
ಕಾಳಗಿ :ಜೂ.೧: ‘ ಕನ್ನಡ ಭಾಷೆ ಹುಟ್ಟಿದ್ದು ತಮಿಳಿನಿಂದ ಎಂಬ ನಟ ಕಮಲಹಾಸನ್ ಹೇಳಿಕೆ ಅತಂತ್ಯ ಖಂಡನೀಯ ‘ ಎಂದು ಯುವ ಕರ್ನಾಟಕ ರಕ್ಷಣಾ ಸೇನೆ ಗೌರವಾಧ್ಯಕ್ಷ ಪರಮೇಶ್ವರ ಕಟ್ಟಿಮನಿ ಆಕ್ರೋಶ ವ್ಯಕ್ತಪಡಿಸಿದ್ದಾರೆ.
ಶನಿವಾರ ಈ ಕುರಿತು ಹೇಳಿಕೆ ನೀಡಿದ ಅವರು ‘ ಒಬ್ಬ ಸ್ಟಾರ್ ನಟನಾಗಿ ಬೆಳೆಯುವುದಕ್ಕೆ ಕೇವಲ ಒಂದು ಭಾಷೆ ಕಾರಣವಾಗುವುದಿಲ್ಲ ಎಂಬುದನ್ನು ಕಮಲಹಾಸನ್ ಮನದಟ್ಟು ಮಾಡಿಕೊಳ್ಳಬೇಕು. ಕನ್ನಡ ಭಾಷೆಯ ಗಂಧಗಾಳಿ ಗೊತ್ತಿಲ್ಲದ ಒಬ್ಬ ತಮಿಳುನಟನ ಈ ಹೇಳಿಕೆ ಇಡೀ ಕನ್ನಡಿಗರಿಗೆ ತೀವ್ರ ನೋವುಂಟು ಮಾಡಿದೆ ‘ ಎಂದಿದ್ದಾರೆ.
ನಮ್ಮ ಕನ್ನಡಕ್ಕೆ ಸಾವಿರಾರು ವರ್ಷಗಳ ಇತಿಹಾಸವಿದೆ. ಈ ರೀತಿ ಕನ್ನಡದ ಬಗ್ಗೆ ಮಾತನಾಡಿ ಕನ್ನಡಕ್ಕೆ ಮತ್ತು ಕನ್ನಡಿಗರಿಗೆ ದ್ರೋಹವೇಸಗಿರುವುದರಿಂದ ಮೊದಲು ಕನ್ನಡಿಗರ ಕ್ಷಮೆ ಕೇಳಬೇಕು. ಇಲ್ಲದಿದ್ದಲ್ಲಿ ರಾಜ್ಯದಲ್ಲಿ ಕಮಲ್ ಹಾಸನ್ ನ ಥಗ್ ಲೈಫ್ ಚಿತ್ರವನ್ನು ಬಿಡುಗಡೆ ಮಾಡಲು ರಾಜ್ಯ ಸರಕಾರ ಅವಕಾಶ ಕೊಡಬಾರದು. ಮತ್ತು ಕಮಲ್ ಹಾಸನ್ ನ ಎಲ್ಲ ಚಿತ್ರಗಳನ್ನು ಕರ್ನಾಟಕದಲ್ಲಿ ಬ್ಯಾನ್ ಮಾಡಬೇಕು ಎಂದರು.