
ಕುಣಿಗಲ್, ಮೇ ೨೪- ಗೃಹ ಸಚಿವ ಡಾ. ಜಿ ಪರಮೇಶ್ವರ್ ಅವರ ಶ್ರೀ ಸಿದ್ದಾರ್ಥ ಶಿಕ್ಷಣ ಸಂಸ್ಥೆ ಮೇಲೆ ಕೇಂದ್ರ ಸರ್ಕಾರದ ಇಡಿ ಐಟಿ ದಾಳಿ ನಡೆಸಿರುವ ಕ್ರಮವನ್ನು ಅಖಿಲ ಕರ್ನಾಟಕ ಡಾ.ಜಿ. ಪರಮೇಶ್ವರ್ ಯುವ ಸೈನ್ಯ ರಾಜ್ಯಾಧ್ಯಕ್ಷ ನಗುತ ರಂಗನಾಥ್ ಖಂಡಿಸಿ, ಉಗ್ರ ಹೋರಾಟ ಮಾಡುವ ಎಚ್ಚರಿಕೆ ನೀಡಿದ್ದಾರೆ.
ಪಟ್ಟಣದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಕರ್ನಾಟಕ ರಾಜ್ಯದ ಗೃಹ ಮಂತ್ರಿಗಳು ಹಿರಿಯ ಮುತ್ಸದ್ದಿ ದಲಿತ ನಾಯಕ ಕಾಂಗ್ರೆಸ್ ಪಕ್ಷದ ಸರ್ವತೋಮುಖ ಬೆಳವಣಿಗೆಗೆ ಕಾರಣೀಭೂತರಾಗಿರುವುದನ್ನು ಹಾಗೂ ರಾಜ್ಯದಲ್ಲಿ ಅಸಂಖ್ಯಾತ ಅಭಿಮಾನಿಗಳನ್ನು ಹೊಂದಿರುವುದನ್ನು ಸಹಿಸಲಾರದೆ ಕೇಂದ್ರ ಸರ್ಕಾರ ಡಾ. ಜಿ ಪರಮೇಶ್ವರ್ ರವರ ಒಡೆತನದ ಶ್ರೀ ಸಿದ್ಧಾರ್ಥ ಶಿಕ್ಷಣ ಸಂಸ್ಥೆಗಳ ಮೇಲೆ ಕೇಂದ್ರ ಸರ್ಕಾರದ ಅಧೀನದಲ್ಲಿರುವ ಇಡಿ ಐಟಿ ದಾಳಿ ನಡೆಸಿರುವುದು ಖಂಡನೀಯ ಎಂದರು.
ಸಚಿವರ ಏಳ್ಗೆ ಸಂಘಟನೆ ಸಹಿಸಲಾರದ ಕೇಂದ್ರ ಸರ್ಕಾರವು ಇಡಿ ದಾಳಿಯ ಮೂಲಕ ಅವರನ್ನು ಎಣಿಯಲು ಮುಂದಾಗುತ್ತಿರುವ ಕ್ರಮವು ಯಾವುದೇ ಫಲ ನೀಡುವುದಿಲ್ಲ. ಈಗಾಗಲೇ ಕೇಂದ್ರ ಸರ್ಕಾರ ಕಳೆದ ನಾಲ್ಕು ವರ್ಷಗಳ ಹಿಂದೆ ಇಡಿ ದಾಳಿ ನಡೆಸಿ ಬರಗೈಯಲ್ಲಿ ಹೋಗಿರುವುದನ್ನು ಗಮನಿಸಬೇಕು. ಪದೇ ಪದೇ ದಲಿತ ನಾಯಕರಿಗೆ ಕೇಂದ್ರ ಸರ್ಕಾರ ಸುಳ್ಳು ವದಂತಿಗಳು ಹಾಗೂ ಅವರ ಏಳ್ಗೆಯನ್ನು ಸಹಿಸಲಾರದೆ ಅವರ ವರ್ಚಸ್ಸಿಗೆ ಮಸಿ ಬಳಿಯುವ ಕೆಲಸ ಮಾಡುವ ದುರುದ್ದೇಶದಿಂದ ಕೇಂದ್ರ ಸರ್ಕಾರ ಇಂತಹ ಇಡಿ. ಐ ಟಿ ಹಾಗೂ ಸಿಬಿಐ ದಾಳಿಗಳನ್ನು ಸಹಿಸುವುದಿಲ್ಲ ಹಾಗೂ ಅವರನ್ನು ರಾಜಕೀಯವಾಗಿ ಕುಗ್ಗಿಸುವ ದುರುದ್ದೇಶದಿಂದ ಇಂತಹ ಕ್ರಮವನ್ನ ತೀವ್ರವಾಗಿ ಖಂಡಿಸುತ್ತಾ ಇಂತಹ ಘಟನೆಗಳು ಮುರುಕಳಿಸಿದರೆ ಮುಂದೆ ಇಂತಹ ದಾಳಿಗಳು ನಡೆದರೆ ರಾಜ್ಯಾದ್ಯಂತ ಉಗ್ರ ಹೋರಾಟ ನಡೆಸಲಾಗುವುದು ಎಂದರು.