ಕಾಂಗ್ರೆಸ್ ನಾಯಕ ಮೇಟಿ ನಿಧನಕ್ಕೆ ಸಂತಾಪ

ವಿಜಯಪುರ ನ. 5: ಶಾಸಕ, ಮಾಜಿ ಸಚಿವ ಹೆಚ್.ವೈ. ಮೇಟಿ ಅವರ ಅಕಾಲಿಕ ನಿಧನಕ್ಕೆ ಮಂಗಳವಾರ ಸಂಜೆ ಸಾಯಂಕಾಲ 5 ಗಂಟೆಗೆ ವಿಜಯಪುರ ನಗರದ ಪಿಡಿಜೆ ಹೈಸ್ಕೂಲ್ ಹಿಂದಿನ ಖಾದಿ ಗ್ರಾಮೋದ್ಯೋಗ ವೃತ್ತದಲ್ಲಿ ಇರುವ ವಿಜಯಪುರ ನಗರದ ಕಾಂಗ್ರೆಸ್ ಮುಖಂಡ ಅಬ್ದುಲ್ ಹಮೀದ್ ಮುಶ್ರೀಫ್ ಅವರ ಕಾರ್ಯಾಲಯದಲ್ಲಿ ಭಾವಪೂರ್ಣ ಶೃದ್ಧಾಂಜಲಿ ಸಭೆ ನಡೆಯಿತು.
ಮೃತರ ಭಾವಚಿತ್ರಕ್ಕೆ ಪುಷ್ಪಾರ್ಚನೆ ಮಾಡಿ ಅವರ ಆತ್ಮಕ್ಕೆ ಶಾಂತಿ ಕೋರಲಾಯಿತು. ಈ ಸಂದರ್ಭದಲ್ಲಿ ಮಾತನಾಡಿದ ಕಾಂಗ್ರೆಸ್ ಮುಖಂಡ ಅಬ್ದುಲ್ ಹಮೀದ್ ಮುಶ್ರೀಫ್, ದಿವಂಗತ ಹೆಚ್.ವೈ.ಮೇಟಿ ಅವರು ಐದು ಬಾರಿ ಶಾಸಕರಾಗಿ ಎರಡು ಬಾರಿ ಸಚಿವರಾಗಿ ಒಂದು ಬಾರಿ ಲೋಕಸಭೆ ಸದಸ್ಯರಾಗಿ ಜನಸೇವೆ ಮಾಡಿ ಜನಮಾನಸದಲ್ಲಿ ಸದಾಕಾಲ ಉಳಿಯುವ ಧೀಮಂತ ನಾಯಕರಾಗಿದ್ದರು.
ಇಂದು ನಾವು ಅವರನ್ನು ಕಳೆದುಕೊಂಡಿದ್ದು ನಮಗೆ ಹಾಗೂ ಪಕ್ಷಕ್ಕೆ ಭರಿಸಲಾಗದ ನಷ್ಟವಾಗಿದೆ. ಅವರು ಹಾಕಿ ಕೊಟ್ಟ ಮಾರ್ಗದಲ್ಲಿ ನಡೆದು ಅವರಿಗೆ ನಿಜವಾದ ಶೃದ್ಧಾಂಜಲಿ ಸಲ್ಲಿಸಿದಂತಾಗುತ್ತದೆ. ದೇವರು ಅವರ ಆತ್ಮಕ್ಕೆ ಶಾಂತಿ ನೀಡಲಿ ಹಾಗೂ ಅವರ ಕುಟುಂಬಕ್ಕೆ ಶಕ್ತಿ ನೀಡಲಿ ಎಂದು ಹಾರೈಸಿದರು. ಈ ಸಭೆಯಲ್ಲಿ ವೈಜನಾಥ ಕರ್ಪೂರಮಠ, ಸೋಮನಾಥ ಕಳ್ಳಿಮನಿ, ಗಂಗಾಧರ ಸಂಬಣ್ಣಿ, ಹೊನಮಲ್ಲ ಸಾರವಾಡ, ಶಬ್ಬೀರ ಜಾಗೀರದಾರ, ಫಯಾಜ್ ಕಲಾದಗಿ, ಶಫೀಕ ಬಗದಾದಿ, ಪರಶುರಾಮ ಹೊಸಮನಿ, ಆರತಿ ಶಹಾಪೂರ, ಅಶ್ಪಾಕ ಮನಗೂಳಿ,ರೂಬಿನಾ ಹಳ್ಳೂರ, ಆಸಮಾ ಕಾಲೇಬಾಗ, ಭಾರತಿ ನಾವಿ, ಅವಿನಾಶ ಹೇರಲಗಿ,ಇಜಾಜ್ ಮುಕಬಿಲ,ವಸೀಮ ಹತ್ತರಕಿಹಾಳ, ಸಲೀಂ ಕಲಾದಗಿ, ಶಮೀಮ್ ಅಕ್ಕಲಕೋಟ, ಸವಿತಾ ಧನರಾಜ್, ಗೀರಿಶ ಇಟ್ಟಂಗಿ, ಹರೀಶ ಕವಲಗಿ,ವಿರೇಶ ಕಲಾಲ, ಪ್ರವೀಣ ಚೌರ,ಆನಂದ ಜಾಧವ್,ಸುಂದರಪಾಲ ರಾಠೋಡ,ಕಲ್ಲಪ್ಪ ಪಾರಶೆಟ್ಟಿ,ಅಶೋಕ ಭಜಂತ್ರಿ, ಅಶೋಕಗೌಡ ಮುಂತಾದವರು ಉಪಸ್ಥಿತರಿದ್ದರು.