೆ ಜರುಗಿದ ಸಭೆಯ ಅಧ್ಯಕ್ಷತೆ ವಹಿಸಿ ಮಾತನಾಡಿದ ಅವರು, ಯಾವುದೇ ಚುನಾವಣೆ ನಡೆದರೂ ಸಹ ಚುನಾವಣಾ ಪ್ರಕ್ರೀಯೆಗಳನ್ನು ಜಾಗೃತೆಯಿಂದ ನಿರ್ವಹಿಸಬೇಕಾಗುತ್ತದೆ. ಮತದಾರರ ಪಟ್ಟಿಯನ್ನು ತಯಾರಿಸುವದರಿಂದಲೇ ಚುನಾವಣಾ ಪ್ರಕ್ರೀಯೆ ಪ್ರಾರಂಭವಾದಂತೆ. ಪ್ರಾರಂಭದಲ್ಲಿಯೇ ಲೋಪದೋಷಗಳಿದಲ್ಲಿ ರಾಜಕೀಯ ಪಕ್ಷಗಳು ಗಮನಕ್ಕೆ ತರುವ ಕೆಲಸ ಮಾಡಿದಲ್ಲಿ ಅಂತಹ ದೋಷಗಳನ್ನು ಸರಿಪಡಿಸಿ ಚುನಾವಣೆಯನ್ನು ಸುಗಮವಾಗಿ ಮುಗಿಸಲು ಸಾಧ್ಯವಾಗುತ್ತದೆ. ಅಂತಹ ಯಾವುಧೆ ಲೋಪಗಳಿದ್ದಲ್ಲಿ ತಕ್ಷಣ ಸೂಚಿಸುವ ಕಾರ್ಯಮಾಡಿರಿ ಎಂದರು
2026 ಜನೇವರಿ 3 ರಿಂದ 31 ರವೆರೆಗೆ ಫಾರಮ್6 ಸಂಂಬಂದಿಸಿದಂತೆ, 4703, ಫಾರಮ್7 ರಡಿ 1821, ಫಾರಮ್ 8 ರ ತಿದ್ದುಪಡಿಗೆ ಸಂಬಂಧಿಸಿದಂತೆ 5700 ಹಾಗೂ ಫಾರಮ್ 8 ರಡಿಯ ವರ್ಗಾವಣೆಗೆ ಸಂಬಂದಿಸಿದಂತೆ 313 ಸೇರಿ ಒಟ್ಟಾರೆಯಾಗಿ 12537 ಫಾರಮ್‍ಗಳು ಸ್ವೀಕೃತವಾಗಿರುತ್ತವೆ. ಮತದಾರರ ಪಟ್ಟಿಗೆ ಸಂಬಂಧಿಸಿದ ಹಕ್ಕು ಮತ್ತು ಆಕ್ಷೇಪಣೆಗಳನ್ನು ವಿಲೇವಾರಿ ಮಾಡಲು ಫೆ 7 ರವರೆಗೆ ಕಾಲಾವಕಾಶವಿದೆ. ಈಗಾಗಲೇ ಬಿಎಲ್‍ಓ ಗಳಿಗೆ ತರಬೇತಿ ನೀಡಲಾಗಿದ್ದು, . ಎಲ್ಲವೂ ಅಚ್ಚುಕಟ್ಟಾಗಿ ನಡೆಯುತ್ತಿದೆ. ಫಾರ್ಮ 6 ಮತ್ತು 7 ಕ್ಕೆ ಸಂಬಂದಿಸಿದ ಆಕ್ಷೇಪಣೆಗಳೆನಾದರೂ ಅಥವಾ ಬೇರೆ ಮತಕ್ಷೇತ್ರದವರು ಇಲ್ಲಿಗೆ ಬರುವ ಸಂಭವನಿಯತೆ ಇದ್ದಲ್ಲಿ ರಾಜಕೀಯ ಪಕ್ಷಗಳು ತಿಳಿಸಬೇಕು, ಎಲ್ಲವನ್ನೂ ಸರಿಪಡಿಸಿ ಫೆ. 14 ರಂದು ಅಂತಿಮ ಮತದಾರರ ಪಟ್ಟಿಯನ್ನು ಪ್ರಕಟಿಸಲಾಗುವುದು. ಈ ಸಂಧರ್ಭದಲ್ಲಿ ಎಲ್ಲರಾಜಕೀಯ ಪಕ್ಷಗಳ ಮುಖಂಡರು, ಪ್ರತಿನಿಧಿಗಳ ಸಹಕಾರ ಮುಖ್ಯವಾಗಿದ್ದು ಎಲ್ಲರೂ ಸಹಕರಿಸಬೇಕು ಎಂದು ಕೋರಿದರು.
ಸಭೆಯಲ್ಲಿ ಜಿಲ್ಲಾಧಿಕಾರಿ ಸಂಗಪ್ಪ, ಅಪರ ಜಿಲ್ಲಾಧಿಕಾರಿ ಅಶೋಕ ತೇಲಿ, ಬಾಗಲಕೋಟ ಉಪವಿಭಾಗಾಧಿಕಾರಿ ಸಂತೋಷ ಜಗಲಾಸರ, ತಹಶೀಲ್ದಾರ ವಾಸುದೇವ ಸ್ವಾಮಿ ಹಾಗೂ ವಿವಿಧ ರಾಜಕೀಯ ಪಕ್ಷಗಳ ಪ್ರತಿನಿಧಿಗಳು ಉಪಸ್ಥಿತೆರಿದ್ದರು.























