ಹಿಂದೂಗಳ ಕೊಲೆ ಖಂಡನೆ

ಜೇವರ್ಗಿ :ಡಿ.25:ಬಾಂಗ್ಲಾದೇಶದಲ್ಲಿ ಅಮಾಯಕ ಹಿಂದೂ ಯುವಕನೊಬ್ಬನನ್ನುಮರಕ್ಕೆ ಜೀವಂತವಾಗಿ ನೇತುಹಾಕಿ ಗಲ್ಲಿಗೇರಿಸಿರುವುದು ಕೇವಲ ಒಬ್ಬ ವ್ಯಕ್ತಿಯ ಕೊಲೆಯಲ್ಲ ಬದಲಾಗಿ ಮಾನವಿಯತೆ ಧಾರ್ಮಿಕ ಸ್ವಾತಂತ್ರ್ಯ ಮತ್ತು ನಾಗರಿಕತೆಯ ಮೇಲಿನ ನೇರ ದಾಳಿಯಾಗಿದೆ ಈ ಅಮಾನವೀಯ ಕೃತ್ಯವನ್ನು ಬಜರಂಗದಳ ಪ್ರಾಂತ. ಸಂಯೋಜಕ ಬಸವರಾಜ ಸುಗೂರ ಉಗ್ರ ವಾಗಿ ಖಂಡಿಸುತ್ತದೆ ಎಂದು ಹೇಳಿದರು
ನಂತರ ಬಾಗೇಶ್ ಹೋತಿನಮಡು ಮಾತನಾಡಿ ದವರುಬಜರಂಗದಳ ರಾಷ್ಟ್ರಾದ್ಯಂತ ಜನಾಕ್ರೋಶ ಪ್ರತಿಭಟನೆ ನಡೆಸಿದೆ. ವಿಶ್ವದ ಎಲ್ಲಾ ದೇಶಗಳು ಈ ಕೃತ್ಯವನ್ನು ಖಂಡಿಸುತ್ತವೆ ಭಾರತದಲ್ಲಿ ನೆಲೆಸಿದ ಅಕ್ರಮ ಬಾಂಗ್ಲಾದೇಶದ ಜಿಹಾದಿಗಳಿಗೆ ಕೂಡಲೇ ಗಡಿಪಾರು ಮಾಡಬೇಕು.ಕೂಡಲೇ ಕೇಂದ್ರ ಸರ್ಕಾರ ರಾಷ್ಟ್ರದ ಎಲ್ಲಾ ರಾಯಭಾರಿಗಳು ಹಿಂದುಗಳ ರಕ್ಷಣೆಗೆ ನಿಲ್ಲಬೇಕೆಂದು ಆಗ್ರಹ ಪಡಿಸಬೇಕು.
•ಬಾಂಗ್ಲಾದೇಶದಲ್ಲಿ ನೆಲೆಸಿದ ಹಿಂದುಗಳ ಬೆಂಬಲಕ್ಕೆ ವಿಶ್ವ ಹಿಂದೂ ಪರಿಷತ್ ಬಜರಂಗದಳ ಮುಖಂಡರಾದ ಹಿರೇಗೌಡ, ವೀರೇಶ್ ಬಡಿಗೇರ್ ಈಶ್ವರ್ ಹಿಪ್ಪರಗಿ, ಸಾಹೇಬ್ ಗೌಡ ಕಡ್ಲಿ, ಆನಂದ್ ಕಲ್ಲಾ, ಪಿಂಟು ಮಲ್ಲಾಬಾದ್ ,ಗಂಗಾರಾಮ್ ತಳವಾರ, ಮರೇಪ್ಪ ಕೋಳಕೂರ, ವಿಶ್ವನಾಥ್ ಬಡಿಗೇರ್, ವಸಂತ,ಪ್ರಶಾಂತ್ ಪಂಡಿತ್, ಮೌನೇಶ್ ಬಡಿಗೇರ್ ,ನಾಗಶೆಟ್ಟಿ ಅಳೋಳ್ಳಿ, ಸಚಿನ್ ಕುಮಾರ, ಷಣ್ಮುಖ ಹೂಗಾರ ಬಜರಂಗದಳ ಕಾರ್ಯಕರ್ತರ ಭಾಗವಹಿಸಿದರು.